Padma Awards; ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

Published : Nov 13, 2021, 04:51 PM IST

ಮಂಗಳೂರು(ನ.  13)  ಈ ಪೋಟೋಗಳಿಗೆ ಅಕ್ಷರದಲ್ಲಿ ಶೀರ್ಷಿಕೆ ಕೊಡಲು ಸಾಧ್ಯವೇ ಇಲ್ಲ. ನಾಡು ಮೆಚ್ಚಿದ ಸಾಧಕರ ಅಪೂರ್ವ ಸಮಾಗಮ, ದಿವ್ಯಾತ್ಮಗಳ ಸಮಾಗಮ, ಪದ್ಮವಂತರು,  ರತ್ನರ ಸಮಾಗಮ, ಮಹಾಸಮಾಗಮ,  ಶ್ರೀಸಾಮಾನ್ಯನೆ ಭಗವನ್ ಮಾನ್ಯಂ, ಶ್ರೀ ಸಾಮಾನ್ಯನೆ ಭಗವತ್ ಧನ್ಯಮ್ , ಶಿಕ್ಷಣ ಮತ್ತು ಅರಣ್ಯ ಒಟ್ಟಿಗೆ ಹೆಜ್ಜೆ ಹಾಕಿತು.. ಏನು  ಬೇಕಾದರೂ ಕರೆಯಬಹುದು. ಪದ್ಮಶ್ರೀ  (Padma Awards)ಪುರಸ್ಕೃತರ ಸಮಾಗಮವಾಗಿದೆ. ಹರೇಕಳ ಹಾಜಬ್ಬ(Harekala Hajabba) ಅವರನ್ನು ವೃಕ್ಷಮಾತೆ ತುಳಸಿ ಗೌಡ (Tulasi Gowda)ಭೇಟಿ ಮಾಡಿದ್ದಾರೆ.

PREV
19
Padma Awards; ಮಂಗಳೂರಲ್ಲಿ ಒಟ್ಟಿಗೆ ಹೆಜ್ಜೆ ಹಾಕಿದ ಅಕ್ಷರ ಸಂತ ಮತ್ತು ವೃಕ್ಷಮಾತೆ, ದಿವ್ಯ ಸಮಾಗಮ

ಪದ್ಮಶ್ರೀ ಪುರಸ್ಕೃತ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ ಅವರ ಮನೆಗೆ ಅರಣ್ಯವನ್ನೇ ಉಸಿರಾಗಿರಿಸಿಕೊಂಡಿರುವ ತುಳಸಿ ಗೌಡ ಭೇಟಿ ನೀಡಿದರು.

29

ದೆಹಲಿಯಿಂದ ಮಂಗಳೂರಿಗೆ ಆಗಮಿಸುವಾಗಲೇ ತುಳಸಿ ಗೌಡ ಹಾಜಬ್ಬ ಅವರ ಶಾಲೆ ನೋಡಬೇಕು ಎಂದು ಕೇಳಿದ್ದರು. ಅವರ ಮನೆಗೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

39

ಇದಕ್ಕಿಂತ ಅದ್ಭುತ ಕ್ಷಣಗಳು ಇನ್ನೊಂದಿಲ್ಲ. ಒಬ್ಬರು ಸಾಧಕರು ಇನ್ನೊಬ್ಬ ಸಾಧಕರಿಗೆ ದೇಣಿಗೆ ನೀಡುವುದು. ಹೌದು ವೃಕ್ಷಮಾತೆ ತುಳಸಿ ಗೌಡ ಹಾಜಬ್ಬ ಅವರಿಗೆ ಶಾಲೆ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ನೀಡಿದ್ದಾರೆ.

49
Tulasi Gowda, Harekala Hajabba

ಕಿತ್ತಳೆ ಹಣ್ಣುಗಳನ್ನು ಮಾರುತ್ತ ಬದುಕು ನಿರ್ವಹಣೆ ಮಾಡುತ್ತಿದ್ದ ಹಾಜಬ್ಬ ಅವರಿಗೆ  ಮಕ್ಕಳಗೆ ಗುಣಮಟ್ಟದ ಶಿಕ್ಷಣ ನೀಡುವ ಕನಸು ಹುಟ್ಟಿಕೊಂಡಿತು.  ಕಚೇರಿಯಿಂದ ಕಚೇರಿಗೆ ಅಲೆದ ಹಾಜಬ್ಬ ಅವರು ತಾವು ಉಳಿತಾಯ ಮಾಡಿದ್ದ ಹಣವನ್ನು ಸಂಪೂರ್ಣ ದಾನ ಮಾಡಿ ತೃಪ್ತರಾದರು.

59

ಕೊನೆಗೂ ಹಾಜಬ್ಬ ಅವರ  ಕರೆಗೆ ಜನಪ್ರತಿನಿಧಿಗಳು ಸ್ಪಂದಿಸಿದ್ದರು. ಊರಿನಲ್ಲಿ ಪ್ರೌಢಶಾಲೆ ತಲೆ ಎತ್ತಿತು. ಅಕ್ಷರ ಸಂತ ಎಂದೆ ಖ್ಯಾತಿ ಪಡೆದುಕೊಂಡ ಹಾಜಬ್ಬ  ಬರಿಗಾಲಿನಲ್ಲಿಯೇ ಹೋಗಿ ಪದ್ಮಶ್ರೀ  ಗೌರವಕ್ಕೆ ಪಾತ್ರವಾದ ಕ್ಷಣಗಳು ಅದ್ಭುತ.

69

ವೃಕ್ಷಮಾತೆ ತುಳಸಿ ಗೌಡ ಅವರದ್ದು ಇನ್ನೊಂದು ಧೀಮಂತ  ಜೀವನ.  ಪರಿಸರ ಪ್ರೇಮಿ ತುಳಸಿ ಉತ್ತರ ಕನ್ನಡ ಜಿಲ್ಲೆ  ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದವರು. ಇಲ್ಲಿಯವರೆಗೆ ಇವರು ನೆಟ್ಟ ಸಸಿಗಳು ಅದೆಷ್ಟು ಹೆಮ್ಮರವಾಗಿದೆಯೋ ಲೆಕ್ಕವೇ ಇಲ್ಲ.

79

ಅರಣ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತ ಸಸಿ ನೆಡುತ್ತಿದ್ದ ತುಳಸಿ ಗೌಡ ಅದನ್ನೇ ನಂತರ ತಮ್ಮ ಕಾಯಕವನ್ನಾಗಿರಿಸಿಕೊಂಡರು. ವರ್ಷಕ್ಕೆ ಮೂವತ್ತು ಸಾವಿರ ಸಸಿಗಳನ್ನು  ನೆಟ್ಟು ಪೋಷಿಸಿಕೊಂಡು ಬರುವುದು ಸಾಮಾನ್ಯದ ಮಾತಲ್ಲ.

89

ಒಇಬ್ಬರು ದಿಗ್ಗಜರ ಸಮಾಗಮ ಅಲ್ಲಿ ನೆರೆದ ಜನರಲ್ಲಿ ವಿದ್ಯುತ್ ಸಂಚಾರಕ್ಕೆ ಕಾರಣವಾಗಿತ್ತು. ಶಿಕ್ಷಣ ಪ್ರೇಮಿ ಹಾಜಬ್ಬ ಮತ್ತು ವೃಕ್ಷಮಾತೆ ತುಳಸಿ ಗೌಡ ಒಟ್ಟಿಗೆ ಹೆಜ್ಜೆ ಹಾಕಿದ ಕ್ಷಣಗಳೇ ಒಂದು ದಿವ್ಯ ಅನುಭೂತಿ. x

99

ಮಕ್ಕಳೊಂದಿಗೆ ಬೆರೆತರು; ಸಾಮಾನ್ಯರಾಗಿದ್ದುಕೊಂಡೆ ಸಾಧನೆ ಮಾಡಿದ  ಚೇತನಗಳು ಮಕ್ಕಳೊಂದಿಗೆ ಬೆರೆತರು.  ಪದ್ಮ ಪುರಸ್ಕಾರದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು  ಹೋದ ಇಬ್ಬರು ದಿಗ್ಗಜರಿಗೆ ಮತ್ತೊಮ್ಮೆ ಅಭಿನಂದನೆ. 

Read more Photos on
click me!

Recommended Stories