1896ರಲ್ಲಿ ಡಿಸ್ಪೆನ್ಸರಿಯಾಗಿ ಆರಂಭವಾದ ಸಂಸ್ಥೆ 125 ವರ್ಷದವರೆಗೂ ಸೇವೆ ನೀಡಿದೆ. ಪ್ಲೇಗ್‌ನಿಂದ ಆರಂಭವಾಗಿ ಇತ್ತೀಚೆಗೆ ಕೋವಿಡ್ ತಡೆಗಟ್ಟುವವರೆಗೂ ಈ ಸಂಸ್ಥೆ ಕಾರ್ಯನಿರ್ವಹಿಸಿದೆ. 125ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳನ್ನು ಆಹ್ವಾನಿಸುವ ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷವಾಗಿದೆ. ಜಗತ್ತಿನ ಅನೇಕ ದೇಶಗಳು 100 ವರ್ಷವನ್ನೇ ಪೂರೈಸಿಲ್ಲ. ಅಂತಹದ್ದರಲ್ಲಿ ಮಿಂಟೋ ಸಂಸ್ಥೆ 125 ವರ್ಷ ಪೂರೈಸಿರುವುದು ಕನ್ನಡಿಗರಿಗೆ(Kannadigas) ಹೆಮ್ಮೆ ತರುವ ವಿಷಯ ಎಂದು ಹೇಳಿದರು. ಶಾಸಕ ಜಮೀರ್ ಅಹ್ಮದ್‌ಖಾನ್, ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್, ಬೆಂಗಳೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಂತಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.