ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಕಾವೇರಿ ವನ್ಯಜೀವಿ ಧಾಮದ ಸಂಗಮ ವಲಯ ಅರಣ್ಯ ವ್ಯಾಪ್ತಿಯ ಬೊಮ್ಮಸಂದ್ರದಲ್ಲಿ ಆರು ಲಾಂಚರ್‌ಗಳು ಪತ್ತೆಯಾಗಿವೆ. ಇವುಗಳಲ್ಲಿ ಆರು ಸ್ಫೋಟಗೊಂಡಿದ್ದು, ಒಂದು ಸಜೀವವಾಗಿದೆ.
undefined
ಮಲ್ಟಿಪರ್ಪಸ್ ರಾಕೆಟ್ ಲಾಂಚರ್ ಇದಾಗಿದ್ದು, ಪ್ರತಿಯೊಂದು ಲಾಂಚರ್ ಮೂರು ಅಡಿ ಎತ್ತರ , ಎರಡು ಇಂಚು ಸುತ್ತಳತೆ ಉಳ್ಳ ಕಾಪರ್ ನಿಂದ ತಯಾರಿಸಿರುವ ಕೊಳವೆ ಆಕಾರದಲ್ಲಿವೆ. ಒಂದೊಂದು ಲಾಂಚರ್ ನ ಒಳಭಾಗದಲ್ಲಿ ಒಂದೂವರೆ ಅಡಿ ಎತ್ತರದ ಸಣ್ಣ ಸಣ್ಣ ಏಳು ರಾಕೆಟ್ ಗಳು ಇವೆ.
undefined
ಪೊಲೀಸ್ ಅಧಿಕಾರಿಗಳು ಸ್ಫೋಟಕ ಪತ್ತೆ ತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಸ್ಫೋಟಗೊಂಡಿರುವ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸಿದರು. ಆನಂತರ ಲಾಂಚರ್ ನ ಅವಶೇಷ ಹಾಗೂ ಸಜೀವ ಲಾಂಚರ್ ಅನ್ನು ಪರೀಕ್ಷೆಗಾಗಿ ಎಫ್ ಎಸ್ ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ಗೆ ಕಳುಹಿಸಿಕೊಟ್ಟಿದ್ದಾರೆ.
undefined
ಬೊಮ್ಮಸಂದ್ರದ ಇಬ್ಬರು ಯುವ ಬೇಟೆಗಾರರು ಆರು ಲಾಂಚರ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಅವುಗಳನ್ನು ಖರೀದಿಸಲು ಮುಂದಾದ ವ್ಯಕ್ತಿ ಲಾಂಚರ್‌ನಲ್ಲಿ ಕಾಪರ್ , ಅಲ್ಯುಮಿನಿಯಂ ಅನ್ನು ಮಾತ್ರ ಕೊಳ್ಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
undefined
ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿಅವರ ಗಮನಕ್ಕೆ ತಂದಿದ್ದಾರೆ. ಆನಂತರ ಪೊಲೀಸರು ಸ್ಫೋಟಕ ಪತ್ತೆ ತಜ್ಞರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಫೋಟಗೊಂಡಿದ್ದ ಲಾಂಚರ್ ಗಳ ಅವಶೇಷಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದರು.
undefined