ಹಾಸನ: ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಯದುವೀರ್ ದಂಪತಿ..!

Published : Dec 08, 2023, 06:04 PM IST

ಹಾಸನ(ಡಿ.08):  ಹುತಾತ್ಮ ಅರ್ಜುನನ ಸಮಾಧಿಗೆ ಇಂದು(ಶುಕ್ರವಾರ) ಯದುವೀರ್ ಒಡೆಯರ್, ಪತ್ನಿ ತ್ರಿಷಿಕಾ ದೇವಿ ಅವರು ಪೂಜೆ ಸಲ್ಲಿಸಿದ್ದಾರೆ. ಮೃತ ಅರ್ಜುನ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿಯನ್ನ ಹೊತ್ತಿದ್ದ.  ಕಾಡಾನೆ  ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಹುತಾತ್ಮನಾಗಿದ್ದನು. 

PREV
14
ಹಾಸನ: ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರಿಟ್ಟ ಯದುವೀರ್ ದಂಪತಿ..!

ಇದೇ 4 ರ ಸೋಮವಾರ ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿದ್ದ, ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅರ್ಜುನನ ಅಂತ್ಯಕ್ರಿಯೆಗೆ ರಾಜಮನೆತನದವರು ಭಾಗವಹಿಸಿರಲಿಲ್ಲ. ಅರಮನೆ ಪುರೋಹಿತರನ್ನ ಕಳುಹಿಸಿಕೊಟ್ಟಿದ್ದರು. ಹಾಗಾಗಿ ಯದುವೀರ್ ದಂಪತಿ ಇಂದು ದಬ್ಬಳ್ಳಿಗೆ ಆಗಮಿಸಿ ಅರಣ್ಯದಲ್ಲಿರುವ ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.  

24

ಮೈಸೂರು ರಾಜಮನೆತನದ ರಾಜಮರ್ಯಾದೆ ಅರ್ಜುನನಿಗೆ ನೀಡಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂತ್ಯಕ್ರಿಯೆ ವೇಳೆ ಮೈಸೂರು ರಾಜಮನೆತನದವರು ಗೈರಾಗಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂಬಾರಿ ಹೊರಲು ಅರ್ಜುನ ಬೇಕಿತ್ತು, ಸಾವನ್ನಪ್ಪಿದ ಅರ್ಜುನನ ದರ್ಶನ ರಾಜಮನೆತನದವರಿಗೆ ಬೇಕಿಲ್ಲವಾ? ಎಂದು ಪ್ರಶ್ನಿಸಿದ್ದರು. 

34

ಯದುವೀರ್ ದಂಪತಿ ಇಂದು ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಕಂಬನಿ ಮಿಡಿದಿದ್ದಾರೆ. ಯದುವೀರ್ ಆಗಮನ ವೇಳೆ ಹಾಸನ ಡಿಎಫ್‌ಒ ಮೋಹನ್ ಸಾಥ್ ನೀಡಿದ್ದರು. 

44

ಕಾಡಾನೆ ಕಾರ್ಯಾಚರಣೆ ವೇಳೆ ಅರ್ಜುನ ವೀರಮರಣವನ್ನಪ್ಪಿದ್ದ, ಮಂಗಳವಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅರ್ಜುನನ ಅಂತ್ಯಕ್ರಿಯೆಗೆ ರಾಜಮನೆತನದವರು ಭಾಗವಹಿಸಿರಲಿಲ್ಲ. ಅರಮನೆ ಪುರೋಹಿತರನ್ನ ಕಳುಹಿಸಿಕೊಟ್ಟಿದ್ದರು. ಹಾಗಾಗಿ ಯದುವೀರ್ ದಂಪತಿ ಇಂದು ದಬ್ಬಳ್ಳಿಗೆ ಆಗಮಿಸಿ ಅರಣ್ಯದಲ್ಲಿರುವ ಅರ್ಜುನ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.  

Read more Photos on
click me!

Recommended Stories