ಮುಂದಿನ 3 ಗಂಟೆಯಲ್ಲಿ ಬೆಂಗ್ಳೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಮಳೆ; ಮಧ್ಯಾಹ್ನವೇ ಕತ್ತಲಾಯ್ತು

Published : Jun 20, 2026, 04:08 PM IST

ಹವಾಮಾನ ಇಲಾಖೆಯು ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

PREV
13
ಬೆಂಗಳೂರು ಮಳೆ

ಮುಂದಿನ ಮೂರು ಗಂಟೆಯಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಹಾಗಾಗಿ ಸಂಜೆ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ ಕ್ಯಾನ್ಸಲ್ ಮಾಡಿಕೊಳ್ಳೋದು ಉತ್ತಮವಾಗಿದೆ.

23
ಮಧ್ಯಾಹ್ನವೇ ಕತ್ತಲು

ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನ 2ರಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿ ಜನತೆಗೆ ಸಂಜೆ 6ರ ಅನುಭವವಾಗುತ್ತಿದೆ. 

ಇನ್ನು ಹೆಬ್ಬಾಳ, ಮಲ್ಲೇಶ್ವರಂ, ಆರ್‌ಟಿ ನಗರ, ಶಿವಾಜಿ ನಗರ, ಮೆಜೆಸ್ಟಿಕ್, ವಿಧಾನಸೌಧ ಸುತ್ತಮುತ್ತ ಕತ್ತಲೆಯ ವಾತಾವರಣ ಉಂಟಾಗಿದ್ದು, ಮೋಡ ನೋಡಿದ ಜನರು ಮನೆ ಸೇರಿಕೊಳ್ಳುವ ಅವಸರದಲ್ಲಿದ್ದಾರೆ.

33
ಯೆಲ್ಲೋ ಅಲರ್ಟ್

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಹೊರವಲಯ ನೆಲಮಂಗಳ, ನಾಗಸಂದ್ರ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ ಭಾಗದಲ್ಲಿ ಜೋರು ಮಳೆ ಆರಂಭವಾಗಿದೆ.

ಮುಂದಿನ ಮೂರು ಗಂಟೆಯಲ್ಲಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಹಾಗಾಗಿ ಸಂಜೆ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ ಕ್ಯಾನ್ಸಲ್ ಮಾಡಿಕೊಳ್ಳೋದು ಉತ್ತಮವಾಗಿದೆ.

Read more Photos on
click me!

Recommended Stories