ತಾಯಿಯ ಅನಾರೋಗ್ಯ ಸಮಸ್ಯೆ ಎಂದು ತುಮಕೂರಿನ ಆಸ್ಪತ್ರೆಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ನಿವೃತ್ತ ಯೋಧನ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ, ನಗದು ದೋಚಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಲಂಬಾಣಿ ತಾಂಡ್ಯದಲ್ಲಿ ನಡೆದಿದೆ.
24
ನಿವೃತ್ತ ಯೋಧನ ಕುಟುಂಬವನ್ನ ಬಿಡದ ಖದೀಮರು!
ನಿವೃತ್ತ ಯೋಧನ ಕುಟುಂಬವನ್ನ ಬಿಡದ ಖದೀಮರು!
ಭಾರತೀಯ ಸೇನೆಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಯೋಧ ಕೃಷ್ಣಪ್ಪ ಕಳೆದ ವರ್ಷ ನಿಧನರಾಗಿದ್ದರು. ಇತ್ತ ಪತಿಯನ್ನ ಕಳೆದುಕೊಂಡು ಒಂಟಿಯಾಗಿ ಪತ್ನಿ ಪವಿತ್ರಾತನ್ನ ತಾಯಿ ತಾಯಿ ಮಗಳೊಂದಿಗೆ ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದರು
ಆದರೆ ಇತ್ತೀಚೆಗೆ ವಯೋಸಹಜವಾಗಿ ಪವಿತ್ರಾ ತಾಯಿ ಅನಾರೋಗ್ಯಕ್ಕೊಳಗಾಗಿದ್ದಳು. ಹೀಗಾಗಿ ತಾಯಿಯನ್ನ ತುಮಕೂರು ನಗರದ ಖಾಸಗಿ ಆಸ್ಪತ್ರೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದ ಪವಿತ್ರಾ.
34
65 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ದೋಚಿ ಖದೀಮರು ಪರಾರಿ
ಮನೆಯಲ್ಲಿದ್ದುದ್ದೇ ತಾಯಿ ಮಗಳು ಪವಿತ್ರಾ ಮೂವರೇ ಆಗಿದ್ದರಿಂದ ಮನೆಗೆ ಬೀಗ ಹಾಕಿಕೊಂಡು ತುಮಕೂರು ಆಸ್ಪತ್ರೆಯಲ್ಲಿ ಎಂಟುದಿನಗಳಿಂದ ತಾಯಿಯೊಂದಿಗೆ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದ ಪವಿತ್ರಾ ಇತ್ತ ಮನೆಯಲ್ಲಿನ ಚಿನ್ನಾಭರಣಗಳ ಬಗ್ಗೆಯೂ ಯೋಚನೆ ಬಂದಿರಲಿಲ್ಲ. ಆದರೆ ಇದೇ ಅವಕಾಶ ಖದೀಮರು ಮನೆಗೆ ನುಗ್ಗಲು ಸಾಕಾಯಿತು. ಮನೆ ಬಾಗಿಲು ಚಿಕ್ಕದು. ಬೀಗ ಮುರಿದು ಒಳನುಗ್ಗಿರುವ ಖದೀಮರು ತಿಜೋರಿಯಲ್ಲಿಟ್ಟಿದ್ದ 65 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಸೇರಿದಂತೆ ನಗದು ದೋಚಿ ಪರಾರಿಯಾಗಿದ್ದಾರೆ.
ತಾಯಿಯ ಡಿಸ್ಚಾರ್ಜ್ ಬಳಿಕ ಊರಿಗೆ ಬಂದಾಗಲೇ ಮನೆಯ ಬಾಗಿಲು ಓಪನ್ ಆಗಿದ್ದು ಕಂಡು ಪವಿತ್ರಾ ಶಾಕ್ ಗೆ ಒಳಗಾಗಿದ್ದಾಳೆ. ಬಾಗಿಲು ತೆರೆದು ನೋಡಿದಾಗ ತಿಜೋರಿ ಬೀಗ ಮುರಿದು, ಬಟ್ಟೆಗಳು ಚೆಲ್ಲಾಪಿಲ್ಲಿ ಬಿದ್ದಿವೆ. ಚಿನ್ನಾಭರಣ ನಾಪತ್ತೆಯಾಗಿದೆ. ನಗದು ಕೂಡ ಇಲ್ಲ.
ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದು, ದೂರು ಆಧರಿಸಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಪರಿಚಿತರೇ ಮಾಡಿರುವ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ. ಮೊಬೈಲ್ ಟವರ್, ಲೋಕೇಷನ್, ಬೆರಳಚ್ಚು ಪರಿಶೀಲನೆ ನಡೆದಿದ್ದು ಖದೀಮರು ಶೀಘ್ರದಲ್ಲೇ ಪೊಲೀಸರ ಬಲೆಗೆ ಬೀಳಲಿದ್ದಾರೆ.