ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ಪವಿತ್ರ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮದುಮಗ ಮತ್ತು ಆತನ ಬೆಂಬಲಿಗರು ದೈವಕ್ಕೆ ಅವಮಾನ ಮಾಡಿದ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಎಮ್ಮೆಮಾಡು ಗ್ರಾಮದಲ್ಲಿ ಗ್ರಾಮದ ಯುವಕರು ಎರಡು ದಿನಗಳ ಹಿಂದೆ ಮದುಮಗನೊಬ್ಬನಿಗೆ ದೈವದ ವೇಷ ತೊಡಿಸಿ ಉಳಿದವರು ದೇವರನ್ನು ಹೀಯಾಳಿಸಿ ಮೆರವಣಿಗೆ ನಡೆಸಿರುವ ಫೋಟೋ ವೈರಲ್ ಆಗಿದೆ.
24
ಅನ್ಯಧರ್ಮಿಯರಿಂದ ತುಳುನಾಡು ದೈವಕ್ಕೆ ಅಪಮಾನ?
ಪೂರ್ವಜರ ನಂಬಿಕೆ ಹಾಗೂ ಸಂಸ್ಕೃತಿ, ಧರ್ಮವನ್ನು ಅಪಹಾಸ್ಯ ಅವಮಾನ ಮಾಡಿದ್ದಾರೆಂದು ಆರೋಪ ಕೇಳಿಬಂದಿದ್ದು, ದೈವ ವೇಷದಲ್ಲಿ ಕೆಟ್ಟದಾಗಿ ವರ್ತಿಸಿ ಅವಮಾನ ಮಾಡಿದ ಹಿನ್ನೆಲೆ ಕಿಡಿಗೇಡಿಗಳ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಿಂದೂ ಪರ ಸಂಘಟನೆ ಪ್ರಮುಖರು ದೂರು ದಾಖಲಿಸಿದ್ದಾರೆ.
34
ದೈವಕ್ಕೆ ಅಪಮಾನ: ಎಫ್‌ಐಆರ್ ದಾಖಲು
ಎಮ್ಮೆಮಾಡು ಗ್ರಾಮದ ಯುವಕರಾದ ಅಬ್ದುಲ್ ರಾಶಿದ್, ಹನೀಫ್, ಲತೀಫ್, ಮೊಹಮ್ಮದ್ ಪೈಸಲ್ ,ಶಕೀರ್ ಹಾಗೂ ಬಶೀರ್ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಶನಿವಾರ ರಾತ್ರಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಎಳೆದೊಯ್ದು ಅವಮಾನ ಮಾಡಿರುವ ಯುವಕರು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಿಂದೂಗಳು, ಕೊರಗಜ್ಜನ ಭಕ್ತರ ಆಕ್ರೋಶಕ್ಕೆ ಗುರಿಯಾಗಿದೆ. ಇತ್ತ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೈವಾರಾಧಕರ ಸಂಘ ಮಡಿಕೇರಿ ಡಿವೈಎಸ್‌ಪಿಗೂ ದೂರು ಸಲ್ಲಿಸಿದೆ
ನಮ್ಮ ದೈವಗಳಿಗೆ ಪದೇಪದೆ ಅಪಮಾನವಾದ್ರೆ ಸುಮ್ನಿರೋಲ್ಲ: ಭಕ್ತರು ಎಚ್ಚರಿಕೆ
ನಮ್ಮ ದೈವಗಳಿಗೆ ಪದೇ ಪದೇ ಅಪಮಾನ ಮಾಡಲಾಗುತ್ತಿದೆ. ಅಪಮಾನವಾದಾಗ ನಾವು ದೂರು ಕೊಡುತ್ತೇವೆ ಬಳಿಕ ಕಿಡಿಗೇಡಿಗಳ ಆ ಕ್ಷಣಕ್ಕೆ ಕ್ಷಮೆ ಕೇಳುತ್ತಾರೆ. ನಂತರ ಇದೇ ರೀತಿ ಅಪಮಾನ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಕೊನೆ ಎಂದು. ಇನ್ನೊಮ್ಮೆ ಕೃತ್ಯವೆಸಗದ ಹಾಗೆ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು. ಮುಂದೆ ಈ ರೀತಿ ಕೃತ್ಯ ನಡೆದರೆ ತೀವ್ರ ಹೋರಾಟ ನಡೆಸಬೇಕಾಗುತ್ತೆ ಎಂದು ಎಚ್ಚರಿಸಿದರು.