MA Graduation Youth Socila Work In Yadgir
ಈ ಯುವಕ ಸಮಾಜದಲ್ಲಿ ತಾಂಡವವಾಡುತ್ತಿರುವ ಜಾತಿ ಪದ್ದತಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ. ಕಳೆದ 10 ದಿನಗಳಿಂದ ಸಮಾನತೆಯ ರಥ ಯಾತ್ರೆಯನ್ನ ಆರಂಭಿಸಿರುವ ವೆಂಕಪ್ಪ ಜಾತಿ ಪದ್ದತಿ, ಶಿಕ್ಷಣ, ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾನೆ.
ಯಾದಗಿರಿ ನಗರದ ಹೊರ ಭಾಗದ ಹೊಸಹಳ್ಳಿ ಬಳಿ ತಳ್ಳೋ ಗಾಡಿಯೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ, ಕವಿ ಹಾಗೂ ಆದಿ ಪುರಷರು ಫೋಟೋಗಳಿಂದ ಡೆಕೋರೆಟ್ ಮಾಡಿ ಸಾಗುತ್ತಿರುವ ಯುವಕ ವೆಂಕಪ್ಪ. ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ನಿವಾಸಿ. ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಗೋಲ್ಡ್ ಮೆಡಲ್ ಪಡೆದಿರುವ ಈ ಯುವಕ ಮನೆ ಮಠ ಬಿಟ್ಟು ಈಗ ಊರು ಊರು ಅಲೆಯುತ್ತಿದ್ದಾನೆ.
ತಾನು ಗೋಲ್ಡ್ ಮೆಡಲ್ ಸ್ಟೂಡೆಂಟ್ ಆಗಿದ್ರು ಯಾವೋದು ಒಂದು ಕೆಲಸ ಮಾಡಿ ಮನೆ ನೋಡಿ ಕೊಳ್ಳುವ ಬದಲು ಸಮಾಜವನ್ನ ತಿದ್ದುವ ಕೆಲಸಕ್ಕೆ ಮುಂದಾಗಿದ್ದಾನೆ.
ಸುಮಾರು 10 ಹಳ್ಳಿಗಳಲ್ಲಿ ಇದೆ ತಳ್ಳುವ ಗಾಡಿಯನ್ನ ತಳ್ಳುತ್ತ ಓಡಾಡಿದ್ದಾನೆ. 180 ಹಳ್ಳಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಬೇಕು ಎಂದು ಪಣ ತೊಟ್ಟಿದ್ದಾನೆ. ವಿಶೇಷವಾಗಿ ಹಾಸ್ಟೆಲ್, ಶಾಲೆಗಳಿಗೆ ಭೇಟಿ ನೀಡುತ್ತಿದ್ದಾನೆ. ಮಕ್ಕಳಿಗೆ ಶಿಕ್ಷಣದ ಬಗ್ಗೆ ಹಾಗೂ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾನೆ.
ಇನ್ನೂ ಊರು ಊರು ಅಲೆಯುವ ವೆಂಕಪ್ಪನಿಗೆ ಊರಲ್ಲಿ ಹೋದ್ರೆ ತಿನ್ನುಲು ಊಟ ನೀಡ್ತಾಯಿದ್ದಾರೆ. ಜನ ಕೊಟ್ಟ ಊಟ ಮಾಡುವ ಯುವಕ ರಾತ್ರಿಯಾದ್ರೆ ಇದೆ ತಳ್ಳುವ ಗಾಡಿಯಲ್ಲಿಯೇ ಮಲಗುತ್ತಾನೆ. ಇನ್ನು ಕಾಲಲ್ಲಿ ಚಪ್ಪಲಿ ಕೂಡ ಹಾಕದೆ ಊರಿಂದ ಊರು ನಡೆದುಕೊಂಡೆ ಓಡಾಡುತ್ತಿದ್ದಾನೆ. ನೂರು ಜನರಿಗೆ ಭೇಟಿಯಾಗಿ ಜಾಗೃತಿ ಮೂಡಿಸಿದ್ರೆ ಒಬ್ಬರಾದ್ರು ನನ್ನ ಮಾತು ಕೇಳಿ ಬದಲಾಗಬಹುದು ಅಂತ ನಂಬಿಕೆ ಇಟ್ಟುಕೊಂಡಿದ್ದಾನೆ.
ಇನ್ನು ತನ್ನ ಜೊತೆಗೆ ಇರುವ ತಳ್ಳುವ ಗಾಡಿ ತುಂಬಾ ಸ್ವಾತಂತ್ರ್ಯ ಹೋರಾಟಗಾರರ, ಕವಿಗಳ ಹಾಗೂ ಆದಿ ಪುರಷರ ಫೋಟೋಗಳನ್ನ ಹಾಕಿದ್ದಾನೆ. ವಿಶೇಷವಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ನಾರಾಯಣ ಗುರು, ಕುವೆಂಪು, ವಾಲ್ಮೀಕಿ, ಶಿವಾಜಿ ಮಹಾರಾಜರು, ಸ್ವಾಮಿ ವಿವೇಕಾನಂದ, ಜ್ಯೋತಿ ಬಾ ಪೂಲೆ, ರಾಣಿ ಅಬ್ಬಕ್ಕದೇವಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ಸಂವಿಧಾನದ ಫೋಟೋಗಳನ್ನ ಹಾಕಿದ್ದಾನೆ. ಇನ್ನು ಊರಿಂದ ಊರಿಗೆ ಹೋದಾಗ ಮಹಾನಿಯರ ಬಗ್ಗೆ ಜನರಿಗೆ ತಿಳಿ ಹೇಳುತ್ತಿದ್ದಾನೆ.
ಯಾದಗಿರಿ ಜಿಲ್ಲೆ ಹಿಂದುಳಿದ ಜಿಲ್ಲೆಯಾಗಿದ್ದರಿಂದ ಜನರಿಗೆ ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡುವುದೆ ನನ್ನ ಉದ್ದೇಶವಾಗಿದೆ ಅಂತಾನೆ ವೆಂಕಪ್ಪ. ಇನ್ನು ಈಗಾಗಲೇ ಹತ್ತುಗಳಿಗೆ ಓಡಾಡಿರುವ ವೆಂಕಪ್ಪನ ಮಾತು ಜನ ಕೇಳ್ತಾಯಿದ್ದಾರಂತೆ. ಅದರಲ್ಲೂ ಬಾಲ್ಯ ವಿವಾಹ ಹಾಗೂ ಜಾತಿ ಪದ್ದತಿ ಜನರಿಗೆ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇನ್ನು ತಾನು ಸಾಗುವ ಮಾರ್ಗ ಮಧ್ಯೆದಲ್ಲಿ ಹತ್ತಾರು ಜನ ಕಂಡ್ರೆ ಸಾಕು ರಥ ನಿಲ್ಲಿಸಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗುತ್ತಾನೆ. ಜನ ಕೂಡ ವೆಂಕಪ್ಪನ ಕಾರ್ಯ ಶ್ಲಾಘನೀಯ ಮಾತುಗಳನ್ನ ಆಡುತ್ತಿದ್ದಾರೆ. ಒಳ್ಳೆಯ ಶಿಕ್ಷಣ ಪಡೆದಿರುವ ಯುವಕ ಯಾವೋದು ಒಂದಿ ನೌಕರಿ ಪಡೆದು ಸಾಕಿ ಸಲುವಿದ ಪೋಷಕರಿಗೆ ಸಾಕುವ ಬದಲು ಸಮಾಜವನ್ನ ತಿದ್ದುವ ಕೆಲಸಕ್ಕೆ ಮುಂದಾಗಿದ್ದಾನೆ. ಅದೇನೆ ಇರಲು ವೆಂಕಪ್ಪನ ಈ ಸೇವೆಯಿಂದ ನಾಲ್ಕು ಬದಲಾದ್ರೆ ಸಾಕು ಈತನ ಕೆಲಸಕ್ಕೆ ತೃಪ್ತಿ ಸಿಕ್ಕಂಗಾಗುತ್ತೆ.