ಡಿಸಿಗಳ ಈಗೋ ಸಮಸ್ಯೆಯಿಂದ ಕನ್ನಡಿಗರ‌ ಬದುಕು ಅತಂತ್ರ: ಯುಟಿ ಖಾದರ್

First Published | Jun 2, 2020, 2:53 PM IST

ಎರಡು ಜಿಲ್ಲಾಧಿಕಾರಿಗಳ ಸ್ವಪ್ರತಿಷ್ಠೆಯಿಂದ ಕಾಸರಗೋಡು ಕನ್ನಡಿಗರು ಅತಂತ್ರರಾಗಿದ್ದಾರೆ. ಡಿಸಿಗಳ ಈಗೋ ಸಮಸ್ಯೆಯಿಂದ ಕನ್ನಡಿಗರ‌ ಬದುಕು ಅತಂತ್ರವಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ. ಈ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇಲ್ಲಿವೆ ಫೋಟೋಸ್

ಎರಡು ಜಿಲ್ಲಾಧಿಕಾರಿಗಳ ಸ್ವಪ್ರತಿಷ್ಠೆಯಿಂದ ಕಾಸರಗೋಡು ಕನ್ನಡಿಗರು ಅತಂತ್ರರಾಗಿದ್ದಾರೆ.ಡಿಸಿಗಳ ಈಗೋ ಸಮಸ್ಯೆಯಿಂದ ಕನ್ನಡಿಗರ‌ ಬದುಕು ಅತಂತ್ರವಾಗಿದೆ ಎಂದುದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
undefined
ಈ ಸಂಬಂಧ ಮಾಜಿ ಸಚಿವ ಯು.ಟಿ.ಖಾದರ್ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
undefined

Latest Videos


ದ.ಕ ಮತ್ತು ಕಾಸರಗೋಡು ಜಿಲ್ಲೆಯ ಜಿಲ್ಲಾಧಿಕಾರಿಗಳ ಸ್ವಪ್ರತಿಷ್ಠೆಯಿಂದ ಕನ್ನಡಿಗರು ‌ಅತಂತ್ರರಾಗಿದ್ದಾರೆ.ಎರಡು ಜಿಲ್ಲಾಧಿಕಾರಿಗಳು ಅವರ ಸ್ವಪ್ರತಿಷ್ಠೆ ಬಿಟ್ಟು‌ ಕೂರಬೇಕು.ಸ್ವಪ್ರತಿಷ್ಠೆ ಆಲೋಚನೆ ಮಾಡದೇ ಜನರ ಸಮಸ್ಯೆ ಆಲೋಚನೆ ಮಾಡಬೇಕು.ಅವರ ಸ್ವಪ್ರತಿಷ್ಠೆಯಿಂದ ನೀವು ಈಕಡೆ ಬರಬೇಡಿ, ನಾವು ಆ ಕಡೆ‌ ಬರಲ್ಲ ಅನ್ನೋದಲ್ಲ.ಹೀಗಾಗಿ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳು ಪರಸ್ಪರ ಕೂತು ಸಮಸ್ಯೆ ಬಗೆಹರಿಸಲಿ ಎಂದು ಹೇಳಿದ್ದಾರೆ
undefined
ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೊತೆ ಮಾತನಾಡುತ್ತಿರುವ ಮಾಜಿ ಸಚಿವ ಯು. ಟಿ. ಖಾದರ್
undefined
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ‌ತಂದಿದ್ದೇನೆ.ಕರ್ನಾಟಕ-ಕೇರಳ ಗಡಿ ಭಾಗ ಕಾಸರಗೋಡಿನ ಜೊತೆ ನಮಗೆ ನಿಕಟ ಸಂಪರ್ಕವಿದೆ.ಅವರನ್ನು‌ ನಾವು ಗಡಿನಾಡ ಕನ್ನಡಿಗರು ಅಂತಾನೇ ಕರೀತಿವಿ.ಆದ್ರೆ ಎರಡು ತಿಂಗಳಿನಿಂದ ಎರಡು ಕಡೆಯೂ ನಿಕಟ ಸಂಪರ್ಕವಿಲ್ಲ.ಅಲ್ಲಿ‌ ಮನೆಯಿದ್ದು, ಮಂಗಳೂರಿನಲ್ಲಿ ಕೆಲಸ ಮಾಡುವವರಿದ್ದಾರೆ ಎಂದು ಅವರು ಹೇಳಿದ್ದಾರೆ
undefined
ಉದ್ಯೋಗ, ವ್ಯಾಪಾರಕ್ಕೆ ‌ಮಂಗಳೂರಿಗೆ ಬರುವ ಸಾವಿರಾರು ಜನರಿದ್ದಾರೆ. ಈಗ ಅವರೆಲ್ಲರಿಗೂ ತೊಂದರೆಯಾಗಿದ್ದು, ಒಂದು ಕುಟುಂಬದ ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ದಕ್ಕೆಲ್ಲ‌ ಇನ್ನಾದರೂ‌ ಮುಕ್ತಿ ಸಿಗಬೇಕು, ಪ್ರತೀ ಸಮಸ್ಯೆಗೂ ಪರಿಹಾರ ಇದೆ. ಹೀಗಾಗಿ ಎರಡೂ ಜಿಲ್ಲಾಧಿಕಾರಿಗಳೂ ಸ್ವಪ್ರತಿಷ್ಠೆ ಬಿಟ್ಟು ಕೂರಲಿ
undefined
click me!