ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
ಬಾಗಲಕೋಟೆ: ಮಾಳಿಂಗರಾಯ ದೇವರ ಗದ್ದುಗೆ ಮೇಲಿನ ಪವಿತ್ರಾ ತೆಂಗಿನಕಾಯಿ ಪ್ರತಿ ವರ್ಷದಂತೆ ಈ ವರ್ಷವೂ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಭಕ್ತ ಸಮೂಹದ ಮಧ್ಯೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 8 ಲಕ್ಷದ 1 ರೂಪಾಯಿ(8,00,001)ಗೆ ತೆಂಗಿನಕಾಯಿ ಹರಾಜಾಗಿದೆ. ಇದರೊಂದಿಗೆ ಈ ಹಿಂದಿನ ದಾಖಲೆಗಳನ್ನು ಬ್ರೇಕ್ ಮಾಡಿದೆ.
26
ಜಾತ್ರಾ ಮಹೋತ್ಸವ ವೇಳೆ ಗದ್ದುಗೆ ಮೇಲಿಟ್ಟು ಪೂಜೆ ಮಾಡಿದ್ದ ತೆಂಗಿನಕಾಯಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಲಾಗಿದೆ. ದೇವರ ಜಾತ್ರಾ ಮಹೋತ್ಸವ ವೇಳೆ ಗದ್ದುಗೆ ಮೇಲಿಟ್ಟು ಪೂಜೆ ಮಾಡಿದ್ದ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಕೊನೆಯಲ್ಲಿ ತೆಂಗಿನಕಾಯಿ ಹರಾಜು ಮಾಡಲಾಗುತ್ತದೆ.
36
ಅಪಾರ ಭಕ್ತ ಸಮೂಹದ ಮಧ್ಯೆ ಹರಾಜು
ಈ ವರ್ಷ ಜಾತ್ರೆಗೆ ಆಗಮಿಸಿದ್ದ ಅಪಾರ ಭಕ್ತ ಸಮೂಹದ ಮಧ್ಯೆ ನಡೆದ ದೇವರ ತೆಂಗಿನಕಾಯಿ ಹರಾಜು ಮಾಡಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ದಾಖಲೆ ಮೊತ್ತದ ಹರಾಜಿಗೆ ಭಕ್ತರು ಸಾಕ್ಷಿಯಾದರು.
ಹರಾಜಿನಲ್ಲಿ ಜಮಖಂಡಿ ತಾಲೂಕಿನ ಸನಾಳ ಗ್ರಾಮದ ಲಕ್ಷ್ಮಣ ಸಿದ್ದಪ್ಪ ಕುರಣಿ ಅವರು 8 ಲಕ್ಷ 1 ರೂಪಾಯಿಗೆ ಪಡೆದುಕೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ.
56
ಒಂದು ತಿಂಗಳ ಕಾಲ ನಡೆಯುವ ಪೂಜೆ
ಶ್ರಾವಣ ಮಾಸದ ವೇಳೆ ನಿರಂತರ ಒಂದು ತಿಂಗಳ ಕಾಲ ದೇವರ ಗದ್ದುಗೆ ಮೇಲಿಟ್ಟು ಪೂಜಿಸಲ್ಪಟ್ಟಿದ್ದ ತೆಂಗಿನಕಾಯಿ ನಂತರ ಮಾಳಿಂಗರಾಯ ಜಾತ್ರಾ ಮಹೋತ್ಸವ ವೇಳೆ ಸವಾಲ್ ಮೂಲಕ ಹರಾಜಿನಲ್ಲಿ ಭಕ್ತರಿಗೆ ಸಲ್ಲಿಸಲ್ಪಡುತ್ತದೆ.
66
2019ರಲ್ಲಿ 6,50,001ಕ್ಕೆ ಹರಾಜು!
ಈ ಹಿಂದೆಯೂ ದಾಖಲೆ ಮೊತ್ತಕ್ಕೆ ಹರಾಜ್ ಆಗಿದ್ದ ತೆಂಗಿನಕಾಯಿ, 2019ರಲ್ಲಿ 6,50,001 ಆಗಿದ್ದರೆ, 2025ರಲ್ಲಿ 5,70,000ಕ್ಕೆ ಹರಾಜ ಆಗಿತ್ತು. ಈ ಬಾರಿ 8,00,001ರೂ. ದಾಖಲೆ ಮೊತ್ತಕ್ಕೆ ಹರಾಜು ಆಗುವ ಮೂಲಕ ದಾಖಲೆ ನಿರ್ಮಿಸಿದೆ.