Tumakuru: ತಿಪಟೂರಿನ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

Published : May 14, 2023, 12:53 PM IST

ತುಮಕೂರು(ಮೇ.14): ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ‌‌‌.ಕೆ ಶಿವಕುಮಾರ್ ಇಂದು(ಭಾನುವಾರ) ಭೇಟಿ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿಗೆ ಮಠಕ್ಕೆ ಡಿ‌‌‌.ಕೆ ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ.

PREV
14
Tumakuru: ತಿಪಟೂರಿನ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಇದೇ ವೇಳೆ ಕರಿಬಸವ ಶ್ರೀಗಳ ಆಶೀರ್ವಾದವನ್ನು ಡಿ‌‌‌.ಕೆ ಶಿವಕುಮಾರ್ ಪಡೆದಿದ್ದಾರೆ. ಬಳಿಕ ಕರಿಬಸವ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ. 

24

ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ  ಐಶ್ವರ್ಯ, ಅಳಿಯ ಅಮಾರ್ಥ್ಯ ಸಿದ್ದಾರ್ಥ್, ಪುತ್ರಿ ಆಭರಣ ಹಾಗೂ ಸಂಸದ ಡಿ.ಕೆ ಸುರೇಶ್ ಸೇರಿದಂತೆ ಕುಟುಂಬ ಸಮೇತ ಆಗಮಿಸಿದ್ದಾರೆ.  

34

ಸಂಸಾರ ಸಮೇತ ಮಠಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರನ್ನು ತಿಪಟೂರಿನ ನೂತನ ಶಾಸಕ ಷಡಕ್ಷರಿ ಹಾರ ಹಾಕಿ ಬರಮಾಡಿಕೊಂಡಿದ್ದಾರೆ. 

44

ಬೆಂಗಳೂರಿನ ಖಾಸಗಿ ಇಂದು ಸಂಜೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ರಾಜ್ಯದ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬುದಕ್ಕೆ ಇಂದೇ ಉತ್ತರ ಸಿಗುವ ಸಾಧ್ಯತೆ ಇದೆ. ಡಿ.ಕೆ. ಶಿವಕುಮಾರ್‌ ಸಿಎಂ ಆಗ್ತಾರಾ?, ಸಿದ್ದರಾಮಯ್ಯ ಸಿಎಂ ಆಗ್ತಾರಾ ಎಂಬುದಕ್ಕೆ ಉತ್ತರ ಸಿಗಲಿದೆ. 

Read more Photos on
click me!

Recommended Stories