ಶ್ರೀ ಕೃಷ್ಣ ಮಠದಲ್ಲಿ ಬುಧವಾರ ತಪ್ತ ಮುದ್ರಧಾರಣೆ ನಡೆಯಿತು.ಹೊಮದಲ್ಲಿ ತಪ್ತ (ಕಾಯಿಸಿದ) ಲೋಹದ ಮುದ್ರೆಗಳನ್ನು ದೇಹದ ಮೇಲೆ ಧರಿಸುವುದು ಈ ಸಂಪ್ರದಾಯ.
undefined
ಮಾಧ್ವ ಮಠಾಧೀಶರು ಭಕ್ತರಿಗೆ ಈ ಮುದ್ರೆಗಳನ್ನು ಹಾಕುತ್ತಾರೆ
undefined
ಶಯನೀ ಏಕಾದಶಿ ಪ್ರಯುಕ್ತ ಈ ಸಂಪ್ರದಾಯ ನಡೆಯುತ್ತದೆ.
undefined
ಕೊರೋನಾದ ಹಿನ್ನೆಲೆಯಲ್ಲಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಲು ಅವಕಾಶವಿರಲಿಲ್ಲ
undefined
ಕೇವಲ ಮಠಾಧೀಶರುಗಳಿಗೆ ತಪ್ತ ಮುದ್ರಾಧಾರಣೆ ನಡೆಯಿತು.ಭಕ್ತರಿಗೆ ಮುಂದೆ ಸೂಕ್ತ ದಿನದಂದು ನಡೆಸಲಾಗುತ್ತದೆ ಎಂದು ಕೃಷ್ಣಮಠ ತಿಳಿಸಿದೆ
undefined
ಮಾಧ್ವ ಭಕ್ತರಿಗೆ ತಪ್ತಮುದ್ರಾಧಾರಣೆ ಬಹಳ ಪವಿತ್ರವಾಗಿರುತ್ತದೆ.ತಿಳಿಯದೇ ಮಾಡಿರುವ ಪಾಪಗಳೆಲ್ಲ ನಿವಾರಣೆಯಾಗುತ್ತದೆ ಎಂಬ ನಂಬಿಕೆ
undefined
ಮಳೆಗಾಲದಲ್ಲಿ ರೋಗರುಜಿನಗಳನ್ನು ದೂರ ಮಾಡುವ ವಿಧಾನವೂ ಹೌದು
undefined
ಸುದರ್ಶನ ಹೋಮ ನಡೆದು ನಂತರ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
undefined