Belagavi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀ, ಹಾಜರಿದ್ದ ಡಿಕೆ ಶಿವಕುಮಾರ್!

Published : Jan 17, 2025, 10:36 PM IST

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಆಸ್ಪತ್ರೆಯಲ್ಲಿ ಗಣ್ಯರು ಆರೋಗ್ಯ ವಿಚಾರಿಸಿದ್ದಾರೆ. ಸುತ್ತೂರು ಮಠಾಧೀಶರು, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಡಿಕೆ ಶಿವಕುಮಾರ್ ಭೇಟಿ ನೀಡಿ ಶೀಘ್ರ ಗುಣಮುಖವಾಗಲೆಂದು ಹಾರೈಸಿದರು. ಸಂಕ್ರಾಂತಿಯಂದು ಸಂಭವಿಸಿದ ಕಾರು ಅಪಘಾತದಲ್ಲಿ ಹೆಬ್ಬಾಳ್ಕರ್ ಗಾಯಗೊಂಡಿದ್ದರು.

PREV
16
Belagavi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀ, ಹಾಜರಿದ್ದ ಡಿಕೆ ಶಿವಕುಮಾರ್!

ಸಂಕ್ರಾಂತಿಯ ದಿನದಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಕಾರು ಅಪಘಾತವಾಗಿತ್ತು. ಈ ವೇಳೆ ಬೆನ್ನುಮೂಳೆಯ ಮುರಿತಕ್ಕೆ ಒಳಗಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ


 

26

ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಂದು ಗಣ್ಯರು ಆರೋಗ್ಯ ವಿಚಾರಿಸಿದ್ದಾರೆ. ಮೈಸೂರು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭೇಟಿ ನೀಡಿ ಕ್ಷೇಮ ವಿಚಾರಿಸಿದರು.

36

ಈ ವೇಳೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಡಿಸಿಎಂ ಡಿಕೆ ಶಿವಕುಮಾರ್‌ ಕೂಡ ಹಾಜರಿದ್ದರು. ಬೇಗ ಗುಣಮುಖರಾಗಲೆಂದು ಸಚಿವೆ ಹೆಬ್ಬಾಳ್ಕರ್‌ಗೆ ಗಣ್ಯರು ಹಾರೈಸಿದ್ದಾರೆ.

46

ಈ ವೇಳೆ ಆಸ್ಪತ್ರೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಕೂಡ ಉಪಸ್ಥಿತಿರಿದ್ದರು. ಅವರೊಂದಿಗೂ ಸುತ್ತೂರು ಶ್ರೀಗಳು ಮಾತನಾಡಿದ್ದಾರೆ.

56

ಸಂಕ್ರಾಂತಿ ದಿನದಂದು ಮುಂಜಾನೆ 5 ಗಂಟೆ ಸುಮಾರಿಗೆ ಅಧಿಕೃತ ಸರ್ಕಾರಿ ಕಾರ್‌ನಲ್ಲಿ ಪ್ರಯಾಣ ಮಾಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಕಾರು ಅಪಘಾತಕ್ಕೆ ಈಡಾಗಿತ್ತು. ಕ್ಯಾಂಟರ್‌ನ ಅಜಾಗರೂಕತೆ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿತ್ತು.

Belagavi: ಸಂಕ್ರಮಣದ ಆಪತ್ತಿನಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಕಾರು ಅಪಘಾತ ಸ್ಥಳದಲ್ಲಿ ವಾಮಾಚಾರದ ಅನುಮಾನ

66

ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಬೆನ್ನು ಮೂಳೆಯ ಎಲ್‌1 ಹಾಗೂ ಎಲ್‌4ನಲ್ಲಿ ಸಣ್ಣ ಪ್ರಮಾಣದ ಹೇರ್‌ಲೈನ್‌ ಫ್ರಾಕ್ಚರ್‌ ಆಗಿದ್ದಾಗಿ ವೈದ್ಯರು ತಿಳಿಸಿದ್ದು, ಮೂರು ವಾರಗಳ ಕಾಲ ಬೆಡ್‌ರೆಸ್ಟ್‌ಗೆ ಸೂಚಿಸಿದ್ದಾರೆ.

Belagavi: ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಗ್ಯ ವಿಚಾರಿಸಿದ ಪತಿ ರವೀಂದ್ರ; ಚೇತರಿಕೆಗೆ ಹಾರೈಸಿದ ಸಿಟಿ ರವಿ!

Read more Photos on
click me!

Recommended Stories