ರಸ್ತೆ ಕಾಮಗಾರಿ ವೇಳೆ ಸಿಕ್ಕಿತು ರಾಷ್ಟ್ರಕೂಟರ ಕಾಲದ ಅಪರೂಪದ ನಿಧಿ!

Published : Aug 01, 2026, 03:30 PM IST

ಕಲಬುರಗಿ ಜಿಲ್ಲೆಯ ಹೊಳಕುಂದಾ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಸುವಾಗ, ರಾಷ್ಟ್ರಕೂಟರ ಕಾಲದ್ದೆಂದು ನಂಬಲಾದ ಅಪರೂಪದ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.

PREV
15
ರಸ್ತೆ ಕಾಮಗಾರಿ ವೇಳೆ ಸಿಕ್ಕ ಅಪರೂಪದ ನಿಧಿ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದ ರುಕ್ಮಿಣಿ -ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಗಾರಿ ನಡೆಸಲಾಗುತ್ತಿತ್ತು. ಈ ವೇಳೆ ನೆಲ ಅಗಿಯುವಾಗ ಐತಿಹಾಸಿಕ ಹಾಗೂ ಪುರಾತನವಾದ ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿಯೊಂದು ಪತ್ತೆಯಾಗಿದೆ.

25
ಕಪ್ಪು ಶಿಲೆಯ ಮೂರ್ತಿಯ ವಿವರಣೆ

ಈ ಪತ್ತೆಯಾಗಿರುವ ಸೂರ್ಯನಾರಾಯಣ ದೇವರ ವಿಗ್ರಹವು 2.1 ಅಡಿ ಎತ್ತರವಿದ್ದು, ಅತ್ಯಂತ ಆಕರ್ಷಕವಾದ ಕಪ್ಪು ಶಿಲೆಯಲ್ಲಿ (Black stone) ಕೆತ್ತಲ್ಪಟ್ಟಿದೆ. ಮೂರ್ತಿಯ ಎರಡೂ ಕೈಗಳಲ್ಲಿ ಕಮಲದ ಹೂವುಗಳಿರುವುದು ಇದರ ವಿಶೇಷತೆಯಾಗಿದೆ.

35
ಕಲಾತ್ಮಕ ಶೈಲಿ ಮತ್ತು ಅಪರೂಪದ ಕೆತ್ತನೆ

ಈ ಶಿಲಾ ಮೂರ್ತಿಯಲ್ಲಿ ಸೂರ್ಯನಾರಾಯಣ ದೇವರ ಜೊತೆಗೆ ಸಂಧ್ಯಾದೇವಿ ಮತ್ತು ಛಾಯಾದೇವಿಯರ ಕೆತ್ತನೆಗಳಿವೆ. ಅಷ್ಟೇ ಅಲ್ಲದೆ, ಸೂರ್ಯನ ರಥವನ್ನು ಎಳೆಯುವ ಸಪ್ತ ಅಶ್ವಗಳ (ಏಳು ಕುದುರೆಗಳು) ಸೂಕ್ಷ್ಮ ಕೆತ್ತನೆಯೂ ಈ ವಿಗ್ರಹದಲ್ಲಿದೆ.

45
ರಾಷ್ಟ್ರಕೂಟರ ಕಾಲದ ಇತಿಹಾಸ

ಐತಿಹಾಸಿಕ ಸಂಶೋಧಕರ ಪ್ರಾಥಮಿಕ ಅಭಿಪ್ರಾಯ ಹಾಗೂ ಪರಿಶೀಲನೆಯ ಪ್ರಕಾರ, ಈ ಸೂರ್ಯನಾರಾಯಣ ವಿಗ್ರಹವು ಕಲ್ಯಾಣ ಕರ್ನಾಟಕ ಭಾಗವನ್ನು ಆಳಿದ ರಾಷ್ಟ್ರಕೂಟರ ಕಾಲದ ಅತ್ಯಪೂರ್ವ ಶಿಲ್ಪಕಲೆ ಎನ್ನಲಾಗಿದೆ.

55
ಗ್ರಾಮಸ್ಥರಲ್ಲಿ ಹೆಚ್ಚಿದ ಕೌತುಕ ಹಾಗೂ ಭಕ್ತಿ

ದೇವಸ್ಥಾನದ ಆವರಣದಲ್ಲೇ ಈ ಪುರಾತನ ಮೂರ್ತಿ ಸಿಕ್ಕಿರುವುದರಿಂದ ಹೊಳಕುಂದಾ ಗ್ರಾಮದ ಜನರಲ್ಲಿ ತೀವ್ರ ಕೌತುಕ ಹಾಗೂ ಭಕ್ತಿಭಾವ ಮೂಡಿದ್ದು, ಈ ಐತಿಹಾಸಿಕ ಮೂರ್ತಿಯನ್ನು ವೀಕ್ಷಿಸಲು ನೂರಾರು ಜನ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

Read more Photos on
click me!

Recommended Stories