ಮುರಡೇಶ್ವರ-ಕಾಚಿಗುಡು ರೈಲು ಇನ್ಮುಂದೆ ಕುಮಟಾಗೆ ವಿಸ್ತರಣೆ- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ

Published : Jun 20, 2026, 05:23 PM IST

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮುರಡೇಶ್ವರ-ಕಾಚಿಗುಡ ರೈಲನ್ನು ಕುಮಟಾವರೆಗೆ ವಿಸ್ತರಿಸಿ, ಹಸಿರು ನಿಶಾನೆ ತೋರಿದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದ್ದು, ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ. 

PREV
15
ಮುರಡೇಶ್ವರ-ಕಾಚಿಗುಡ

ಇಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕುಮಟಾವರೆಗೂ ವಿಸ್ತರಣೆಯಾಗಿರುವ ಮುರಡೇಶ್ವರ-ಕಾಚಿಗುಡ ರೈಲಿಗೆ ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಉತ್ತರ ಕನ್ನಡ ಜಿಲ್ಲೆಯ ಕುಮಟಾ ರೈಲ್ವೇ ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೀಡಲಾಯ್ತು.

25
ಕುಮಟಾ ನಿಲ್ದಾಣದವರೆಗೆ ವಿಸ್ತರಣೆ

ಈ ಹಿಂದೆ ಕಾಚಿಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್‌ ಮುರುಡೇಶ್ವರವರೆಗೆ ಮಾತ್ರ ಸೀಮಿತವಾಗಿತ್ತು. ಇದೀಗ ಈ ರೈಲು ಕುಮಟಾ ನಿಲ್ದಾಣದವರೆಗೆ ವಿಸ್ತರಣೆಯಾಗಿರೋದಕ್ಕೆ ಸಂಸದರು ಚಾಲನೆ ನೀಡಿದ್ದರು. ಈ ವಿಸ್ತರಣೆಯಿಂದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಅಂಕೋಲಾ ಭಾಗದ ಜನರಿಗೆ ಅನುಕೂಲವಾಗಲಿದೆ. ವಾರದಲ್ಲಿ ಎರಡು ದಿನ ಈ ರೈಲು ಸಂಚರಿಸಲಿದೆ.

35
ಗೋಕರ್ಣ ನಿಲ್ದಾಣದ ಪ್ಲಾಟ್‌ಫಾರಂ ಅಭಿವೃದ್ಧಿ

ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ರೈಲು ಕುಮಟಾಗೆ ಬರಬೇಕು ಎಂಬ ಒತ್ತಾಯವವಿತ್ತು. ಶಾಸಕರು ಮತ್ತು ನಮ್ಮ ಪರಿಶ್ರಮದಿಂದ ಜನರ ಬೇಡಿಕೆ ಈಡೇರಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಗೋಕರ್ಣ ನಿಲ್ದಾಣದ ಪ್ಲಾಟ್‌ಫಾರಂ ಅಭಿವೃದ್ಧಿ ಮಾಡಲಾಗಿದೆ. ಈ ಹಿಂದೆ ಪ್ಲಾಟ್‌ಫಾರಂ ಚಿಕ್ಕದಾಗಿತ್ತು ಎಂದು ಹೇಳಿದರು.

45
ಅಭಿವೃದ್ಧಿಯ ಕೆಲಸಗಳ ಮಾಹಿತಿ ನೀಡಿದ ಸಂಸದರು

ಕುಮಟಾ, ಭಟ್ಕಳ ಮತ್ತು ಮುರಡೇಶ್ವರ ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕೆಲವು ಕಡೆ ರೈಲಿನ ಉದ್ದದಷ್ಟು ಪ್ಲಾಟ್‌ಫಾರಂ ಇರಲಿಲ್ಲ. ಈಗ ಪ್ಲಾಟ್‌ಫಾರಂಗಳನ್ನು ವಿಸ್ತರಣೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ರೀತಿಯ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಇದನ್ನೂ ಓದಿ: ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!

55
ರೈಲು ಸಂಖ್ಯೆ 12790/89 ಕಾಚಿಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್‌

ಕಾಚಿಗುಡ-ಮುರುಡೇಶ್ವರ ಎಕ್ಸ್‌ಪ್ರೆಸ್‌ ಬುಧವಾರ ಮತ್ತು ಶನಿವಾರ ಸಂಚರಿಸುತ್ತದೆ. ಈ ರೈಲು ಕರ್ನಾಟಕದಲ್ಲಿ ಕುಮಟಾ, ಮುರಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ, ಮಂಗಳೂರು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.

ಇದನ್ನೂ ಓದಿ: ಪುತ್ತೂರು-ಸುಬ್ರಹ್ಮಣ್ಯ 3 ಹೊಸ ರೈಲ್ವೆ ಓವರ್‌ಬ್ರಿಜ್ ಗೆ ₹18 ಕೋಟಿ, ದ.ಕನ್ನಡ ರಸ್ತೆ ಅಭಿವೃದ್ಧಿಗೆ 57 ಕೋಟಿ ಅನುದಾನ!

Read more Photos on
click me!

Recommended Stories