ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಹೋಗಿದ್ದ ಪುನೀತ್ ಪೂಜಾರಿ , ಒಮನ್‌ನಲ್ಲಿ ಕೆಲಸ ಮಾಡಿಕೊಂಡಿದ್ದನು. ಕಳೆದ ಕೆಲವು ದಿನಗಳಿಂದ ಯುವತಿ ಫೋನ್ ಕಾಲ್‌ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಮೆಸೇಜ್ ಸಹ ಕಳುಹಿಸುತ್ತಿರಲಿಲ್ಲ.
ಪ್ರೇಮ ವೈಫಲ್ಯ ಹಿನ್ನೆಲೆ ವಿದೇಶದಲ್ಲಿದ್ದ ಮಂಗಳೂರು ಜಿಲ್ಲೆಯ ಯುವಕನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಪುನೀತ್ ಪೂಜಾರಿ (32) ಮೃತ ಯುವಕ. ಮಂಗಳೂರಿನ ಸೋಮೇಶ್ವರದ ಪುನೀತ್ ಕೆಲಸದ ನಿಮಿತ್ ಒಮನ್ ದೇಶದಲ್ಲಿದ್ದನು.
24
ಒಮನ್
ಕಳೆದ ಒಂದೂವರೆ ವರ್ಷಗಳಿಂದ ಪುನೀತ್ ಪೂಜಾರಿ ಒಮನ್ ದೇಶದಲ್ಲಿ ಲಿಫ್ಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಪುನೀತ್ ಪೂಜಾರಿ ಒಂದೂವರೆ ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಹಿಂದಿರುಗಿದ್ದನು. ಇದೀಗ ಪ್ರೇಮ ವೈಫಲ್ಯದಿಂದ ಆತ್ಮ-ಹತ್ಯೆ ಮಾಡಿಕೊಂಡಿದ್ದಾನೆ.
34
ಸೋಮೇಶ್ವರ ನಿವಾಸಿ
ಸೋಮೇಶ್ವರ ನಿವಾಸಿಗಳಾದ ಚಂದ್ರ ಮತ್ತು ದೀಪಾ ದಂಪತಿಯ ಪುತ್ರನಾಗಿರುವ ಪುನೀತ್, ಕಳೆದ ನಾಲ್ಕು ವರ್ಷಗಳಿಂದ ಉರ್ವಾ ನಿವಾಸಿ ಯುವತಿಯನ್ನು ಪ್ರೀತಿಸುತ್ತಿದ್ದನು. ಸೋಶಿಯಲ್ ಮೀಡಿಯಾ ಖಾತೆಗಳಲ್ಲಿಯೂ ಯುವತಿ ಜೊತೆಗಿನ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದನು.
ಕಳೆದ ಕೆಲವು ದಿನಗಳಿಂದ ಯುವತಿ ಫೋನ್ ಕರೆಗಳನ್ನು ಸ್ವೀಕರಿಸದೇ, ಸಂದೇಶಗಳಿಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಮನನೊಂದು ಪುನೀತ್ ಪ್ರಾಣ ಕಳೆದುಕೊಂಡಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಕಣ್ಣೀರು ಹಾಕುತ್ತದ್ದಾರೆ.