ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನೂನತ ಮನೆ ಗೃಹಪ್ರವೇಶ ವಿಚಾರ ಭಾರೀ ಸುದ್ದಿ ಆಗ್ತಿದೆ. ಗಣೇಶ ಹಬ್ಬದ ದಿನ ಮಾಜಿ ಸಿಎಂ ತಮ್ಮ ಕನಸಿನ ಮನೆ ಪ್ರವೇಶ ಮಾಡಿದ್ದಾರೆ. ಹೊಸ ಅಪ್‌ಡೇಟ್ಸ್ ಏನಂದರೆ ಗೃಹಪ್ರವೇಶದ ಪೂಜಾ ಕೈಂಕರ್ಯ ನಡೆಸಿದ್ದು ಪ್ರಸಿದ್ಧ ವಿಧ್ವಾಂಸರು! ಕಾರ್ಯಕ್ರಮದ Exclusive Photos ಇಲ್ಲಿದೆ.
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹುದಿನಗಳ ಕನಸಿನ ನಿವಾಸ ಪೂರ್ಣಗೊಂಡು ಗೃಹಪ್ರವೇಶ ಆಗಿದೆ. ಗಣೇಶ ಹಬ್ಬದ ದಿನ ಅತ್ಯಂತ ಸರಳ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿದೆ. ಮೈಸೂರಿನ ಪ್ರತಿಷ್ಠಿತ ಕುವೆಂಪುನಗರದಲ್ಲಿ ಸುಮಾರು 10 ರಿಂದ 12 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಭವ್ಯ ನಿವಾಸಕ್ಕೆ ಗಣೇಶ ಚತುರ್ಥಿಯ ಶುಭ ಗಳಿಗೆಯಲ್ಲಿ ಕುಟುಂಬ ಸಮೇತರಾಗಿ ಪ್ರವೇಶಿಸಿದ್ದಾರೆ.
26
ವಿಶ್ವಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ಪೂಜಾ ವಿಧಾನ
ಗೃಹಪ್ರವೇಶದಲ್ಲಿ ಎಲ್ಲರ ಗಮನ ಸೆಳೆದ ಪ್ರಮುಖ ಅಂಶವೆಂದರೆ.. ಪೂಜಾ ಕೈಂಕರ್ಯಗಳು ಸಂಪೂರ್ಣ ವೈದಿಕ ಪರಂಪರೆಯಂತೆ ನಡೆದಿವೆ. ಬೆಂಗಳೂರಿನ ಸುಪ್ರಸಿದ್ಧ ಮಾಧ್ವ ಪರಂಪರೆಯ ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಸಿದ್ಧ ವಿದ್ವಾಂಸರಾದ ವಿಶ್ವಮೂರ್ತಿ ಬಡೆಕ್ಕಿಲ್ಲಾಯ ನೇತೃತ್ವದಲ್ಲಿ ಗೃಹಪ್ರವೇಶ ನಡೆಯಿತು.
36
ಪ್ರಸಿದ್ಧ ವೈದಿಕ ಮನೆತನ
ಕರಾವಳಿ ಕರ್ನಾಟಕದ (ದಕ್ಷಿಣ ಕನ್ನಡ, ಉಡುಪಿ) ಹಾಗೂ ಕಾಸರಗೋಡು ಭಾಗದ ಶಿವಳ್ಳಿ/ಹವ್ಯಕ ಬ್ರಾಹ್ಮಣ ಪರಂಪರೆಯಲ್ಲಿ ‘ಬಡೆಕ್ಕಿಲ್ಲಾಯ’ ಮನೆತನ ಅತ್ಯಂತ ಗೌರವಾನ್ವಿತ ಹಾಗೂ ಪ್ರಸಿದ್ಧ ವೈದಿಕ ಮನೆತನವಾಗಿದೆ. ಇಂತಹ ಪ್ರಸಿದ್ಧ ವಿದ್ವಾಂಸರ ಮಾರ್ಗದರ್ಶನದಲ್ಲಿ ನೂತನ ಮನೆಯ ಪ್ರವೇಶ ಆಗಿದೆ. ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಶಾಂತಿ ಹಾಗೂ ಪೂರ್ಣಾಹುತಿಯಂತಹ ಪೂಜೆಗಳು ಶ್ರದ್ಧಾ-ಭಕ್ತಿಯಿಂದ ನಡೆದವು.
ಹೊಸ ಮನೆಯ ಹೊಸ್ತಿಲು ತುಳಿಯುವ ಮುನ್ನ ಹಿಂದೂ ಸಂಪ್ರದಾಯದಂತೆ ಮನೆಯೊಳಗೆ ಹಸು ಮತ್ತು ಕರುವನ್ನು ಕರೆತಂದು ಭಕ್ತಿಯಿಂದ ಗೋ ಪೂಜೆ ನೆರವೇರಿಸಲಾಗಿದೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಪೂರೈಸಿದರು.
56
ಅಪರೂಪದ ದೃಶ್ಯಗಳು ವೈರಲ್
ವಿಶೇಷವಾಗಿ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಮಡಿ ವಸ್ತ್ರ ಧರಿಸಿ, ಕೈಯಲ್ಲಿ ಮಹಾಲಕ್ಷ್ಮಿ ದೇವಿಯ ಭಾವಚಿತ್ರವನ್ನು ಹಿಡಿದುಕೊಂಡು ಮನೆಯೊಳಗೆ ಪ್ರವೇಶಿಸುತ್ತಿರುವ ಅಪರೂಪದ ದೃಶ್ಯಗಳು ವೈರಲ್ ಆಗಿವೆ. ಈ ವೇಳೆ ತಾಯಿ ಪಾರ್ವತಿ ಯತೀಂದ್ರ ಜೊತೆಯಲ್ಲಿದ್ದರು.
66
ರಾಜಕೀಯ ಗಣ್ಯರಿಗೆ ನೋ ಎಂಟ್ರಿ
ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ, ರಾಜ್ಯದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ಆದರೆ ಅವರ ನೂತನ ಮನೆಯ ಪ್ರವೇಶಕ್ಕೆ ಯಾವುದೇ ರಾಜಕೀಯ ನಾಯಕರಿಗೆ ಎಂಟ್ರಿ ಇರಲಿಲ್ಲ. ಕಾರ್ಯಕ್ರಮವನ್ನು ಸಂಪೂರ್ಣ ಖಾಸಗಿಯಾಗಿ ಇರಿಸಿತ್ತು. ಯಾವುದೇ ರಾಜಕೀಯ ನಾಯಕರು, ವಿಐಪಿಗಳು ಅಥವಾ ಮಾಧ್ಯಮಗಳಿಗೆ ಆಹ್ವಾನ ನೀಡಿರಲಿಲ್ಲ.
ಮನೆಯ ಹೊರಗಿನಿಂದ ಯಾರ ಕಣ್ಣಿಗೂ ಬೀಳದಂತೆ ಪೆಂಡಾಲ್‌ಗಳನ್ನು ಹಾಕಲಾಗಿತ್ತು. ಇದು ಸ್ಥಳೀಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಯಾವುದೇ ಆಡಂಬರವಿಲ್ಲದೇ ಕೇವಲ ರಕ್ತಸಂಬಂಧಿಗಳು ಮತ್ತು ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ಗೃಹಪ್ರವೇಶ ಆಗಿದೆ. ಈ ಅಪರೂಪದ ಸಮಾರಂಭದ ಎಕ್ಸ್‌ಕ್ಲೂಸಿವ್ ಫೋಟೋಗಳು ಲಭ್ಯವಾಗಿವೆ.