ಮಸ್ಕಿ ಉಪಚುನಾವಣಾ ಅಖಾಡ: ದಲಿತರ ಮನೆಯಲ್ಲಿ ಸಿಎಂ ಉಪಹಾರ

Kannadaprabha News   | Asianet News
Published : Apr 10, 2021, 12:27 PM ISTUpdated : Apr 10, 2021, 01:44 PM IST

ರಾಯಚೂರು(ಏ.10): ಉಪಚುನಾವಣೆ ನಿಮಿತ್ತ ಎರಡು ದಿನಗಳ ಕಾಲ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಸ್ಕಿಯ ಅಂಬೇಡ್ಕರ್‌ ನಗರದ ಪರಿಶಿಷ್ಟ ಜಾತಿಯ ಖಾಸಿಂ ಮುರಾರಿ ಅವರ ಮನೆಯಲ್ಲಿ ಉಪಹಾರ ಸೇವಿಸಿ ಕೆಲಹೊತ್ತು ಸಮಯ ಕಳೆದಿದ್ದಾರೆ.

PREV
14
ಮಸ್ಕಿ ಉಪಚುನಾವಣಾ ಅಖಾಡ: ದಲಿತರ ಮನೆಯಲ್ಲಿ ಸಿಎಂ ಉಪಹಾರ

ಮನೆಗೆ ಸಿಎಂ ಆಗಮಿಸುತ್ತಿದ್ದಂತೆ ಬಾಜಾ ಭಜಂತ್ರಿ ಸಮೇತ ಯುವತಿಯರು ಆರತಿ ಬೆಳಗಿ ಸ್ವಾಗತ

24

ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಎರಡೂ ಕೈಗಳನ್ನು ಸ್ಯಾನಿಟೈಸರ್‌ ಮಾಡಿಕೊಂಡ ಸಿಎಂ ಯಡಿಯೂರಪ್ಪ

34

ಸಿಎಂಗೆ ಮಂಡಾಳ ಚುಡ್ವಾ, ಅವಲಕ್ಕಿ, ಉಪ್ಪಿಟ್ಟು, ಸಿರಾ ಹಾಗೂ ಚಹಾ ವ್ಯವಸ್ಥೆ ಮಾಡಿದ್ದರು. ಚುಡ್ವಾ ಮತ್ತು ಉಪ್ಪಿಟ್ಟನ್ನು ನಾಲ್ಕು ತುತ್ತು ತಿಂದು ಉಪಹಾರ ಮುಗಿಸಿದ ಸಿಎಂ, ಚಹಾ ಕುಡಿದರು. ಮಿನರಲ್‌ ನೀರು ಕುಡಿದರು. ಕುಟುಂಬದ ಸದಸ್ಯರೊಂದಿಗೆ ಕುಶಲೋಪರಿ ವಿಚಾರಿಸಿ, ಹೊರ ಬಂದರು.

44

ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಜುಗೌಡ, ಪರಣ್ಣ ಮುನ್ನೊಳ್ಳಿ, ಬಸವರಾಜ ಧಡೆಸೂಗೂರ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಇತರರು ಇದ್ದರು.

click me!

Recommended Stories