ಲಾಕ್‌ಡೌನ್‌ ಎಫೆಕ್ಟ್‌: ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ, ಸಂಕಷ್ಟದಲ್ಲಿ ಅಲೆಮಾರಿ ಕುಟುಂಬ

First Published | May 22, 2020, 9:06 AM IST

ಹುಬ್ಬಳ್ಳಿ(ಮೇ.22): ಲಾಕ್‌ಡೌನ್‌ ಕಾರಣದಿಂದ ಊರಿಗೆ ಹೋಗಲಾಗದೆ ಸಿಲುಕಿದ ಪಂಜಾಬ್‌ ಮೂಲದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲೇ ಗಂಡು ಮಗುವಿśಗೆ ಜನ್ಮ ನೀಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ. ಆದರೆ, ಉಳಿದುಕೊಳ್ಳಲು ಸೂಕ್ತ ಸ್ಥಳವಿಲ್ಲದೆ ನವಜಾತ ಶಿಶುವಿನ ಜತೆ ಮರದ ಕೆಳಗೆ ತಾಡಪತ್ರೆ ಜೋಪಡಿಯಡಿ ಆಸರೆ ಪಡೆದಿದ್ದಾರೆ.

ಪಂಜಾಬ್‌ನ ಫರೀದಕೋಟ್‌ ಮೂಲದ ದಾನ್‌ ಕೌರ್‌ ಎರಡು ದಿನದ ಹಿಂದೆ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ
undefined
ಕಳೆದ ಆರು ತಿಂಗಳಿಂದ ಹುಬ್ಬಳ್ಳಿಯಲ್ಲಿ ಜೋಪಡಿಯಲ್ಲಿ ಆಯುರ್ವೇದ ಔಷಧ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಧರ್ಮಸಿಂಗ್‌ ಬಾಬುಸಿಂಗ್‌ ಕುಟುಂಬ
undefined

Latest Videos


ದಾನ್‌ ಕೌರ್‌ ಅವರಿಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿದೆ. ಬಳಿಕ ಕಿಮ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ.
undefined
ಊರಿಗೆ ಹೋಗಲು ವಾಹನಕ್ಕೆ ಡಿಸೇಲ್‌ ಹಾಕಿಸುವಷ್ಟು ಹಣವಿಲ್ಲ. ಬಾಣಂತಿಯ ಹಾಗೂ ಮಗುವಿನ ಆರೈಕೆಗೂ ಏನು ಇಲ್ಲದಂತಾಗಿದೆ. ಮಳೆ ಕೂಡ ಆಗಾಗ ಬರುತ್ತಿದ್ದು, ಜೋಪಡಿಯಲ್ಲಿ ಮಗುವನ್ನು ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ.
undefined
click me!