ಇವು ಜಿಗಿಯುವ ಕಪ್ಪೆಗಳಲ್ಲ, ತೇಲೋ ಕಪ್ಪೆಗಳು..! ಇಲ್ಲಿವೆ ಫೋಟೋಸ್

Suvarna News   | Asianet News
Published : May 21, 2020, 03:45 PM ISTUpdated : May 21, 2020, 03:48 PM IST

ಕಪ್ಪೆಗಳು ತೇಲುತ್ತವೆ ಎಂದರೆ ನಂಬುತ್ತೀರಾ..? ಅರೆ ಕಪ್ಪೆಗಳು ಜಿಗಿಯುತ್ತವೆ ಎಂದು ನೀವು ಹೇಳಿದರೆ ಇಲ್ಲಿ ಕೇಳಿ. ತೇಲುವ ಕಪ್ಪೆಗಳೂ ಇವೆ. ಏನಿದು ವಿಶೇಷ..? ಇಲ್ಲಿವೆ  ವನ್ಯಜೀವಿ ‌ಛಾಯಾಗ್ರಹಕ ಕಾರ್ತಿಕ್‌ ಭಟ್ ಕಾರ್ಕಳ ಕ್ಲಿಕ್ಕಿಸಿದ ಕೆಲವು ಫೋಟೋಸ್

PREV
15
ಇವು ಜಿಗಿಯುವ ಕಪ್ಪೆಗಳಲ್ಲ, ತೇಲೋ ಕಪ್ಪೆಗಳು..! ಇಲ್ಲಿವೆ ಫೋಟೋಸ್

ಭಾರತದ ಪಶ್ಚಿಮಘಟ್ಟಗಳ ಬಹುತೇಕ ಪ್ರದೇಶಗಳಲ್ಲಿ, ಕಂಡುಬರುವ ರಾಕೊಫೋರಿಡೆ ಕುಟುಂಬದ ಒಂದು ಮರಗಪ್ಪೆಯ ಪ್ರಭೇದಗಳಲ್ಲಿ ಈ ಮಲಬಾರ್ ಗ್ಲೈಡಿಂಗ್ ಜಾತಿಯ ಕಪ್ಪೆ ಆತ್ಯಂತ ಪ್ರಸಿದ್ಧ ವಾಗಿದೆ. ಇವುಗಳು ಕುದುರೆ ಮಖ ಪಶ್ಚಿಮಘಟ್ಟ ತಪ್ಪಲು ಪ್ರದೇಶ ಭಾಗದ ನಿತ್ಯ ಹರಿದ್ವರ್ಣ, ಎಲೆ ಉದುರುವ ಕಾಡುಗಳಲ್ಲಿ ಮರಗಳ ಮೇಲ್ಭಾಗದಲ್ಲಿ, ಹೆಚ್ಚಾಗಿ ಕಾಣಬಹುದಾಗಿದೆ.

25

ಪ್ರತಿಯೊಂದು ‌ಕಪ್ಪೆ ಪ್ರಬೇದಕ್ಕೂ ವಿಶಿಷ್ಟವಾದ ಬಣ್ಣ ಗುರುತುಗಳಿವೆ. ವಟರ್ ವಟರ್ ಎಂದು ಸದ್ದು ಮಾಡುವ ಕಪ್ಪೆಗಳ ಪರಿಚಯ ಅದೆಷ್ಟೋ ಮಂದಿಗೆ ಇದೆಯೋ ? ಗೊತ್ತಿಲ್ಲ. ಅದ್ರೆ ಗ್ರಾಮೀಣ ಪ್ರದೇಶ‌‌ ನಿವಾಸಿಗಳಿಗೆ ಕಪ್ಪೆಗಳ ಪರಿಚಯ ಅಂತು ಇದ್ದೇ‌‌ ಇರುತ್ತೆ.‌‌

35

ಒಂದು ಕಡೆಯಿಂದ ಮತ್ತೊಂದು ಕಡೆಗೆ ಬಹುತೇಕ ಕಪ್ಪೆಗಳು ಜಿಗಿದು ಕೊಂಡು ಸಂಚರಿದರೆ,ಈ ಅಪರೂಪದ ಮಲಬಾರ್ ಕಪ್ಪೆಗಳು ಮಾತ್ರ ತೇಲಿ ‌ಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಮ್ಮ ಪ್ರಯಾಣವನ್ನು ಬೆಳೆಸುವುದು ವಿಶೇಷ ವಾಗಿದೆ.

45

ಇವುಗಳಿಗೆ ಉದ್ದವಾದ ಕಾಲುಗಳ ನಡುವೆ ಮತ್ತು ಉದ್ದಕ್ಕೂ ಚರ್ಮದ ಅಂಚುಗಳು, ಹಿಮ್ಮಡಿಯಲ್ಲಿ ತ್ರಿಕೋನ ಆಕಾರದಲ್ಲಿ ಚರ್ಮದ ವಿಸ್ತರಣೆಯಿಂದ ಕೂಡಿದ್ದು ಬೆರಳುಗಳು ಮತ್ತು ಕಾಲ್ಬೆರಳುಗಳ ನಡುವಿನ ವೆಬ್‌ಬಿಂಗ್ (ಚರ್ಮದ ಜಾಲ ) ರೂಪದ ಸಹಾಯದಿಂದ ಇವುಗಳು ಗಾಳಿಯಲ್ಲಿ ತೇಲಿ ಕೊಂಡು ಚಲಿಸುತ್ತದೆ.

55

ಮಲಬಾರ್ ಗ್ಲೈಡಿಂಗ್ ಕಪ್ಪೆಗಳು ಬೆಳಗ್ಗೆ ‌ಹೊತ್ತಿನಲ್ಲಿ ಮರದ ಎಲೆಗಳ‌ ಮದ್ಯ ಭಾಗದಲ್ಲಿ ವಿಶ್ರಾಂತಿ ಪಡೆದು ರಾತ್ರಿ ಕಳೆದಂತೆ ಧರೆಗೆ ಇಳಿದು ತಮ್ಮ ಚಟುವಟಿಕೆ ನಿರತರಾಗುತ್ತವೆ. ಮರಗಳ ಮೇಲೆ ಕುಳಿತುಕೊಂಡ ಸಂದರ್ಭದಲ್ಲಿ ಯಾವುದೇ ಕಾಲ್ ಸದ್ದುಗಳನ್ನು ಮಾಡದೇ ಸ್ತಬ್ದವಾಗಿ ಕುಳಿತುಕೊಳ್ಳುತ್ತವೆ. ಇವುಗಳು‌‌‌ ದೇಹ ಗಾತ್ರವು ಸುಮಾರು 10 ಸೆ.ಮೀ.ಗಳವರೆಗೆ (4 ಇಂಚು) ಬೆಳೆಯುತ್ತದೆ.

click me!

Recommended Stories