ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಮುಬಾರಕ್ ಅಲಿ, ತಮ್ಮ ಮಗಳನ್ನು ಹಿಂದೂ ಸಂಪ್ರದಾಯದಂತೆ ಹಿಂದೂ ಯುವಕನಿಗೆ ವಿವಾಹ ಮಾಡಿಕೊಟ್ಟಿದ್ದಾರೆ. ಜಾತಿಗಿಂತ ಮನುಷ್ಯತ್ವವೇ ಶ್ರೇಷ್ಠ ಎಂದು ನಂಬಿರುವ ಇವರು, ತಮ್ಮ ಮನೆಯಲ್ಲಿ ಸರ್ವಧರ್ಮಗಳನ್ನು ಪಾಲಿಸುತ್ತಾ ಮಾದರಿಯಾಗಿದ್ದಾರೆ.
ತುಮಕೂರಿನ ನಿವಾಸಿಯಾಗಿರುವ ಮುಬಾರಕ್ ಅಲಿ ಎಂಬವರು ಮಗಳ ಮದುವೆಯನ್ನು ಹಿಂದೂ ಸಂಪ್ರದಾಯದದಂತೆ ಮಾಡಿದ್ದರು. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ಮುಬಾರಕ್ ಅಲಿ, ಹಲವು ವಿಷಯಗಳ ಬಗ್ಗೆ ದೀರ್ಘವಾಗಿ ಮಾತನಾಡಿದ್ದಾರೆ. ಮುಬಾರಕ್ ಅಲಿ ಮಗಳು ಮುಸ್ಕಾನ್ ಮದುವೆ ನಂತ್ರ, ಇದೀಗ ಇವರ ಸಂದರ್ಶನದ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.
25
ತುಮಕೂರಿನ ಸಿದ್ದಗಂಗಾ ಮಠದ
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಕೆಲಸ ಮಾಡುವ ಮುಬಾರಕ್ ಅಲಿ, ತಮ್ಮನ್ನು ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿರ್ಗತಿಕರಿಗೆ ಸಹಾಯ, ಮಕ್ಕಳ ಶಿಕ್ಷಣಕ್ಕೆ ನೆರವು, ಅನಾಥ ಶವಗಳಿಗೆ ಮುಕ್ತಿ ನೀಡುವಂತಹ ಕೆಲಸಗಳಲ್ಲಿ ಮುಬಾರಕ್ ಅಲಿ ತೊಡಗಿಕೊಂಡಿದ್ದಾರೆ. ಮುಬಾರಕ್ ಅಲಿ ಅವರ ಪತ್ನಿ ಹಿಂದೂ ಆಗಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೂ ಮುಬಾರಕ್ ಪತ್ನಿ ಇದುವರೆಗೂ ಬುರ್ಖಾ ಹಾಕಿಲ್ಲ ಮತ್ತು ತಮ್ಮ ಹೆಸರನ್ನು ಸಹ ಬದಲಿಸಿಕೊಂಡಿಲ್ಲ.
35
ಮಗಳ ಮದುವೆ
ಇತ್ತೀಚೆಗೆ ಮಗಳ ಮದುವೆಯನ್ನು ಹಿಂದೂ ಸಂಪ್ರದಾಯದಂತೆಯೇ ಮಾಡಿದ್ದಾರೆ. ಹಿಂದೂ ಹುಡುಗನ ಜೊತೆ ಮಗಳ ಮದುವೆ ಮಾಡಿಸಿರುವ ಮುಬಾರಕ್, ನಾನು ಹುಡುಗನ ಜಾತಿಯನ್ನು ನೋಡಿಲ್ಲ, ಬದಲಾಗಿ ಆತನ ಪ್ರೀತಿ ನೋಡಿದ್ದೇನೆ ಎಂದು ಮುಬಾರಕ್ ಅಲಿ ಹೇಳುತ್ತಾರೆ. ನಾನು ಮುಸ್ಲಿಮನಾಗಿ ಹುಟ್ಟಬೇಕೆಂದು ಯಾವ ದೇವರಿಗೂ ಅರ್ಜಿ ಹಾಕಿರಲಿಲ್ಲ. ಹುಟ್ಟಿದ ಮೇಲೆ ನನಗೆ ಎಲ್ಲಾ ಜಾತಿಗಳು ಇಷ್ಟವಾದವು ಎಬುವುದು ಮುಬಾರಕ್ ಅವರ ಮಾತಾಗಿದೆ.
ನಮ್ಮ ಮನೆಯಲ್ಲಿ ಎಲ್ಲಾ ದೇವರ ಫೋಟೋಗಳಿವೆ. ಶುಕ್ರವಾರದ ಬೆಳಗ್ಗೆ ಸಿದ್ದಗಂಗಾ ಮಠದ ಗದ್ದುಗೆ ದರ್ಶನ ಪಡೆಯುತ್ತೇನೆ. ನಂತರ ಚಾಮುಂಡಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಧ್ಯಾಹ್ನ ನಮಾಜ್‌ಗೆ ಹೋಗುತ್ತೇನೆ. ನನ್ನ ಬದುಕಿಗೆ ಎಂದಿಗೂ ಜಾತಿ ಅಡ್ಡಿಯಾಗಿಲ್ಲ. ಚಿಕ್ಕ ವಯಸ್ಸಿನಿಂದಲೂ ಜಾತಿಗಿಂತ ಮನುಷ್ಯತ್ವವೇ ಮುಖ್ಯ ಎನ್ನುವ ನಂಬಿಕೆ ನನ್ನದು ಅಂತಾರೆ.
ಇವತ್ತು ಸಹ ನಾನು ಊಟ ಮಾಡುವ ರೊಟ್ಟಿಯನ್ನು ಮೊದಲಿಗೆ ನಾಲ್ಕು ಭಾಗ ಮಾಡುತ್ತೇನೆ. ಊಟ ಮಾಡುವಾಗ ಯಾರಾದ್ರು ಬಂದ್ರೆ ಕೊಡೋಣ ಅಂತ ನಾಲ್ಕು ತುಂಡು ಮಾಡಿಕೊಳ್ಳುತ್ತೇನೆ. ಪ್ರತಿದಿನ ಸಿದ್ದಗಂಗಾ ಮಠದಲ್ಲಿನ ಎಲ್ಲಾ ಗದ್ದುಗೆಗಳ ದರ್ಶನ ಮಾಡ್ತೀನಿ. ಧರ್ಮಸ್ಥಳಕ್ಕೆ ಹೋಗಿ ಮುಡಿ ಕೊಟ್ಟಿದ್ದೇನೆ. ಮುಂದೆ ಕಾಶಿ, ಮಂತ್ರಾಲಯ ಮತ್ತು ಹಜ್ ಯಾತ್ರೆ ಮಾಡಬೇಕೆಂಬ ಆಸೆ ಇದೆ ಎಂದು ಮುಬಾರಕ್ ಅಲಿ ಹೇಳಿದ್ದಾರೆ.