ಲಾಕ್‌ಡೌನ್‌ ನಿಯಮಗಳಡಿ ಸರಳ ವಿವಾಹ, ಮಾಸ್ಕ್ ಧರಿಸಿ ಮದುವೆ

First Published | Apr 28, 2020, 4:33 PM IST

ಉಡುಪಿ ಪಡುಬಿದ್ರಿಯ ಉಚ್ಚಿಲ ಬಡಾಗ್ರಾಮದಲ್ಲಿ ಲಾಕ್‌ಡೌನ್‌ ನಿಯಮಗಳಡಿ ಕೇವಲ 20 ಜನರಷ್ಟೇ ಭಾಗವಹಿಸಿದ್ದ ಸರಳ ಮದುವೆ ಸೋಮವಾರ ನಡೆಯಿತು. ವಧೂ ವರ, ಪುರೋಹಿತರೂ ಮಾಸ್ಕ್ ಧರಿಸಿದ್ದರು. ಇಲ್ಲಿದೆ ಫೋಟೋಸ್

ಉಚ್ಚಿಲದ ಲಕ್ಷ್ಮೀ- ಶೇಖರ ದಂಪತಿ ಪುತ್ರಿ ಪವಿತ್ರಾ ಮತ್ತು ಕಾರ್ಕಳ ದಿ. ರಾಮ ದೇವಾಡಿಗ ಅವರ ಪುತ್ರ ಸಂತೋಷ್‌ ಅವರ ಮದುವೆ ಏ.27ರಂದೇ ನಡೆಯಬೇಕಿತ್ತು.
undefined
ಆದರೆ ಲಾಕ್‌ಡೌನ್‌ನಿಂದಾಗಿ ಮದುವೆಯನ್ನು ಒಂದು ತಿಂಗಳು ಮುಂದೂಡಲಾಗಿತ್ತು.
undefined

Latest Videos


ತಿಂಗಳು ಕಳೆದರೂ ಲಾಕ್‌ಡೌನ್‌ ತೆರವಾಗಿಲ್ಲ, ಇನ್ನೊಮ್ಮೆ ಮದುವೆಯನ್ನು ಮುಂದೂಡುವುದು ಬೇಡ ಎಂದು ಎರಡೂ ಮನೆಯವರು ಸರಳ ಮದುವೆಗೆ ಒಪ್ಪಿದರು.ಅದರಂತೆ ವಧುವಿನ ಮನೆಯಲ್ಲೇ ಕೇವಲ ಅರ್ಧ ಗಂಟೆಯಲ್ಲಿ ಮದುವೆ ಮುಗಿಯಿತು.
undefined
ವರನ ಕಡೆಯವರು ಕಾರ್ಕಳದಿಂದ ಬರುವಾಗ ಪೊಲೀಸರು ತಡೆದು ಅವರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿ, ನಿಯಮ ಪಾಲಿಸುವಂತೆ ಸೂಚಿಸಿದ್ದರು.
undefined
ಅದರಂತೆ ಮದುವೆಗೆ ಮೊದಲು ಪ್ರತಿಯೊಬ್ಬರಿಗೂ ಸ್ಯಾನಿಟೈಸರ್‌ ನೀಡಿ, ಸಾಮಾಜಿಕ ಅಂತರ ಕಾಯ್ದುಕೊಂಡು, ವಧು, ವರ, ಪುರೋಹಿತರೂ ಸೇರಿ ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿ, ಮದುವೆ - ಊಟೋಪಚಾರಗಳನ್ನು ನಡೆಸಲಾಯಿತು.
undefined
click me!