Breaking: ಚಿತ್ರದುರ್ಗ ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್ ಅಪಘಾತ: ಇಬ್ಬರ ಸಾವು, ಹಲವರ ಸ್ಥಿತಿ ಗಂಭೀರ

First Published | Dec 9, 2023, 6:29 PM IST

ಚಿತ್ರದುರ್ಗ (ಡಿ.09): ದಾವಣಗೆರೆಯಲ್ಲಿ ನಾಳೆ ನಿಶ್ಚಯವಾಗಿದ್ದ ಮದುವೆಗೆ 50ಕ್ಕೂ ಅಧಿಕ ಜನರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಹೊಸದುರ್ಗ ತಾಲೂಕಿನ ಉಗಣೆಕಟ್ಟೆ ಗ್ರಾಮದ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಇಬ್ಬರು ಮೃತರಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಮದುವೆ ದಿಬ್ಬಣಕ್ಕೆಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಿಂದ ದಾವಣಗೆರೆಗೆ ಹೊರಟಿದ್ದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಟ್ಟಿಯಾಗಿ ಬಿದ್ದಿದೆ. ಖಾಸಗಿ ಬಸ್ ಸಂಪೂರ್ಣವಾಗಿ ಮಗುಚಿ ಬಿದ್ದಿದೆ. 

ಬಸ್ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಬಸ್‌ನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.
 

Tap to resize

ಮದುವೆಗಾಗಿ ಹೊಸದುರ್ಗದಿಂದ ದಾವಣಗೆರೆಗೆ ತೆರಳುತ್ತಿದ್ದ ಬಸ್ ಅಪಘಾತವಾಗಿದೆ. ಹೊಸದುರ್ಗ ಠಾಣೆ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳೀಯರು ಕೂಡಲೇ ನೆರವುಗೆ ಧಾವಿಸಿದ್ದು, ಕೈ ಗೆ ಸಿಕ್ಕಿದವರನ್ನು ರಕ್ಷಣೆ ಮಾಡಿ ಆರೈಕೆ ಮಾಡಿದ್ದಾರೆ.

ಮದುವೆ ದಿಬ್ಬಣಕ್ಕೆ ಹೊರಟಿದ್ದವರನ್ನು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಚಿಕ್ಕ ಎಗಟಿ ಗ್ರಾಮದವರು ಎಂದು ಹೇಳಲಾಗುತ್ತಿದೆ. ನಾಳೆ ದಾವಣಗೆರೆಯಲ್ಲಿದ್ದ ಮದುವೆ ಕಾರ್ಯಕ್ರಮಕ್ಕೆ ಚಿಕ್ಕ ಎಗಟಿ ಗ್ರಾಮದಿಂದ ಬಸ್‌ನಲ್ಲಿ ಮಧು ಮಗಳೊಂದಿಗೆ ಸಂಬಂಧಿಕರು ಹೋಗುತ್ತಿದ್ದರು. 
 

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಉಗಣೆಕಟ್ಟೆ ಗ್ರಾಮದ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ ಪಲ್ಟಿಯಾಗಿದೆ. ವಿದ್ಯುತ್ ತಂತಿಗಳು ಹರಿದು ಬಸ್ ಮೇಲೆ ಬಿದ್ದಿದ್ದು ಗಾಯಾಳುಗಳು ಕರೆಂಟ್ ಶಾಕ್‌ಗೂ ಒಳಗಾಗಿದ್ದಾರೆ.

ಆದರೆ, ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಕರೆಂಟ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿದೆ. ಬಸ್‌ನಡಿ ಸಿಲುಕಿದವರನ್ನು ರಕ್ಷಣೆ ಮಾಡಲಾಗದೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
 

ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸಿಬಿ ತರಿಸಿ ಬಸ್ ಮೇಲಕ್ಕೆತ್ತುತ್ತಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
 

Latest Videos

click me!