Bengaluru: ಸಿಪಿಪಿ ಸಹಯೋಗದಲ್ಲಿ ಬಿಬಿಎಂಪಿಯಿಂದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ

Published : May 21, 2023, 08:31 PM IST

ಸಿಪಿಪಿ (ನಾಗರಿಕ ಭಾಗವಹಿಸುವಿಕೆ ಕಾರ್ಯಕ್ರಮ) ಸಹಯೋಗದಲ್ಲಿ ಬಿಬಿಎಂಪಿಯು ನಿನ್ನೆ (ಮೇ.20) ವಿಶೇಷ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದ್ದು, ಕಾರ್ಯಕ್ರಮವು ತಲಘಟ್ಟಪುರದ ವಕೀಲ ಗಾರ್ಡನ್ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. 

PREV
110
Bengaluru: ಸಿಪಿಪಿ ಸಹಯೋಗದಲ್ಲಿ ಬಿಬಿಎಂಪಿಯಿಂದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ

ಬೆಂಗಳೂರು (ಮೇ.21): ಸಿಪಿಪಿ (ನಾಗರಿಕ ಭಾಗವಹಿಸುವಿಕೆ ಕಾರ್ಯಕ್ರಮ) ಸಹಯೋಗದಲ್ಲಿ ಬಿಬಿಎಂಪಿಯು ನಿನ್ನೆ (ಮೇ.20) ವಿಶೇಷ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತ್ತು. 

210

ಈ ಆಂದೋಲನದಲ್ಲಿ ಬಸ್ ನಿಲ್ದಾಣದ ಸ್ವಚ್ಛತೆ, ಅಕ್ರಮ ಫ್ಲೆಕ್ಸ್, ಬ್ಯಾನರ್, ಕಸ ತೆಗೆಯುವುದು ಮತ್ತು ಗೋಡೆಗಳಿಗೆ ಬಣ್ಣ ಬಳಿಯುವುದು. ಈ ಕಾರ್ಯಕ್ರಮದಲ್ಲಿ ಮಕ್ಕಳು ಕೂಡ ಸಕ್ರಿಯವಾಗಿ ಭಾಗವಹಿಸಲು ಬಿಬಿಎಂಪಿಯು ಕೋರಿತ್ತು. 

310

ಈ ಕಾರ್ಯಕ್ರಮವು ತಲಘಟ್ಟಪುರದ ವಕೀಲ ಗಾರ್ಡನ್ ಸಿಟಿ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 7.00 ರಿಂದ 10.00 ರವರೆಗೆ ನಡೆದಿತ್ತು. 

410

ಈ ಕಾರ್ಯಕ್ರಮದಲ್ಲಿ ದಯವಿಟ್ಟು ನಿಮ್ಮ ಸ್ವಂತ ನೀರಿನ ಬಾಟಲಿಗಳನ್ನು ತನ್ನಿ ಹಾಗೂ ನಿಮ್ಮ ಸ್ವಂತ ಕೈಗವಸುಗಳು, ಮುಖವಾಡ, ಬಣ್ಣದ ಬ್ರಷ್‌ಗಳು ಸೇರಿದಂತೆ ಸ್ವಚ್ಛತೆಗೆ ಬೇಕಾಗುವಂತಹ ಇತ್ಯಾದಿ ವಸ್ತುಗಳನ್ನು ನೀವು ತರಬಹುದು ಎಂದು ಬಿಬಿಎಂಪಿಯು ಸೂಚನೆ ಹೊರಡಿಸಿತ್ತು. 

510

ಇನ್ನು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ದಯವಿಟ್ಟು ಬಿಬಿಎಂಪಿಯೊಂದಿಗೆ ಕೈ ಜೋಡಿಸಿ ಎಂದು ತಿಳಿಸಿತ್ತು. ಸ್ವಚ್ಛ ಪರಿಸರ ಸ್ವಚ್ಛ ಹೆಮ್ಮಿಗೆಪುರ ವಾರ್ಡ್‌ ಎಂಬ ಹೆಸರಿನಲ್ಲಿ ಕಾರ್ಯಕ್ರಮವು ನಡೆದಿತ್ತು. ವಿಶೇಷವಾಗಿ ಈ ತೀವ್ರ ಶುಚಿಗೊಳಿಸುವಿಕೆಯ ಕಾರ್ಯಕ್ರಮ ಒಂದು ವರ್ಷ ಪೂರೈಸಿದೆ.

610

ಪಾಲಿಕೆ ಅರಣ್ಯ ಘಟಕದಿಂದ ಉಚಿತ ವಿವಿಧ ಸಸಿ ವಿತರಣೆ: ಮಳೆಗಾಲ ಆರಂಭಗೊಳ್ಳುತ್ತಿರುವುದರಿಂದ ಬಿಬಿಎಂಪಿ ಅರಣ್ಯ ಘಟಕ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಉಚಿತವಾಗಿ ವಿವಿಧ ಜಾತಿಯ ಸಸಿ ವಿತರಿಸಲು ತೀರ್ಮಾನಿಸಿದೆ.

710

ಜೂನ್‌ 5ರ ವಿಶ್ವ ಪರಿಸರ ದಿನಾಚರಣೆ ಹಾಗೂ ಮಳೆಗಾಲ ಅರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹಸಿರೀಕರಣ ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಹಾಗೂ ವಿವಿಧ ಸಂಘ- ಸಂಸ್ಥೆಗಳಿಗೆ ಬಿಬಿಎಂಪಿಯ ಅರಣ್ಯ ಘಟಕ ಸಸ್ಯ ಕ್ಷೇತ್ರದಲ್ಲಿ ಬೆಳೆಸಿದ ಸಸಿಗಳನ್ನು ಉಚಿತವಾಗಿ ನೀಡಲಿದೆ.

810

ಆಸಕ್ತರು ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿ ಉಚಿತವಾಗಿ ಸಸಿಗಳನ್ನು ಪಡೆದು ಸಸಿಗಳನ್ನು ನೆಟ್ಟು ಪೋಷಣೆ ಮಾಡುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

910

ಬೊಮ್ಮನಹಳ್ಳಿ ವಲಯದ ಕೂಡ್ಲು ಸಸ್ಯ ಕ್ಷೇತ್ರದಲ್ಲಿ ಸಸಿಗಳನ್ನು ಪಡೆಯಲು ಉಪ ಅರಣ್ಯಾಧಿಕಾರಿ ಎಚ್‌.ಆರ್‌.ಹರೀಶ್‌ (9480685039), ಯಲಹಂಕದ ಅಟ್ಟೂರು ಸಸ್ಯ ಕ್ಷೇತ್ರದಲ್ಲಿ ವಲಯ ಅರಣ್ಯಾಧಿಕಾರಿ ವಿ.ಚಂದ್ರಪ್ಪ (9164042566).

1010

ಆರ್‌ಆರ್‌ ನಗರದ ಜ್ಞಾನಭಾರತಿ ಆವರಣದ ಸಸ್ಯ ಕ್ಷೇತ್ರದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಪಿ.ಮುತ್ತುರಾಜ್‌ (9483139438) ಹಾಗೂ ಮಹದೇವಪುರದ ಕೆಂಪಾಪುರ ಸಸ್ಯ ಕ್ಷೇತ್ರದಲ್ಲಿ ಸಸಿಗಳನ್ನು ಪಡೆಯಲು ಉಪ ವಲಯ ಅರಣ್ಯಾಧಿಕಾರಿ ಎ.ಸುದರ್ಶನ್‌ (9480685541) ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Read more Photos on
click me!

Recommended Stories