Mandya: ಹೋಟೆಲ್‌ ಟಾಯ್ಲೆಟ್‌ನಲ್ಲಿ ಮೊಬೈಲಿಟ್ಟು ವಿಡಿಯೋ ರೆಕಾರ್ಡಿಂಗ್: ಸಪ್ಲೈಯರ್ ಬಂಧನ

Published : Mar 15, 2026, 07:36 AM IST

ಶ್ರೀರಂಗಪಟ್ಟಣದ ಶರವಣ ಹೋಟೆಲ್‌ನಲ್ಲಿ ಸಪ್ಲೈಯರ್ ಹರೀಶ್, ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ. ಹೋಟೆಲ್‌ಗೆ ಬಂದ ಮಹಿಳೆಯೊಬ್ಬರ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV
14
ವಿಡಿಯೋ ರೆಕಾರ್ಡಿಂಗ್

ಖಾಸಗಿ ಹೋಟೆಲ್‌ನ ಸಪ್ಲೈಯರ್ ಶೌಚಾಯಲದಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಿರುವ ಪ್ರಕರಣ ಸಂಬಂಧ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

24
ಶರವಣ ಹೋಟೆಲ್‌

ರಾಜಾಸ್ಥಾನ ಮೂಲದ ಹರೀಶ್ ಪಟ್ಟಣದ ಗಂಜಾಂ ರಸ್ತೆಯ ಹೈವೆ ಸೇತುವೆ ಬಳಿ ಇರುವ ಶರವಣ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಪುರುಷರು ಮತ್ತು ಮಹಿಳಾ ಶೌಚಾಲಯದ ನಡುವೆ ಇರುವ ಗೋಡೆ ಮೇಲೆ ಮೊಬೈಲ್‌ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

44
ನ್ಯಾಯಾಂಗ ಬಂಧನ

ನಂತರ ಮಾಹಿತಿ ತಿಳಿದ ಪೊಲೀಸರು ಹೋಟೆಲ್‌ಗೆ ಆಗಮಿಸಿ ಶೌಚಾಲಯದ ಬಳಿ ಮೊಬೈಲ್ ಇಟ್ಟ ವ್ಯಕ್ತಿಯನ್ನು ವಿಚಾರಿಸಿದಾಗ ನಿತ್ಯ ಇಂತಹ ಕೆಲಸ ಮಾಡಿರುವುದು ಬಹಿರಂಗವಾಗಿದೆ. ನಂತರ ಪೋಲಿಸರು ಆರೋಪಿ ಸಪ್ಲೈಯರ್ ಹರೀಶ್ ಹಾಗೂ ಆತನ ಮೊಬೈಲ್ ಅನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read more Photos on
click me!

Recommended Stories