ಆಗ ಕೇರಳ ಎಷ್ಟೇ ಬೇಡಿದ್ರೂ ಗಡಿ ತೆರೀಲಿಲ್ಲ, ಈಗ ಬೇಕಂದ್ರೂ ಪಿಣರಾಯ್ ಬಿಡ್ತಿಲ್ಲ..!

First Published Apr 28, 2020, 4:11 PM IST

ವೈರಸ್ ಹರಡಿದ ನಂತರ ಕರ್ನಾಟಕ ಹಾಗೂ ಕೇರಳದ ನಡುವೆ ನಡೆದ ಗಡಿ ಕಲಹಗಳು ಎಲ್ಲರಿಗೂ ಗೊತ್ತಿದೆ. ರೋಗಿಗಳಿಗೆ ಆಸ್ಪತ್ರೆ ಇಲ್ಲದೆ, ದಿನಸಿ ಸಾಮಾಗ್ರಿ ಸಾಗಿಸಲಾಗದೆ ಪ್ಲೀಸ್ ಗಡಿ ಓಪನ್ ಮಾಡಿ ಎಂದು ಕೇರಳ ಅಂಗಲಾಚಿತ್ತು. ಆದರೆ ಈಗ ದಕ್ಷಿಣ ಕನ್ನಡ ಬೇಕೂ ಎಂದ್ರೂ ಕೇರಳ ಸಿಎಂ ಪಿಣರಾಯ್ ಗಡಿ ಖಂಡಿತಾ ತೆರೆಯೋಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಇಲ್ಲಿವೆ ಫೋಟೋಸ್.

ಕೊರೋನಾ ವೈರಸ್ ಪ್ರಕರಣ ಕೇರಳದಲ್ಲಿಹೆಚ್ಚಿದ ಸಂದರ್ಭ ಕೊಡಗಿನಲ್ಲಿಪೊಲೀಸರು, ಸ್ಥಳೀಯರು ಸೇರಿ ಚೆಕ್‌ಪೋಸ್ಟ್‌ಗಳಲ್ಲಿ ರಸ್ತೆಗಳನ್ನು ಬ್ಲಾಕ್ ಮಾಡಿರುವುದು
undefined
ಶಾಸಕ ವೇದವ್ಯಾಸ್ ಕಾಮತ್ ಅವರೂ ಕೇರಳ ಕರ್ನಾಟಕ ಗಡಿ ತೆರೆಯಬಾರದೆಂದು ಒತ್ತಾಯಿಸಿದ್ದರು. ದಕ್ಷಿಣ ಕನ್ನಡದ ಸುರಕ್ಷತಾ ದೃಷ್ಟಿಯಿಂದ ಇಂತಹದೊಂದು ನಿರ್ಧಾರ ಮಾಡಲಾಗಿತ್ತು.
undefined
ಕಾಸರಗೋಡಿನ ಎಷ್ಟೋ ಜನ ರೋಗಿಗಳು ಮಂಗಳೂರಿಗೆ ಚಿಕಿತ್ಸೆ ಅಗತ್ಯಗಳಿಗಾಗಿ ಪ್ರಯಾಣ ಮಾಡಲಾಗದೆ ಇದ್ದಾಗ ಕೇರಳ ಸಿಎಂ ಪ್ರಧಾನಿಗೆ ಪತ್ರ ಬರೆದಿದ್ದರು.
undefined
ದಿನ ನಿತ್ಯದ ವಸ್ತುಗಳನ್ನು ತರುವುದಕ್ಕೆ ಹಾಗೂ ತುರ್ತು ಅಗತ್ಯಗಳಿಗೆ ಗಡಿ ತೆರೆಯಬೇಕು ಎಂದು ವಿನಂತಿಸಿಕೊಂಡಿದ್ದರು. ಕೇಂದ್ರ ಸೂಚನೆ ನೀಡಿದರೂ, ಗಡಿ ವಿಚಾರದಲ್ಲಿ ಕೇರಳಕ್ಕೆ ಕರ್ನಾಟಕದಿಂದ ಸಹಕಾರ ಸಿಕ್ಕಿರಲಿಲ್ಲ.
undefined
ಸಂಸದ ನಳಿನ್ ಕಟೀಲ್ ಅವರೂ ಗಡಿ ತೆರೆಯುವುದನ್ನು ವಿರೋಧಿಸಿದ್ದರು. ದಕ್ಷಿಣ ಕನ್ನಡದ ಎಲ್ಲ ಜನ ಪ್ರತಿನಿಧಿಗಳೂ ಗಡಿ ತೆರೆಯಬಾರದೆಂದು ಒಮ್ಮತದ ನಿಲುವಿಗೆ ಬಂದಿದ್ದರು.
undefined
ಒಬ್ಬ ಮನುಷ್ಯನಷ್ಟು ಎತ್ತರಕ್ಕೆ ಮಣ್ಣು ಹಾಕಿ ವಾಹನಗಳು ಬರದಂತೆ ರಸ್ತೆ ಬ್ಲಾಕ್ ಮಾಡಿರುವುದು
undefined
ಕೇರಳದೊಂದಿಗೆ ಮಡಿಕೇರಿ ಸಂಪರ್ಕದ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆದರೆ ಈಗ ಕೇರಳದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು, ದಕ್ಷಿಣ ಕನ್ನಡದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ಹಾಗೂ ತಮಿಳುನಾಡಿದ ಜೊತೆಗಿನ ಗಡಿ ಮುಚ್ಚಲು ಕೇರಳ ಸಿಎಂ ಪಿಣರಾಯ್ ವಿಜಯನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
undefined
click me!