Honorary Doctorate to Murugesh Nirani: ಸಚಿವ ನಿರಾ​ಣಿಗೆ ಗೌರವ ಡಾಕ್ಟರೇಟ್‌ ಪ್ರದಾನ

First Published Dec 6, 2021, 1:36 PM IST

ಬಾಗಲಕೋಟೆ(ಡಿ.06):  ಮಹಾರಾಷ್ಟ್ರದ ಕರಾಡದ ಕೃಷ್ಣಾ ಇನಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌  ಡೀಮ್ಡ್‌ ವಿಶ್ವವಿದ್ಯಾಲಯ(Krishna Institute of Medical Sciences University)  ವತಿಯಿಂದ ರಾಜ್ಯ​ದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ(Murugesh Nirani) ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಯಿತು.

ಮಹಾರಾಷ್ಟ್ರದ(Maharashtra) ವಿಧಾ​ನ​ಸ​ಭೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್(Devendra Fadnavis) ಮಾತನಾಡಿ, ನಿರಾಣಿ ಅವರು ಕರ್ನಾಟಕ(Karnataka), ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಡಿದ ಕೈಗಾರಿಕಾ ಅಭಿವೃದ್ಧಿ, ಸಮಾಜಸೇವೆಯನ್ನು ಗುರ್ತಿಸಿ ಪ್ರತಿಷ್ಠಿತ ಗೌರವ ಡಾಕ್ಟರೇಟ್‌(Honorary Doctorate) ಪ್ರದಾನ ಮಾಡಲಾಗಿದೆ ಎಂದರು.

ಗ್ರಾಮೀಣ ಪ್ರದೇಶದಿಂದ ಬಂದ ಅವರು ನಿಜವಾದ ಅರ್ಥದಲ್ಲಿ ಹಳ್ಳಿಯ ಪ್ರತಿಭೆಯಾಗಿದ್ದಾರೆ. ಅವರ ಕೊಡುಗೆ ಕೈಗಾರಿಕಾ ರಂಗಕ್ಕೆ ಅಪೂರ್ವವಾಗಿದೆ ಎಂದ ದೇವೇಂದ್ರ ಫಡ್ನವಿಸ್

ಈ ಪುರಸ್ಕಾರದಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡಿರುವ ಕೃಷಿ ಕೈಗಾರಿಕೆಗಳ ಪುನಾರಂಭಕ್ಕೆ ಮಹಾರಾಷ್ಟ್ರದ ನಾಯಕರು ಆಮಂತ್ರಿಸಿದ್ದಾರೆ. ದೇಶದ ಯಾವುದೇ ಕಾರ್ಖಾನೆಗಳ ಬಾಗಿಲು ಮುಚ್ಚಬಾರದು ಎನ್ನುವುದು ನನ್ನ ಹಂಬಲ. ಕೃಷಿ, ನೀರಾವರಿ, ಕೈಗಾರಿಕೆಗಳು ಜಗತ್ತಿನ ಜೀವಾಳ. ಈ ಉದ್ದೇಶದಿಂದ ನಾನು ಕೆಲಸ ಮಾಡುತ್ತೇನೆ ಎಂದ ನಿರಾಣಿ 

ಸಚಿವ ಮುರುಗೇಶ ನಿರಾಣಿಯವರ ಸಾಧನೆಯನ್ನು ಗುರುತಿಸಿ ಮಹಾರಾಷ್ಟ್ರದ ವಿ.ವಿ. ಡಾಕ್ಟರೇಟ್ಪ್ರದಾನ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮುರ​ಗೇಶ ನಿರಾ​ಣಿ​ಯ​ವ​ರ​ನ್ನು ಅಭಿನಂದಿಸಿದ್ದಾರೆ.

click me!