ಈಗಾಗಲೇ ಶಕ್ತಿ ಯೋಜನೆ ಜಾರಿಯಿಂದಾಗಿ ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿಗಳು ಸೀಟಿಲ್ಲದೇ, ಬಾಗಿಲ ಬಳಿ ನಿಂತುಕೊಂಡು ಜೀವ ಭಯದಲ್ಲಿಯೇ ಓಡಾಡಬೇಕಿದೆ.
ಬಳ್ಳಾರಿಯಲ್ಲಿಯೂ ಕೂಡ ಶಕ್ತಿ ಯೋಜನೆ ಎಫೆಕ್ಟ್ ಬಸ್ ಇಲ್ಲದೇ, ವಿದ್ಯಾರ್ಥಿಗಳ ಪರದಾಡುತ್ತಿರುವ ಘಟನೆಗಳು ಹಲವೆಡೆ ವರದಿ ಆಗುತ್ತಲಿವೆ. ಬಳ್ಳಾರಿ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸ್ವ ಕ್ಷೇತ್ರದ ವಿದ್ಯಾರ್ಥಿಗಳ ಪರದಾಟ ಕಿಂಚಿತ್ತೂ ಗಮನ ಹರಿಸುತ್ತಿಲ್ಲ.
ಇನ್ನು ವಿದ್ಯಾರ್ಥಿಗಳು ಬಸ್‌ನಲ್ಲಿ ಜಾಗವಿಲ್ಲದೇ ಪರೀಕ್ಷೆಗೆ ಹೋಗಲಾದ ಪರಿಸ್ಥಿತಿ ಬರಬಾರದು ಎಂದು ಗೂಡ್ಸ್ ವಾಹನದಲ್ಲಿ ಸಂಚಾರ ಮಾಡುತ್ತಿದ್ದಾರೆ.
ಗಣಿ ನಾಡು ಬಳ್ಳಾರಿಯಲ್ಲಿ ಶಾಲಾ ವಿದ್ಯಾರ್ಥಿಗಳನ್ನ ಕುರಿ ಹಿಂಡಿನಂತೆ ಟಾಟಾ ಏಸ್ ಗೂಡ್ಸ್ ವಾನಹದಲ್ಗಲಿ ತುಂಬಿಕೊಂಡು ನಗರ ಪ್ರದೇಶದ ಶಾಲೆಗಳಿಗೆ ಕರೆದೊಯ್ಯಲಾಗುತ್ತಿದೆ. ಕನಿಷ್ಠ ಬಸ್ ವ್ಯವಸ್ಥೆ ಮಾಡಿಸುವಂತೆ ವಿದ್ಯಾರ್ಥಿಗಳ ಒತ್ತಾಯಿಸಿದರೂ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಕಿವಿಗೊಡುತ್ತಿಲ್ಲ.
ಭಾನುವಾರದ ಹಿನ್ನೆಲೆಯಲ್ಲಿ ಕೆಲವು ಪರೀಕ್ಷೆಗಳನ್ನು ಬರೆಯಲು ಹೋಗುವ ಬ್ಯಾಲಚಿಂತೆ, ನಾಗೇನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳನ್ನು ಟಾಟಾ ಏಸ್‌ನಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ.
ಕರ್ನಾಟಕದ ಶಕ್ತಿ ಯೋಜನೆ ಮಾದರಿಯಲ್ಲಿಯೇ ತೆಲಂಗಾಣದಲ್ಲಿಯೂ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಇಲ್ಲಿಯೂ ಕೂಡ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿವೆ.
ಇನ್ನು ಕಳೆದೊಂದು ವಾರದ ಹಿಂದೆ ಬಸ್ ನಿಲ್ಲಿಸಲಿಲ್ಲವೆಂಬ ಕಾರಣಕ್ಕೆ ಮಹಿಳೆಯ ಕಡೆಯ ಯುವಕರ ಗುಂಪೊಂದು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ನಡೆದಿತ್ತು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂಧ ಕೂಡಲೇ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಈ ಶಕ್ತಿ ಯೋಜನೆ ಜಾರಿಯಿಂದಾಗಿ ವಿದ್ಯಾಧರ್ತಿಗಳು ಬಸ್‌ಗಳಲ್ಲಿ ಸೀಟಿಲ್ಲದೇ ಪರದಾಡುವಂತಾಗಿದೆ.