12 ಅಡಿ ಆಳಕ್ಕೆ ಅಗೆತ; ಪುರಾತತ್ವ ಇಲಾಖೆಯ ಉತ್ಖನನಕ್ಕೆ ಲಕ್ಕುಂಡಿ ಜನರಿಂದ ದಿಢೀರ್ ವಿರೋಧ

Published : Jan 31, 2026, 07:27 AM IST

ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕುರುಹು ಸಿಗದ ಜಾಗದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಇದರ ನಡುವೆಯೇ ಉತ್ಖನನದ ನಿರ್ದೇಶಕ ಡಾ. ಟಿ.ಎಂ. ಕೇಶವ್ ನಿಧನರಾಗಿದ್ದಾರೆ.

PREV
14
ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣ

ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ಒಂದೇ ಪುರಾತತ್ವ ಇಲಾಖೆ ಕೈಗೊಂಡಿರುವ ಉತ್ಖನನಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಬೇರೆಡೆ ಕಾರ್ಯ ಆರಂಭಿಸಿ ಎಂದು ತಿಳಿಸಿದ್ದಾರೆ.

24
ಐತಿಹಾಸಿಕ ಕುರುಹುಗಳು

ಕಳೆದ 13ನೇ ದಿನದಿಂದ (ಶುಕ್ರವಾರದವರೆಗೆ) ಉತ್ಖನನ ನಡೆಸಲಾಗುತ್ತಿದ್ದು, 12 ಅಡಿ ಆಳಕ್ಕೆ ಭೂಮಿ ಅಗೆದಿದ್ದರೂ ಯಾವುದೇ ಮಹತ್ವದ ಐತಿಹಾಸಿಕ ಕುರುಹುಗಳು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

34
3 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷ

ಈಗ ಸಿಗುತ್ತಿರುವ ಸಣ್ಣಪುಟ್ಟ ಕಲ್ಲುಗಳು ಗ್ರಾಮದ ಎಲ್ಲೆಡೆ ದೊರೆಯುತ್ತವೆ. ಹಾಗಾಗಿ ಬೇರೆಡೆ ಉತ್ಖನನ ಮಾಡಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನು ಶುಕ್ರವಾರ ಬೆಳಗ್ಗೆ ಉತ್ಖನನ ಜಾಗದಲ್ಲಿ 3 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದ್ದು, ಸುರಕ್ಷಿತವಾಗಿ ರಕ್ಷಿಸಿ ಹೊರಬಿಟ್ಟಿದ್ದಾರೆ. ಹಾವು ಇದ್ದಲ್ಲಿ ನಿಧಿ ಇರುತ್ತದೆ ಎಂಬ ನಂಬಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಲಕ್ಕುಂಡಿ ಬಳಿಕ ಅತೀ ದೊಡ್ಡ ಚಿನ್ನದ ಗಣಿಯಲ್ಲಿ ಹಾವಿನ ಪ್ರಭೇದದ ಕಪ್ಪು ಕಣ್ಣಿನ ಹೊಸ ಜೀವಿ ಪತ್ತೆ

44
ಲಕ್ಕುಂಡಿ ಉತ್ಖನನದ ನಿರ್ದೇಶಕ ಡಾ. ಟಿ.ಎಂ. ಕೇಶವ್ ನಿಧನ

ಉತ್ಖನನ ಕಾರ್ಯದ ನಿರ್ದೇಶಕರಾಗಿದ್ದ ಪುರಾತತ್ವ ತಜ್ಞ, ಕೇಂದ್ರ ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಟಿ.ಎಂ. ಕೇಶವ್(77) ಅವರು ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಡಾ. ಟಿ.ಎಂ. ಕೇಶವ್ ಅವರ ನೇತೃತ್ವದಲ್ಲೇ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದ್ದು. ಲಕ್ಕುಂಡಿಯ ಪುರಾತತ್ವ ಮಹತ್ವವನ್ನು ಹೊರತರುವಲ್ಲಿ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿತ್ತು. ಡಾ. ಕೇಶವ್ ಹಾಗೂ ಶೈಜೇಶ್ವರ ಅವರ ಹೆಸರಿನಲ್ಲಿ ಲಕ್ಕುಂಡಿ ಉತ್ಖನನಕ್ಕೆ ಅಧಿಕೃತ ಪರವಾನಗಿಯನ್ನೂ ಪಡೆಯಲಾಗಿತ್ತು.

ಇದನ್ನೂ ಓದಿ: ಲಕ್ಕುಂಡಿ ನಿಧಿ: ನೆಲದಲ್ಲಿ '1 ಸಾವಿರ ಕೆಜಿ ಬಂಗಾರದ ಶಿವಲಿಂಗವಿದೆ' ಎಂದ ಸ್ವಾಮೀಜಿಯನ್ನ ಅಟ್ಟಾಡಿಸಿಕೊಂಡು ಹೋದ ಜನ!

Read more Photos on
click me!

Recommended Stories