ಕೇರಳ ಸಂಪರ್ಕಿಸುವ ಶಾರ್ಟ್‌ಕಟ್‌ಗಳೆಲ್ಲ ಬ್ಲಾಕ್‌: ಕದ್ದುಮುಚ್ಚಿ ಹೋಗೋರಿಗೆ ಬ್ರೇಕ್

First Published | May 12, 2020, 3:26 PM IST

ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು. ಇಲ್ಲಿವೆ ಫೋಟೋಸ್

ಕೊರೋನಾ ಹಿನ್ನೆಲೆಯಲ್ಲಿ ಅಂತಾರಾಜ್ಯ ಸಂಪರ್ಕ ರಸ್ತೆ ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ಇಲ್ಲಿನ ಕರಿಕೆ, ಕುಟ್ಟ, ಮಾಕುಟ್ಟಅಂತರ್‌ ರಾಜ್ಯ ಗಡಿಯಲ್ಲಿ ರಸ್ತೆ ಬಂದ್‌ ಮಾಡಿ ಚೆಕ್‌ ಪೋಸ್ಟ್‌ ಅಳವಡಿಸಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಯಿತು.
ಆದರೆ ಕೊಡಗು ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಗಡಿ ಕೇರಳ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಗೇರು ಪ್ಲಾಂಟೇಷÜನ್‌ಗಾಗಿ ಹಾದುಹೋಗಿರುವ ಪಾಣತ್ತೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೇರಳದಲ್ಲಿ ಗೇಟ್‌ ಇದೆ.
Tap to resize

ಆದರೂ ರಸ್ತೆ ಮೂಲಕ ಕದ್ದು ಮುಚ್ಚಿ ನಿರಂತರವಾಗಿ ವಾಹನ ಓಡಾಡುವುದನ್ನು ಅಧಿ​ಕಾರಿ​ಗಳು ಪತ್ತೆಹಚ್ಚಿದ್ದಾರೆ. ಭಾಗಮಂಡಲ ಠಾಣಾ​ಧಿಕಾರಿ ಮಹದೇವ ಹಾಗೂ ಸಿಬ್ಬಂದಿ ಜೆಸಿಬಿ ಯಂತ್ರ ಮೂಲಕ ರಸ್ತೆಗೆ ಮಣ್ಣು ಸುರಿದು ಸಂಪೂರ್ಣವಾಗಿ ಬಂದ್‌ ಮಾಡಿದರು.
ಕೇರಳದೊಂದಿಗೆ ಮಡಿಕೇರಿ ಸಂಪರ್ಕದ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಆದರೆ ಈಗ ಕೇರಳದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದ್ದು, ದಕ್ಷಿಣ ಕನ್ನಡದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಕೇರಳ ತನ್ನ ಪ್ರಮುಖ ಚೆಕ್‌ಪೋಸ್ಟ್‌ಗಳನ್ನು ಮಾತ್ರ ತೆರೆದಿದ್ದು, ಸಣ್ಣ ಪುಟ್ಟ ಶಾರ್ಟ್‌ ಕಟ್ ದಾರಿಗಳೆಲ್ಲವನ್ನೂ ಮುಚ್ಚಲಾಗಿದೆ.
ಕೊರೋನಾ ಕಾಣಿಸಿಕೊಂಡ ಆರಂಭದಲ್ಲಿ ರಸ್ತೆಯ ತುಂಬ ಮಣ್ಣು ಹಾಕಿ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಿರುವುದು

Latest Videos

click me!