ಶಿವಮೊಗ್ಗದ ಸುಳೆಬೈಲಿನಲ್ಲಿ ಸಂಕೇತ್ ಎಂಬ ಯುವಕನ ಕೊಲೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.
ಸೋಮವಾರ ರಾತ್ರಿ ನಡೆದ ಸಂಕೇತ್ ಕೊಲೆಗೆ ಶಿವಮೊಗ್ಗ ಪೊಲೀಸರೇ ಕಾರಣ. ಈ ಏರಿಯಾದಲ್ಲಿ ಹಿಂದೂಗಳು ಬದುಕೋದು ಕಷ್ಟವಾಗಿದೆ. ರಾತ್ರಿಯಾದ್ರೆ ಸಾಕು ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕರು ಗಾಂಜಾ-ನಶೆ ಮಾಡ್ತಾರೆ. ನಂತರ ಹೊಡೆದಾಡಿಕೊಳ್ಳುತ್ತಾರೆ. ರಾತ್ರಿ 7 ಗಂಟೆಯಾದ್ರೆ ಮನೆಯಿಂದ ಹೊರಗೆ ಬರಲು ಭಯವಾಗುತ್ತೆ ಎಂದು ಸುಳೆಬೈಲಿನ ನಿವಾಸಿ ಗೀತಾ ಹೇಳಿದ್ದಾರೆ.
25
ಸುಳೆಬೈಲಿನ ನಿರ್ಜನ ಪ್ರದೇಶ
ಸುಳೆಬೈಲಿನ ನಿರ್ಜನ ಪ್ರದೇಶದ ಮಾರ್ಗವಾಗಿ ಬರುತ್ತಿದ್ದ ಸಂಕೇತ್‌ನನ್ನು ಮೂವರು ಹೊಡೆದು ಕೊಲೆ ಮಾಡಿದ್ದಾರೆ. ಈ ಘಟನೆಯಿಂದ ಇಡೀ ಶಿವಮೊಗ್ಗ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರ ನಿರ್ಲಕ್ಷ್ಯವೇ ಇಂತಹ ಘಟನೆಗಳು ನಡೆಯಲು ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
35
ರಾತ್ರಿಯಾದ್ರೆ ಇವರ ಉಪಟಳ
ರಾತ್ರಿಯಾದ್ರೆ ನಿರ್ಜನ ಪ್ರದೇಶದಲ್ಲಿ ಹುಡುಗರು ಸೇರಿಕೊಳ್ಳುತ್ತಾರೆ. ಗಸ್ತು ತಿರುಗುವ ಯಾವ ಪೊಲೀಸರು ರಾತ್ರಿ ಈ ಕಡೆ ಬರಲ್ಲ. ಮುಖ್ಯರಸ್ತೆಯಿಂದನೇ ಹೋಗ್ತಾರೆ. ಸುಮಾರು ಎರಡು ತಿಂಗಳ ಹಿಂದೆ ಹಗಲಿನಲ್ಲಿಯೇ ಇಲ್ಲೊಂದು ಕೊಲೆ ನಡೆದಿತ್ತು. ಇನ್ನು ರಾತ್ರಿಯಾದ್ರೆ ಇವರ ಉಪಟಳ ಹೆಚ್ಚಾಗುತ್ತದೆ. ರಾತ್ರಿ ವೇಳೆ ಮನೆ ಬಾಗಿಲು ಬಡಿದು ತೊಂದರೆ ಕೊಡುತ್ತಾರೆ. ಇಲ್ಲಿರುವ ಅಕ್ರಮ ಚಟುವಟಿಗಳನ್ನು ತಡೆಗಟ್ಟಲು ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಹಾಗಾಗಿ ಪೊಲೀಸರು ರಾತ್ರಿ ಗಸ್ತು ಹೆಚ್ಚು ಮಾಡಬೇಕು. ಸರ್ಕಾರ ಈ ಜಾಗಕ್ಕೆ ಕಾಂಪೌಂಡ್ ನಿರ್ಮಿಸಬೇಕು ಎಂದು ಸ್ಥಳೀಯ ನಿವಾಸಿ ಶಶಿ ಆಗ್ರಹಿಸಿದ್ದಾರೆ.
ಸಂಕೇತ್‌ನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾತ್ರಿ 9 ಗಂಟೆಯಾದ್ರೂ ಶಾಲೆಯವರು ಒಂದು ಮೆಸೇಜ್ ಹಾಕಿಲ್ಲ. ಸ್ಪೆಷಲ್ ಕ್ಲಾಸ್ ಮುಗಿದ್ಮೇಲೆ ಶಾಲೆಯವರು ಮೆಸೇಜ್ ಮಾಡಿದರೆ ನಾನು ನನ್ನ ತಮ್ಮನನ್ನು ಕರೆದುಕೊಂಡು ಬರುತ್ತಿದ್ದೆ. ಈಗ ನನ್ನ ತಮ್ಮನನ್ನು ಹುಡುಕಿಕೊಂಡು ಎಲ್ಲಿಗೆ ಹೋಗಲಿ ಎಂದು ಅಕ್ರ ಅಂಜಲಿ ಕಣ್ಣೀರು ಹಾಕಿದ್ದಾರೆ.
ಸ್ಪೆಷಲ್ ಕ್ಲಾಸ್ 9 ಗಂಟೆಗೆ ಮುಗಿಯುತ್ತದೆ. ನಿರ್ಜನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುತ್ತವೆ. ಹಾಗಾಗಿ ಪೊಲೀಸರು ಈ ಪ್ರದೇಶದಲ್ಲಿರಬೇಕಿತ್ತು. ಪೊಲೀಸರ ನಿರ್ಲಕ್ಷದಿಂದ ನನ್ನ ತಮ್ಮ ಸಂಕೇತ್ ಸಾವನ್ನಪ್ಪಿದ್ದಾನೆ. ನನ್ನ ತಮ್ಮನನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಬೇಕು. ಇಲ್ಲದಿದ್ದರೆ ನಮ್ಮ ಕುಟುಂಬದವರು ಆತ್ಮ*ತ್ಯೆ ಮಾಡಿಕೊಳ್ಳುತ್ತೇವೆ. ಸಂಕೇತ್ ಸಾವಿಗೆ ಶಾಲೆಯವರು ಮತ್ತು ಪೊಲೀಸರೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.