ಸಿದ್ದರಾಮಯ್ಯ ಮನೆ ಗೃಹಪ್ರವೇಶ; ಗೋಪೂಜೆ, ಲಕ್ಷ್ಮೀದೇವಿ ಫೋಟೋ ಜೊತೆ ಬಂಗ್ಲೆಗೆ ಎಂಟ್ರಿ

Published : Sep 15, 2026, 09:52 AM IST

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ನೂತನ ನಿವಾಸದ ಗೃಹಪ್ರವೇಶವು ಗಣೇಶ ಚತುರ್ಥಿಯ ಶುಭ ದಿನದಂದು ನೆರವೇರಿದೆ. ಸುಮಾರು 12 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಮನೆಗೆ, ಕುಟುಂಬಸ್ಥರ ಸಮ್ಮುಖದಲ್ಲಿ ಗೋ ಪೂಜೆ, ಗಣಪತಿ ಹೋಮದಂತಹ ಶಾಸ್ತ್ರೋಕ್ತ ವಿಧಿಗಳೊಂದಿಗೆ ಪ್ರವೇಶಿಸಲಾಯಿತು.

PREV
15
ಗಣೇಶ ಚತುರ್ಥಿಯ ಶುಭ ಗಳಿಗೆಯಲ್ಲಿ ಗೃಹಪ್ರವೇಶ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೂತನ ನಿವಾಸದ ಗೃಹಪ್ರವೇಶ ಸೋಮವಾರ ನಡೆದಿದೆ. ಗಣೇಶ ಚತುರ್ಥಿಯ ಶುಭ ಗಳಿಗೆಯಲ್ಲಿ ಗೃಹಪ್ರವೇಶ ನಡೆದಿದೆ. ಸುಮಾರು 10-12 ವರ್ಷಗಳಿಂದ ಸಿದ್ದರಾಮಯ್ಯ ಮನೆ ನಿರ್ಮಾಣದ ಕಾಮಗಾರಿ ನಡೆಯುತ್ತಿತ್ತು. ಅಂತಿಮವಾಗಿ ಸೋಮವಾರ ಸಂಪ್ರದಾಯಬದ್ಧವಾಗಿ ಗೃಹಪ್ರವೇಶ ನೆರವೇರಿದೆ.

25
ಗೃಹಪ್ರವೇಶ ಕಾರ್ಯಕ್ರಮ

ಗೃಹಪ್ರವೇಶ ಕಾರ್ಯಕ್ರಮಕ್ಕೆ ಕೇವಲ ಅತ್ಯಾಪ್ತರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಖಾಸಗಿ ಕಾರ್ಯಕ್ರಮವಾಗಿದ್ದರಿಂದ ಮಾಧ್ಯಮಗಳಿಂದ ಸಿದ್ದರಾಮಯ್ಯ ಕುಟುಂಬ ಅಂತರ ಕಾಯ್ದುಕೊಂಡಿತ್ತು. ಹಾಗೆಯೇ ಮನೆಯ ಸುತ್ತಲೂ ಪೆಂಡಾಲ್ ಹಾಕಿದ್ದರಿಂದ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

35
ಗೃಹಪ್ರವೇಶದ ಫೋಟೋ

ಇದೀಗ ಗೃಹಪ್ರವೇಶದ ಫೋಟೋ ಮುನ್ನಲೆಗೆ ಬಂದಿವೆ. ಮನೆಯೊಳಗೆ ಹಸು ಮತ್ತು ಕರು ತೆಗೆದುಕೊಂಡು ಬಂದು ಗೋವಿನ ಪೂಜೆ ನೆರವೇರಿಸಲಾಗಿದೆ. ಸಿದ್ದರಾಮಯ್ಯ ಅವರ ಪತ್ನಿ ಶ್ರೀಮತಿ ಪಾರ್ವತಿ ಮತ್ತು ಪುತ್ರ ಸಚಿವ ಯತೀಂದ್ರ ಅವರು ಪೂಜೆಯನ್ನು ನೆರವೇರಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರು ಲಕ್ಷ್ಮಿದೇವಿಯ ಫೋಟೋ ಹಿಡಿದು ನಿಂತಿರೋದನ್ನು ಪಟದಲ್ಲಿ ಗಮನಿಸಬಹುದು.

45
ಪಾರ್ವತಿ ಸಿದ್ದರಾಮಯ್ಯ

ಸಿದ್ದರಾಮಯ್ಯ ಅವರು ಹೊಸ ಮನೆ ಮೈಸೂರಿನ ಕುವೆಂಪುನಗರದಲ್ಲಿದೆ. ಗೃಹಪ್ರವೇಶವನ್ನು ಯಾವುದೇ ರಾಜಕೀಯ ಗಣ್ಯರಿಲ್ಲದೆ ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತ ಪೂಜೆ ನೆರವೇರಿಸಲಾಯಿತು. ಗೃಹಪ್ರವೇಶದ ಫೋಟೋದಲ್ಲಿ ಪಾರ್ವತಿ ಸಿದ್ದರಾಮಯ್ಯ (ಯತೀಂದ್ರ ಪಕ್ಕದಲ್ಲಿ) ಅವರು ಇರೋದನ್ನು ನೀವು ನೋಡಬಹುದು.

55
ಪೂಜಾ ವಿಧಾನಗಳು

ಸಿದ್ದರಾಮಯ್ಯವರ ಕನಸಿನ ಮನೆಯಲ್ಲಿ ಗಣಪತಿ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗಿದೆ. ಪೂರ್ಣಾಹುತಿ ಮತ್ತು ಗೃಹಪ್ರವೇಶದ ವಿಧಿಗಳು ಸಂಪನ್ನಗೊಂಡಿವೆ ಎಂದು ತಿಳಿದು ಬಂದಿವೆ. ಎಲ್ಲಾ ಪೂಜಾ ವಿಧಾನಗಳು ಪಾರ್ವತಿ ಸಿದ್ದರಾಮಯ್ಯವರ ನೇತೃತ್ವದಲ್ಲಿ ನಡೆದಿವೆ.

Read more Photos on
click me!

Recommended Stories