ಚನ್ನಪಟ್ಟಣ ಆಸ್ಪತ್ರೆಗೆ ನಸುಕಿನ ಜಾವ 3 ಗಂಟೆಗೆ ಸಚಿವ ಖಾದರ್ ದಿಢೀರ್ ಭೇಟಿ ನೀಡಿದರು. ಅಲ್ಲಿನ ರೋಗಿಗಳು, ವಾರ್ಡ್, ಔಷಧಿಗಳನ್ನ ಪರಿಶೀಲಿಸಿದರು ಈ ವೇಳೆ ಹೊರಗಡೆ ಮೆಡಿಕಲ್‌ಗೆ ಔಷಧಿ ಬರೆಯೋ ವಿಚಾರ ಗೊತ್ತಾಗಿ ವೈದ್ಯರ ವಿರುದ್ಧ ಗರಂ ಆದರೆ. ಎಲ್ಲವೂ ರೋಗಿಗಳಿಗೆ ಉಚಿತವಾಗಿ ನೀಡಬೇಕೆಂದು ಸೂಚಿಸಿದರು.
ನಸುಕಿನ ಜಾವ 3 ಗಂಟೆ ಸುಮಾರಿಗೆ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ ಖಾದರ್(UT Khader) ದಿಢೀರ್ ಭೇಟಿ ನೀಡಿ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಘಟನೆ ನಡೆಯಿತು
24
ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಖಾದರ್ ದಿಢೀರ್ ಭೇಟೀ
ಖಾಸಗಿ ಕಾರ್ಯಕ್ರಮ ನಿಮಿತ್ತ ತಡರಾತ್ರಿ ಚನ್ನಪಟ್ಟಣಕ್ಕೆ ಆಗಮಿಸಿದ್ದ ಅವರು, ಈ ವೇಳೆ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಐಸಿಯು, ವಾರ್ಡ್‌ಗಳು, ಶೌಚಾಲಯಗಳ ಸ್ವಚ್ಛತೆ, ಔಷಧ ಲಭ್ಯತೆ ಹಾಗೂ ರಾತ್ರಿ ಪಾಳಿಯ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.
34
ಔಷಧ ಹೊರಗಿನ ಮೆಡಿಕಲ್‌ಗಳಿಗೆ ಬರೆದುಕೊಡುವುದಕ್ಕೆ ಸಚಿವ ಗರಂ
ರೋಗಿಗಳು ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿ ಅವರ ಸಮಸ್ಯೆ ಆಲಿಸಿದರು. ಇದೇ ವೇಳೆ ಔಷಧಿಯನ್ನು ಹೊರಗಡೆ ಮೆಡಿಕಲ್‌ಗಳಿಗೆ ಬರೆದುಕೊಡುವ ವಿಚಾರಕ್ಕೆ ಸಚಿವರು ಗರಂ ಆದರು. ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳು ಜನರಿಗೆ ಉಚಿತವಾಗಿ, ಸಮಯಕ್ಕೆ ಸರಿಯಾಗಿ ತಲುಪಬೇಕು ಎಂದು ವೈದ್ಯರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.