ಗುಂಡ್ಲುಪೇಟೆ: ಬಂಡೀಪುರದಲ್ಲಿ ಸಚಿವ ಲಿಂಬಾವಳಿಯಿಂದ ಸಫಾರಿ

First Published Apr 12, 2021, 8:36 AM IST

ಗುಂಡ್ಲುಪೇಟೆ(ಏ.12): ಬಂಡೀಪುರ ಅರಣ್ಯದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಸಫಾರಿ ನಡೆಸಿದ್ದು, ಈ ವೇಳೆ ಅವರಿಗೆ ಎರಡು ಹುಲಿ ಹಾಗೂ ಆನೆಗಳ ದರ್ಶನ ಆಗಿದೆ.

ಬಂಡೀಪುರ ವಲಯ ಕಳ್ಳಬೇಟೆ ತಡೆ ಶಿಬಿರಕ್ಕೆ ತೆರಳುವಾಗ ಮಾರ್ಗ ಮಧ್ಯೆ ಕುರಬನಕಟ್ಟೆಯ ನೀರಿನಲ್ಲಿ ಕುಳಿತಿದ್ದ ಹುಲಿ ದರ್ಶನ ನೀಡಿದೆ ಹಾಗೂ ಗಾರೆಪಾಲದ ಬಳಿ ಮತ್ತೊಂದು ಹುಲಿ ಕಂಡಿದೆ. ಆ ಬಳಿಕ ಆನೆಗಳ ಹಿಂಡು ಕೂಡ ಲಿಂಬಾವಳಿ ಅವರ ಕಣ್ಣಿಗೆ ಬಿದ್ದಿದೆ.
undefined
ಈ ಭಾಗದ ಪ್ರಸಿದ್ಧ ದೇವಾಲಯವಾದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ಅರಣ್ಯ ಸಚಿವ ಭೇಟಿ ನೀಡಿ ದೇವರ ದರ್ಶನ ಪಡೆದರು. ಇದಕ್ಕೂ ಮುನ್ನ ಬೇಸಿಗೆ ಇರುವ ಕಾರಣ ಬಂಡೀಪುರ ಅರಣ್ಯದಲ್ಲಿ ವನ್ಯಜೀವಿಗಳಿಗೆ ಎದುರಾಗಬಹುದಾದ ನೀರಿನ ಸಮಸ್ಯೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಅರಣ್ಯ ಮತ್ತು ಕನ್ನಡ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
undefined
ಬಂಡೀಪುರಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಅರಣ್ಯ ಹಾಗೂ ಪ್ರಾಣಿಗಳ ಬಗ್ಗೆ ಮಾಹಿತಿ ಪಡೆದು ನೀರಿನ ಸಮಸ್ಯೆ ಕುರಿತು ಚರ್ಚೆ ನಡೆಸಿದ ಸಚಿವರು
undefined
ಬಂಡೀಪುರ ಅರಣ್ಯದಲ್ಲಿ ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ನೀರಿಗೆ ಹಾಹಾಕಾರವಿರುವ ಸಂಬಂಧ ಸಭೆ ನಡೆಸಲಾಗಿದ್ದು, ಮುಂದಿನ ಬೇಸಿಗೆಗೆ ನೀರಿನ ಅಭಾವ ಇರದಂತೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದ ಲಿಂಬಾವಳಿ
undefined
click me!