ಈವರೆಗೆ ಪುರುಷದ್ದಾಯ್ತು, ಈಗ ಆರ್‌ಎಸ್‌ಎಸ್‌ ಮಹಿಳಾ ವಿಭಾಗದಿಂದ ಬೃಹತ್‌ ಪಥಸಂಚಲನ!

Published : Jan 07, 2024, 07:27 PM IST

ಬಾಗಲಕೋಟೆ (ಜ.07): ದೇಶದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ (ಆರ್‌ಎಸ್‌ಎಸ್‌) ಈವರೆಗೆ ಗಣ್ಯಾತಿ ಗಣ್ಯರನ್ನು ಒಳಗೊಂಡ ಪುರುಷರ ವಿಭಾಗದಿಂದ ಬೃಹತ್ ಆರ್‌ಎಸ್‌ಎಸ್‌ ಪಥಸಂಚಲನ ಮಾಡಲಾಗುತ್ತಿತ್ತು. ಆದರೆ, ಈಗ ಬಾಗಲಕೋಟೆಯಲ್ಲಿ ಮಹಿಳಾ ವಿಭಾಗದಿಂದ ಶಿಸ್ತಿನ, ಆಕರ್ಷಕ ಮತ್ತು ಬೃಹತ್‌ ಪಥ ಸಂಚಲನ ಮಾಡಲಾಗಿದೆ.  

PREV
15
ಈವರೆಗೆ ಪುರುಷದ್ದಾಯ್ತು, ಈಗ ಆರ್‌ಎಸ್‌ಎಸ್‌ ಮಹಿಳಾ ವಿಭಾಗದಿಂದ ಬೃಹತ್‌ ಪಥಸಂಚಲನ!

ಬಾಗಲಕೋಟೆ ನಗರದಲ್ಲಿ ಭಾನುವಾರ ಮಧ್ಯಾಹ್ನ ಆರ್.ಎಸ್.ಎಸ್. ಮಹಿಳಾ ವಿಭಾಗದಿಂದ ನಗರದಾದ್ಯಂತ ವಿವಿಧ ರಸ್ತೆಗಳಲ್ಲಿ ಆಕರ್ಷಕ ಪಥಸಂಚಲನ ಮಾಡಲಾಯಿತು.
 

25

ಬಾಗಲಕೋಟೆಯ ಬಸವೇಶ್ವರ ಕಾಲೇಜ್ ಮೈದಾನದಿಂದ ಆರಂಭವಾದ ಪಥಸಂಚಲನ  ಎರಡು ವಿಭಾಗಗಳಾಗಿ ವಿವಿಧ ರಸ್ತೆಗಳಲ್ಲಿ ಸಾಗಿದ್ದು, ಎರಡೂ ತಂಡಗಳು ಪುನಃ ಬಸವೇಶ್ವರ ವೃತ್ತಕ್ಕೆ ಬಂದಾಗ ಹೂಮಳೆಗರೆದು ಮಹಿಳಾ ಪಥಸಂಚಲನಕ್ಕೆ ಸ್ವಾಗತ ಕೋರಲಾಯಿತು.

35

ಮಹಿಳೆಯರ ಪಥ ಸಂಚಲನವನ್ನು ವೀಕ್ಷಣೆ ಮಾಡಲು ಸಾವಿರಾರು ಸಾರ್ವಜನಿಕರು ರಸ್ತೆ ಬದಿಯ ಬ್ಯಾರಿಕೇಡ್‌ ಆಚೆಗೆ ನಿಂತುಕೊಂಡು ದೇಶಭಕ್ತಿಯ ಘೋಷಣೆ ಕೂಗಿದರು. 
 

45

ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಕೆಸರೆರಚಾಟ ನಡೆದಿದ್ದು, ಇಡೀ ರಾಜ್ಯವೇ ಬೆಂಕಿ ಕುಂಡದಂತಾಗಿದೆ. ಇದರ ಬೆನ್ನಲ್ಲಿಯೇ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೂ ಮುನ್ನ ಆರ್‌ಎಸ್‌ಎಸ್‌ ಮಹಿಳಾ ವಿಭಾಗದಿಂದ ಪಥಸಂಚಲನ ಮಾಡಲಾಗಿದೆ.
 

55

ಇನ್ನು ಮಹಿಳೆಯರಿಂದ ನಡೆದ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಸಾವಿರಾರು ಶಾಲಾ-ಕಾಲೇಜು ಮಕ್ಕಳು, ಯುವತಿಯರು ಹಾಗೂ ಮಹಿಳೆಯರು ಪಥಸಂಚಲನದಲ್ಲಿ ಭಾಗಿಯಾಗಿದ್ದರು. ಪಥಸಂಚಲನ ಹಿನ್ನೆಲೆಯಲ್ಲಿ ಪೋಲಿಸರು  ನಗರದಾದ್ಯಂತ ಬಿಗಿಭದ್ರತೆ ಒದಗಿಸಿದ್ದರು.

Read more Photos on
click me!

Recommended Stories