ಸಚಿವ ಸತೀಶ್ ಜಾರಕಿಹೊಳಿ‌ ಕರೆದೊಯ್ಯಬೇಕಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆ: ಕೊನೆ ಕ್ಷಣದಲ್ಲಿ ಆದದ್ದೇನು?

Published : Nov 01, 2025, 10:23 AM IST

Satish Jarkiholi vehicle fuel leak: ಬೆಳಗಾವಿಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಥಸಂಚಲನ ಪರಿವೀಕ್ಷಣಾ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾಗಿದೆ. ಈ ಅನಿರೀಕ್ಷಿತ ಘಟನೆಯಿಂದಾಗಿ, ಕೊನೆ ಕ್ಷಣದಲ್ಲಿ ಸಚಿವರ ಪರಿವೀಕ್ಷಣೆಯನ್ನು ರದ್ದುಗೊಳಿಸಲಾಯಿತು.

PREV
15
ವಾಹನದಲ್ಲಿ ಇಂಧನ ಸೋರಿಕೆ

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ‌ ಕರೆದೊಯ್ಯಬೇಕಿದ್ದ ವಾಹನದಲ್ಲಿ ದಿಢೀರ್ ಇಂಧನ ಸೋರಿಕೆಯಾಗಿತ್ತು. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

25
ಏರ್ ಗ್ಯಾಸ್ ಸಿಂಪಡಣೆ

ಸಚಿವರ ಪಥಸಂಚಲನ ಪರಿವೀಕ್ಷಣೆಗೆ ವಾಹನವನ್ನು ಸಹ ಹೂಗಳಿಂದ ಅಲಂಕರಿಸಲಾಗಿತ್ತು. ತೆರೆದ ವಾಹನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ತೆರಳಬೇಕಿತ್ತು. ಕ್ರೀಡಾಂಗಣದಲ್ಲಿ ವಾಹನ ನಿಲ್ಲಿಸಿದಾಗ ಇಂಧನ ಸೋರಿಕೆಯಾಗುತ್ತಿರೋದು ಕಂಡು ಬಂದಿದೆ. ಇಂಧನ ಸೋರಿಕೆ ಹಿನ್ನೆಲೆಯಲ್ಲಿ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಯಿಂದ ಏರ್ ಗ್ಯಾಸ್ ಸಿಂಪಡಣೆ ಮಾಡಿದ್ದಾರೆ.

35
ದಿಢೀರ್ ಇಂಧನ ಸೋರಿಕೆಗೆ ಕಾರಣ ಏನು?

ಇಂಧನ ಸೋರಿಕೆ ಹಿನ್ನೆಲೆ ಸಚಿವರ ಪಥಸಂಚಲನ ಪರಿವೀಕ್ಷಣೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಯ್ತು. ಪರಿವೀಕ್ಷಣೆ ಇಲ್ಲದೇ ಪೊಲೀಸ್, ಕೆಎಸ್‌ಆರ್‌ಪಿ, ಎನ್‌ಸಿಸಿ, ಸ್ಕೌಟ್ ಆ್ಯಂಡ್ ಗೈಡ್ಸ್ ಸೇರಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ದಿಢೀರ್ ಇಂಧನ ಸೋರಿಕೆಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ: Kannada Rajyotsava Wishes: 70 ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು, ಹಿನ್ನೆಲೆ ಮತ್ತು ಇತಿಹಾಸ ತಿಳಿಯಿರಿ

45
ಕನ್ನಡಮಯವಾದ ಬೆಳಗಾವಿ

ಗಡಿನಾಡು ಬೆಳಗಾವಿ ನಗರವು ಕರ್ನಾಟಕ ರಾಜ್ಯೋತ್ಸವಕ್ಕೆ ಮದುವಣಗಿತ್ತಿಯಂತೆ ಸಜ್ಜುಗೊಂಡಿದೆ. ಇಡೀ ನಗರವೇ ಕನ್ನಡಮಯವಾಗಿದೆ. ಎಲ್ಲೆಲ್ಲೂ ಕೆಂಪು ಹಳದಿ ಬಣ್ಣದ ಕನ್ನಡಬಾವುಟ ರಾರಾಜಿಸುತ್ತಿವೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ನಾಯಕರಿಗೆ ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

ಇದನ್ನೂ ಓದಿ: Kannada Rajyotsava: ದೇಶ ಯಾವುದಾದರೇನು ಕನ್ನಡ ಕಂಪನು ಮೆರೆವೆನು: ವಿದೇಶದಲ್ಲೂ ಕನ್ನಡತನ ಬೆಳೆಸುತ್ತಿರುವ ಕನ್ನಡಿಗರು

55
ಕನ್ನಡ ರಾಜ್ಯೋತ್ಸವ

ನವೆಂಬರ್ 1ರಂದು ಆಚರಿಸಲಾಗುವ ಕನ್ನಡ ರಾಜ್ಯೋತ್ಸವು ಕರ್ನಾಟಕದ ಸಂಸ್ಥಾಪನಾ ದಿನವಾಗಿದೆ. 1956 ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು (ಈಗಿನ ಕರ್ನಾಟಕ) ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ರಚಿಸಲಾಯಿತು. ಈ ಹಬ್ಬದ ಮುಖ್ಯ ಉದ್ದೇಶಗಳು ಕರ್ನಾಟಕದ ಏಕೀಕರಣವನ್ನು ಸ್ಮರಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಗೌರವಿಸುವುದು, ಮತ್ತು ನಾಡಿನ ಸಾಧಕರನ್ನು ಗೌರವಿಸುವುದಾಗಿದೆ.

ಇದನ್ನೂ ಓದಿ:  ಕನ್ನಡ ರಾಜ್ಯೋತ್ಸವ 2025: ನಿಮ್ಮ ಆಪ್ತರಿಗೆ ಕನ್ನಡಿಗರ ಹಬ್ಬದ ಶುಭಾಶಯ ತಿಳಿಸಿ

Read more Photos on
click me!

Recommended Stories