ಪುಲ್ವಾಮಾ ಜಿಲ್ಲೆಯ ಯೂಸು ಮಾರ್ಗದಲ್ಲಿ ರಾಷ್ಟ್ರೀಯ ರೈಫಲ್ ಪಡೆಯ ಬಟಾಲಿಯನ್(National Rifle Force Battalion) ಇದೆ. ಇದರಲ್ಲಿ ಬಹುತೇಕರು ಕನ್ನಡಿಗರಿದ್ದಾರೆ. ಅದರಲ್ಲೂ ಅಪ್ಪು ಅಭಿಮಾನಿಗಳೇ ಹೆಚ್ಚು.
ಇದರಲ್ಲಿ ಕೊಪ್ಪಳ(Koppal) ತಾಲೂಕಿನ ಡಂಬರಳ್ಳಿಯ ವಾಸನಗೌಡ ರಾಮನಗೌಡ ಸಹ ಇದ್ದು ಅಪ್ಪು ಅಭಿಮಾನಿಯಾಗಿದ್ದಾರೆ(Appu Fan). ಇಲ್ಲಿರುವ ಬಹುತೇಕರು ಕರ್ತವ್ಯದ ಮಧ್ಯೆಯೂ ಹಿಮದ(Snow) ರಾಶಿಯಲ್ಲಿ ಅಪ್ಪುವಿನ ಫೋಟೋ ಇಟ್ಟುಕೊಂಡು ನಿತ್ಯವೂ ನೆನೆಯುತ್ತಿದ್ದಾರೆ.
ಪುಲ್ವಾಮಾದಲ್ಲಿ ತಾಪಮಾನ ಮೈನಸ್ 10 ಇದೆ. ಇನ್ನು ಕಡಿಮೆಯಾಗುವ ಸಾಧ್ಯತೆ ಇದೆ. ಹೀಗೆ ರಸ್ತೆಯಲ್ಲಿ ಸಾಗುತ್ತಿದ್ದರೆ ರಸ್ತೆಯೇ ಕಾಣದಂತೆ ನಾಲ್ಕಾರು ಅಡಿ ಹಿಮ ಬಿದ್ದಿದೆ. ಕ್ಯಾಂಪಿನ ಪೆಂಡಾಲ್ ಹಾಗೂ ಕಾಳಿನಾಥ ದೇವಸ್ಥಾನದ ಮೇಲೆಯೂ ಹಿಮರಾಶಿ ಬಿದ್ದಿದೆ. ಬಿದ್ದಿರುವ ಹಿಮದಲ್ಲಿಯೆ ದಾರಿಮಾಡಿಕೊಂಡು ಮುನ್ನುಗ್ಗಬೇಕು. ಇದೆಲ್ಲವನ್ನು ವೀಡಿಯೋ ಮಾಡಿರುವ ಯೋಧರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವುದು ವೈರಲ್ ಆಗಿದೆ.
ಮಳೆ(Rain) ಬರುವಂತೆ ಹಿಮವೇ ಬೀಳುತ್ತಿರುವಾಗ ಅದರ ಮಧ್ಯೆಯೇ ಯೋಧರು ಸಂಚರಿಸುತ್ತಾ ವಿಡಿಯೋ ಮಾಡಿದ್ದಾರೆ. ತಾಪಮಾನ 10-12ಕ್ಕೆ ಬಂದರೆ ಕೊರೆಯುವ ಚಳಿ ಎಂದು ಮನೆಯಿಂದ ಆಚೆಯೇ ಬರುವುದಿಲ್ಲ. ಆದರೆ, ಮೈನಸ್ 10 ತಾಪಮಾನದಲ್ಲಿಯೂ ಕುಗ್ಗದೆ ನಡೆಯುತ್ತಿರುವ ಯೋಧರ ಸಾಮರ್ಥ್ಯವನ್ನು ಮೆಚ್ಚಲೇಬೇಕು. ಕೇವಲ ಹಿಮದ ರಾಶಿಯಲ್ಲಿ ಜೀವಿಸುವುದಲ್ಲ, ದೇಶದ್ರೋಹಿಗಳ ಹುಟ್ಟಡಗಿಸಲು ಶ್ರಮಿಸುವ ಅವರ ಕಾರ್ಯಕ್ಕೆ ಸಲಾಂ.
ಪುಲ್ವಾಮದ ಯೂಸು ಮಾರ್ಗದಲ್ಲಿ ನಾವು ಈಗ ಇದ್ದೇವೆ. ಇಲ್ಲಿರುವ ಬಟಾಲಿಯನ್‌ನಲ್ಲಿ ಕನ್ನಡಿಗರೇ(Kannadigas) ಅಧಿಕವಾಗಿದ್ದೇವೆ. ಹಿಮದ ಮಧ್ಯೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇ. ಅಪ್ಪು ಅಭಿಮಾನಿಗಳೇ ಹೆಚ್ಚಿರುವುದರಿಂದ ಅವರ ಫೋಟೋ ಇಟ್ಟುಕೊಂಡಿದ್ದೇವೆ ಅಂತ ಯೋಧ ವಾಸನಗೌಡ ರಾಮನಗೌಡ್ರ ತಿಳಿಸಿದ್ದಾರೆ.