Dharwad: ರಾಜ್ಯದ ವಿಶೇಷ ಸ್ಥಳಗಳ ಪುಸ್ತಕ ಸರಣಿ ಯೋಜನೆ: ಸಿಎಂ ಬೊಮ್ಮಾಯಿ

First Published | Jan 3, 2022, 12:44 PM IST

ಧಾರವಾಡ(ಡಿ.03): ಧಾರವಾಡ(Dharwad) ಸೇರಿದಂತೆ ರಾಜ್ಯದ ವಿಶೇಷ ಸ್ಥಳಗಳ  ಇತಿಹಾಸದ ಬಗ್ಗೆ ಹಾಗೂ ಅಲ್ಲಿನ ಮಹನೀಯರ ಬಗ್ಗೆ ರಾಜ್ಯ ಸರ್ಕಾರದಿಂದ(Government of Karnataka) ವಿಶೇಷ ಪುಸ್ತಕಗಳ ಸರಣಿ ತರಲು ಯೋಜನೆ ರೂಪಿಸುತ್ತಿದೆ. ಬರುವ ಬಜೆಟ್‌ನಲ್ಲಿ(Budget) ಈ ಯೋಜನೆಗೆ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. 

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ(Karnataka Vidyadarshana Sangha) ಭಾನುವಾರ ನಡೆದ ಚನ್ನವೀರಗೌಡ ಅಣ್ಣಾ ಪಾಟೀಲ ದತ್ತಿ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಹಾಗೂ ಟ್ರಸ್ಟ್‌ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಇತ್ತೀಚೆಗೆ ಇತಿಹಾಸ(History) ತಿರುಚುವ ಕೆಲಸಗಳು ನಡೆಯುತ್ತಿವೆ. ಸತ್ಯಾಸತ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಇತಿಹಾಸ ಪ್ರಕಟಿಸುವ ಯೋಜನೆ ರೂಪಿಸಲಾಗುತ್ತಿದೆ. ಧಾರವಾಡದ ಇತಿಹಾಸ ಹಾಗೂ ಮಹನೀಯರ ಕುರಿತಾಗಿ ಮಾಹಿತಿ ಸಂಗ್ರಹಿಸಿ ದಾಖಲಿಸುವ ಕಾರ್ಯವನ್ನು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ವಹಿಸಲಾಗುವುದು ಎಂದ ಸಿಎಂ

Tap to resize

ಹುಬ್ಬಳ್ಳಿ-ಧಾರವಾಡ(Hubballi-Dharwad) ಅವಳಿ ನಗರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದೆ. ಬಜೆಟ್‌ನಲ್ಲಿ ಸಮಗ್ರ ಅಭಿವೃದ್ಧಿಗೆ ಅನುದಾನ ಸಹ ನೀಡಲಾಗುವುದು ಎಂದ ಮುಖ್ಯಮಂತ್ರಿ, ಈಗಾಗಲೇ ಯೋಜನೆ ರೂಪಿಸಿದಂತೆ ಹುಬ್ಬಳ್ಳಿ-ಧಾರವಾಡ-ಬೆಳಗಾವಿಗೆ ರೈಲ್ವೆ ಮೂಲಕ ನೇರ ಸಂಪರ್ಕ ಕಲ್ಪಿಸುವ ಯೋಜನೆಗೆ ಕಳೆದ ಬೆಳಗಾವಿ ಅಧಿವೇಶನದಲ್ಲಿ 849 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನು, ಮೊದಲಿನಂತೆ ಧಾರವಾಡ ಸರಸ್ವತಿ ನಗರವಾಗಿ ಉಳಿದಿಲ್ಲ. ಕೈಗಾರಿಕೆ ವಿಷಯದಲ್ಲೂ ಬೆಳೆಯುತ್ತಿದೆ. ಚೆನ್ನೈ-ಮುಂಬೈ ಕೈಗಾರಿಕಾ ಕಾರಿಡಾರ್‌ನಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಪ್ರಮುಖ ಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಬರುವ ದಿನಗಳಲ್ಲಿ ದೊಡ್ಡ ಕೈಗಾರಿಕೆಗಳು ಬರಲಿದ್ದು ಈ ಮೂಲಕ ಸಾಕಷ್ಟು ಉದ್ಯೋಗಾವಕಾಶಗಳು(Jobs) ಸಹ ಸೃಷ್ಟಿಯಾಗಲಿವೆ ಎಂದರು.

ರಾಜ್ಯದ(Karnataka) ಅಭಿವೃದ್ಧಿ ದೃಷ್ಟಿಯಿಂದ ನಿತ್ಯ 10-15 ಗಂಟೆ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಆಮೂಲಾಗ್ರ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದು ಸ್ಥಾಪಿತ ಹಳೆಯ ವ್ಯವಸ್ಥೆಯನ್ನು ಬದಲಿಸಿ ಹೊಸ ಸವಾಲುಗಳನ್ನು ಎದುರಿಸಲು ಮತ್ತಷ್ಟುಕೆಲಸ ಮಾಡುತ್ತಿದ್ದೇನೆ. ಯಾವುದೇ ಕಾರಣಕ್ಕೂ ರಾಜ್ಯದ ಜನರ ವಿಶ್ವಾಸ, ನಂಬಿಕೆ ಹುಸಿ ಮಾಡುವುದಿಲ್ಲ. ತವರು ಮನೆಗೆ ಮಗಳು ಬರುವಾಗ ಹೇಗೆ ಹೂವು ತರುತ್ತಾಳೋ ಹಾಗೆಯೇ ನನ್ನ ನಾಡಿಗೆ ಹೂವು ತರುವ ಕೆಲಸ ಮಾಡುತ್ತೇನೆ ಎಂದು ಬೊಮ್ಮಾಯಿ ಭಾವನಾತ್ಮಕವಾಗಿ ಮಾತನಾಡಿದರು.

ಧಾರವಾಡದ ಚರಿತ್ರೆಯಲ್ಲಿ ಚೆನ್ನವೀರಗೌಡರ ಪಾತ್ರ ಸಾಕಷ್ಟಿದೆ. ಅವರು ಮಾಡಿದ ಕಾರ್ಯಗಳು ಚಿರಸ್ಥಾಯಿಯಾಗಿ ಉಳಿದವೆ. ಲಿಂಗಾಯತ ಟೌನ್‌ ಹಾಲ್‌ ನಿರ್ಮಾಣ, ಕೃಷಿ ವಿವಿಗೆ ನೂರಾರು ಎಕರೆ ದಾನ ಹಾಗೂ ವೀರಶೈವ ಮಹಾಸಭಾ ಸಂಘಟನೆ ಸೇರಿದಂತೆ ಧಾರವಾಡ ನಗರವನ್ನು ಕಟ್ಟುವಲ್ಲಿ ಶ್ರಮಿಸಿದ್ದಾರೆ. ನಮ್ಮೂರು, ನಮ್ಮ ಹಿರಿಯರನ್ನು ಮರೆಯದೇ ಸಮಯ ಬಂದಾಗ ಅವರ ಕಾರ್ಯಕ್ಕೆ ನ್ಯಾಯ ಕೊಡುವ ಕೆಲಸವನ್ನು ಪಾಟೀಲ ಅವರ ಕುಟುಂಬ ಮಾಡಿದೆ ಎಂದು ಅವರ ಕಾರ್ಯಗಳನ್ನು ಶ್ಲಾಘನೆ ಮಾಡಿದ ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ(North Karnataka) ಅಭಿವೃದ್ಧಿಗೆ ಮುಖ್ಯಮಂತ್ರಿ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಅತಿಯಾಗಿ ಅಪಘಾತಗಳು ನಡೆಯುತ್ತಿರುವ ಬೈಪಾಸ್‌ ರಸ್ತೆ ಅಗಲೀಕರಣಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಜೊತೆಗೆ ಉ.ಕ.ದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿದ್ದು ನಾವೆಲ್ಲರೂ ಸಹಕಾರ ನೀಡಬೇಕಿದೆ ಎಂದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ(Shankar Patil Munenkoppa)

ದೇವರಹುಬ್ಬಳ್ಳಿ ಸಿದ್ದಾರೂಢಮಠದ ಸಿದ್ಧಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಎ.ಬಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಪೊ›.ಶಶಿಧರ ತೋಡಕರ ಪುಸ್ತಕ ಪರಿಚಯಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಶಶಿಕಾಂತ ನಾಯಕ, ರೇಖಾ ಶೆಟ್ಟರ್‌, ಮಲ್ಲಿಕಾರ್ಜುನ ಪಾಟೀಲ, ಪೊ›.ಬಿ.ವೈ. ಬಂಡಿವಡ್ಡರ, ಡಾ.ಅರವಿಂದ ಯಾಳಗಿ, ದತ್ತಿ ದಾನಿಗಳಾದ ಸಿ.ಎಸ್‌. ಪಾಟೀಲ, ರಾಜು ಪಾಟೀಲ, ಚಂದ್ರಗೌಡ ಪಾಟೀಲ ಮತ್ತಿತರರರು ಇದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡಕ್ಕಾಗಿ(Kannada) ಸಾಕಷ್ಟು ಹೋರಾಟ ಮಾಡಿದೆ. ಸಂಘವು ಅನುದಾನ, ಪಿಂಚಣಿ, ಭೂಮಿಯ ಬೇಡಿಕೆ ಇಡಲಾಗಿದೆ. ಈಗ ಒಳ್ಳೆಯ ಕಾಲ ಬಂದಿದ್ದು ಸಂಘದ ಬೇಡಿಕೆಗಳನ್ನು ಈಡೇರಿಸಲಾಗುವುದು. ಜೊತೆಗೆ ಸಂಘವನ್ನು 52 ವರ್ಷಗಳ ಕಾಲ ಅಧ್ಯಕ್ಷರಾಗಿ ನಾಡೋಜ ಪಾಟೀಲ ಪುಟ್ಟಪ್ಪ(Patil Puttappa) ಮುನ್ನಡೆಸಿದ್ದು ಅವರ ಜನ್ಮಸ್ಥಳ ರಾಣೆಬೆನ್ನೂರಿನ ಹಲಗೇರಿಯಲ್ಲಿ ಅವರ ಸ್ಮಾರಕ ಸ್ಥಾಪನೆಗೆ ಸರ್ಕಾರ ಕ್ರಮ ವಹಿಸಲಿದೆ ಎಂದು ಭರವಸೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Latest Videos

click me!