ಲಾಕ್‌ಡೌನ್ ಬಳಿಕ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಿಸಲ್ಪಟ್ಟಬಳಿಕ ಕೊಲ್ಲಿ ರಾಷ್ಟ್ರಗಳಿಂದ ಖಾಸಗಿ ವ್ಯವಸ್ಥೆಯಡಿ ಪ್ರಥಮ ಚಾರ್ಟೆಡ್ ವಿಮಾನ ಸೋಮವಾರ ರಾತ್ರಿ ಮಂಗಳೂರು ತಲುಪಿದೆ.
ದುಬೈ ರಾಸ್ ಅಲ್ ಕೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ 6.30ಕ್ಕೆ ಹೊರಟ ಸ್ಪೇನ್ ಜೆಟ್ ಚಾರ್ಟೆಡ್ ವಿಮಾನ ರಾತ್ರಿ ರಾತ್ರಿ 10 ಗಂಟೆ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ದುಬೈ ರಾಸ್ ಅಲ್ ಕೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ 6.30ಕ್ಕೆ ಹೊರಟ ಸ್ಪೇನ್ ಜೆಟ್ ಚಾರ್ಟೆಡ್ ವಿಮಾನ ರಾತ್ರಿ ರಾತ್ರಿ 10 ಗಂಟೆ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಫಾಚ್ರ್ಯೂನ್ ಹೊಟೇಲ್ ಸಮೂಹ ಸಂಸ್ಥೆಯ 105 ನೌಕರರು ಸೇರಿದಂತೆ ಒಟ್ಟು 177 ಮಂದಿ ಈ ವಿಮಾನದಲ್ಲಿ ಪ್ರಯಾಣಿಸಿದರು.
ಪ್ರಯಾಣಿಕರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಕಾಸರಗೋಡು ಭಾಗದ ಜನರಿದ್ದಾರೆ.
ಇವರಿಗೆ ಆಯಾ ಪ್ರದೇಶಗಳಲ್ಲಿ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.