ರಾಜ್ಯಮಟ್ಟದ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದ ಈಶ್ವರಪ್ಪ

First Published Apr 10, 2021, 10:56 AM IST

ಹುಬ್ಬಳ್ಳಿ(ಏ.10):  ರಾಜ್ಯಾದ್ಯಂತ ಮಳೆ ನೀರಿಂಗಿಸುವ ಮಹತ್ವಾಕಾಂಕ್ಷೆಯ ಜಲಶಕ್ತಿ ಅಭಿಯಾನಕ್ಕೆ (ಕ್ಯಾಚ್‌ ದಿ ರೇನ್‌) ಹುಬ್ಬಳ್ಳಿಯಲ್ಲಿ ಚಾಲನೆ ನೀಡಲಾಯಿತು. ಅಭಿಯಾನದ ಭಾಗವಾಗಿ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಒಂದೇ ಒಂದು ಹನಿ ಮಳೆ ನೀರು ಕೂಡ ವ್ಯರ್ಥವಾಗಬಾರದು, ಆ ನಿಟ್ಟಿನಲ್ಲಿ 100 ದಿನಗಳ ಕಾಲ ನಿರಂತರ ಅಭಿಯಾನ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಧಾರವಾಡ ಜಿಪಂ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ‘ಕ್ಯಾಚ್‌ ದಿ ರೇನ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
undefined
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಧಾರವಾಡ ಜಿಪಂ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ‘ಕ್ಯಾಚ್‌ ದಿ ರೇನ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
undefined
ಈ ವೇಳೆ ಮಾತನಾಡಿದ ಈಶ್ವರಪ್ಪ, ಭೂಮಿಗೆ ಬಿದ್ದ ಪ್ರತಿ ಹನಿ ನೀರನ್ನೂ ಇಂಗಿಸುವ ಮಹತ್ತರ ಯೋಜನೆಯಿದು. ಕೇಂದ್ರ ಸರ್ಕಾರ ಮಾರ್ಚ್‌ ತಿಂಗಳಲ್ಲಿ ಈ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದಲ್ಲಿ ಮಾತ್ರ ಈ ಯೋಜನೆಗೆ ಈಗ ಚಾಲನೆ ಸಿಕ್ಕಿದೆ. ಮುಂಬರುವ 100 ದಿನಗಳ ಕಾಲ ಪ್ರತಿ ವಿಧಾನಸಭಾ ಕ್ಷೇತ್ರ, ಗ್ರಾಮಗಳಲ್ಲಿ ಈ ಯೋಜನೆಯ ಕೆಲಸಗಳು ನಡೆಯಲಿವೆ. ಇದ್ಕಕಾಗಿ ರಾಜ್ಯಾದ್ಯಂತ 3 ಲಕ್ಷಕ್ಕೂ ಅಧಿಕ ವಿವಿಧ ಕಾಮಗಾರಿಗಳ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ಕಾಗಿ 4,310 ಕೋಟಿ ವಿನಿಯೋಗಿಸಲು ಉದ್ದೇಶಿಸಲಾಗಿದೆ ಎಂದರು.
undefined
ನರೇಗಾ ಯೋಜನೆಯಡಿ ಉದ್ಯೋಗ ಅರಸಿ ಬರುವವರಿಗೆ ತ್ವರಿತವಾಗಿ ಜಾಬ್‌ಕಾರ್ಡ್‌ ನೀಡಿ ಉದ್ಯೋಗ ಒದಗಿಸುವ ಕಾರ್ಯಕ್ಕೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ರಾಜ್ಯದ ಸಾಧನೆಯನ್ನು ಕೇಂದ್ರ ಸರ್ಕಾರ ಪ್ರಶಂಸೆ ಮಾಡಿ ಕಳೆದ ಬಾರಿ 800 ಕೋಟಿ ಅನುದಾನ ಹೆಚ್ಚುವರಿಯಾಗಿ ನೀಡಿದೆ. ಕೇಂದ್ರ ಸರ್ಕಾರ ಇಟ್ಟಿರುವ ಈ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ರೀತಿಯಲ್ಲಿ ಜಲಶಕ್ತಿ ಅಭಿಯಾನ ಯಶಸ್ವಿಗೊಳಿಸಬೇಕು. ಇಡೀ ದೇಶಕ್ಕೆ ಕರ್ನಾಟಕ ಮಾದರಿಯಾಗುವಂತೆ ಎಲ್ಲರೂ ಕೈಜೋಡಿಸಬೇಕು ಎಂದರು.
undefined
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ನರೇಗಾ ರಥಕ್ಕೆ ಚಾಲನೆ ನೀಡಿದರು. ಬೃಹತ್‌, ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್‌ ಶೆಟ್ಟರ್‌ ಅವರು ‘ಆಸರೆ’ ಪುಸ್ತಕ ಹಾಗೂ ನರೇಗಾ ಯಶೋಗಾಥೆಗಳ ವಿಡಿಯೋ ಲೋಕಾರ್ಪಣೆ ಮಾಡಿದರು.
undefined
ಕೊನೆಗೆ ನರೇಗಾ ಯೋಜನೆ ಸಾಧನೆ ಮಾಡಿದ ರಾಜ್ಯಮಟ್ಟದ ಪಂಚಾಯತ್‌ರಾಜ್‌ ಇಲಾಖೆಯ ವಿವಿಧ ಹಂತಗಳ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
undefined
click me!