ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಧಾರವಾಡ ಮಂದಿ..!

First Published | Sep 26, 2021, 11:18 AM IST

ಧಾರವಾಡ(ಸೆ.26): ಕಳೆದ ಕೆಲವು ದಿನಗಳಿಂದ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.  ಹೀಗಾಗಿ ಧಾರವಾಡ ತಾಲೂಕಿನ ಕಲವಗೇರಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಆರು ದಿನಗಳಿಂದ ಚಿರತೆಯನ್ನ ಹಿಡಿಯದ ಆರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. 

ಕಳೆದ 6 ದಿನದಿಂದ ನಿದ್ದೆಗೆಡಸಿದ್ದ ಚಿರತೆ ಧಾರವಾಡ ತಾಲೂಕಿನ ಕಲವಗೇರಿ ಗ್ರಾಮದಲ್ಲಿ ಬೋನಿಗೆ ಬಿದ್ದಿದೆ. ಕಬ್ಬಿಣ ಗದ್ದೆಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನು. 

ಡಿಎಪ್ ಓ ಯಶಪಾಲ್ ಕ್ಷಿರಸಾಗರ್, ಆರ್‌ಎಫ್‌ಓ ಉಪ್ಪಾರ ಮಾರ್ಗದರ್ಶನದಲ್ಲಿ ಕೊಂಬಿಂಗ್ ಕಾರ್ಯಾಚರಣೆ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು. 

Latest Videos


ಚಿರತೆಯನ್ನ ಬೋನಿಗೆ ಬಿದ್ದಿದ್ದರೂ ಸಮಾಧಾನವಾಗದ ಗ್ರಾಮಸ್ಥರು, ಚಿರತೆಯನ್ನ‌ ನಮಗೆ ತೋರಿಸಿ ತೆಗದುಕೊಂಡು ಹೋಗಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳ ವಿರದ್ಧ ಆಕ್ರೋಶ ವ್ಯಕ್ತಡಿಸಿದ್ದಾರೆ. ನೀವು ಚಿರತೆ ಹಿಡಿದಿರೋ ಇಲ್ಲೋ ಎಂಬ ನಂಬಿಕೆ ಇಲ್ಲ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. 

ಇನ್ನೂ ಚಿರತೆಯನ್ನ ತೆಗೆದುಕೊಂಡು ಹೋಗಲು ಬಂದಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ. ಚಿರತೆಯನ್ನ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದರು. ಚಿರತೆಯಿದ್ದ ಬೋನಿಗೆ ಪೂರ್ತಿ ಪ್ಯಾಕ್ ಮಾಡಿಕೊಂಡು ತೆರಳಿದ್ದಾರೆ ಅರಣ್ಯ ಇಲಾಖೆಯ ಸಿಬ್ಬಂದಿ. 

click me!