
ಹೈನುಗಾರಿಕೆಯಲ್ಲಿ ಉತ್ತಮ ತಾಳಿ ಆಯ್ಕೆ ಮುಖ್ಯವಾಗುತ್ತದೆ. ನಾವು ಎಚ್‌ಎಫ್ ಹಾಸುಗಳನ್ನು ಸಾಕಾಣಿಕೆ ಮಾಡುತ್ತಿದ್ದೇವೆ. ಕೆಎಂಎಫ್ ನಿಂದಲೇ ನೀಡುವ ಉತ್ತಮ ತಳಿಯ ಸವೆನ್‌ಗಳನ್ನು ಹಸುಗಳಿಗೆ ಕೊಡಿಸುತ್ತೇವೆ. ಹಸುವನ್ನು ಆಯ್ಕೆ ಮಾಡುವಾಗ ತಂದರೆ, ಇಡೀ ನಿಮ್ಮ ಡೈರಿಯೇ ಉತ್ತಮವಾಗುತ್ತದೆ. ದಿನಕ್ಕೆ 25 ಲೀಟರ್ ಹಾಲು ನೀಡುವ ಹಸು ನಮ್ಮ ಬಳಿ ಇದೆ ಎಂದು ರೈತ ಹೇಳಿದ್ದಾರೆ.
ಎಲ್ಲರ ಮನೆಯಲ್ಲೂ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೆಹ್ವಾಗ್‌ರಂತಹ ಆಟಗಾರರು ಇರ್ತಾರೆ. ಆದರೆ ಅವರಿಗೆ ಯಾವ ರೀತಿ ತಯಾರು ಮಾಡುತ್ತೇವೆ ಅನ್ನೋದರ ಮೇಲೆ ಅವರು ಸ್ಟಾರ್ ಆಗ್ತಾರಾ ಅನ್ನೋದು ನಿರ್ಧಾರ ಆಗುತ್ತೆ. ಅದೇ ರೀತಿ ನಾವು ಹಸುಗಳನ್ನು ತಯಾರು ಮಾಡಬೇಕು. ಒಳ್ಳೆ ಬ್ರಿಡ್ ಬೇಕು ಅಂದರೆ ಪಂಜಾಬ್‌ಗೆ ಹೋಗಬೇಕು ಅನ್ನೋದು ಸುಳ್ಳು, ನಮ್ಮ ಹಸುಗಳನ್ನು ನಾವೇ ತಯಾರು ಮಾಡಿಕೊಳ್ಳಬೇಕು. ಉತ್ತರ ಭಾರತದವರು ನಮಗಿಂತ ಉತ್ತಮವಾಗಿದ್ದರೆ ಅನ್ನೋ ಮೈಡ್ ಸೆಟ್ ಕಿತ್ತುಹಾಕಿ, ನಾವು ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು. ಐದಾರು ಲಕ್ಷ ಕೊಟ್ಟು ಪಂಜಾಬ್ ಹಸುಗಳು ತಂದರೆ ಖಂಡಿತ ನಿಮಗೆ ಲಾಸ್ ಆಗುತ್ತೆ ಎಂದು ರೈತ ಸಲಹೆ ನೀಡಿದ್ದಾರೆ.
ಬೆಳಗ್ಗೆಯಿಂದಲೂ ನಾನು ಡೈರಿ ಫಾರ್ಮ್ನಲ್ಲೇ ಕೆಲಸ ಮಾಡುತ್ತೇವೆ. ಸಗಣಿ ಬಾಚುತ್ತೇವೆ ಅನ್ನೋ ಭಾವನೆ ಮೊದಲು ಇಂದಿನ ಯುವಕರು ಬಿಡಬೇಕು. ಐಟಿ ಬಿಟಿ ಉದ್ಯಮಗಳು ಈಗ ನೆಲಕಚ್ಚುತ್ತಿದೆ. ಕೃಷಿಯೇ ಮುಂದಿನ ಜೀವನ ಆಗುತ್ತೆ. ಆದ್ದರಿಂದ ಕೃಷಿ ಮಾಡಲು ನೂರಾರು ಎಕರೆ ಬೇಕು ಅನ್ನೋದು ಸುಳ್ಳು, ನಿಮಗೆ ಇರುವ 1-2 ಎಕರೆಯಲ್ಲಿ ಉತ್ತಮ ಕೃಷಿ ಮಾಡಬಹುದು ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.
2001ರಿಂದ ನಾನು ಹೈನುಗಾರಿಗೆ ಮಾಡುತ್ತಿದ್ದೇನೆ. ನಾಲ್ಕು ಹಸುಗಳಿಂದ ಈಗ 18 ಹಸು ಆಗಿದೆ. ಪ್ರತಿ ವರ್ಷ ಎರಡು ತಿಂಗಳಿಗೆ ಒಮ್ಮೆ ಒಂದು ಹಸು ಮಾರಾಟ ಮಾಡುತ್ತೇವೆ. ನಾನು ಮತ್ತು ನನ್ನ ಮಗ ಇಬ್ಬರು ಮಾತ್ರ ಡೈರಿಯಲ್ಲಿ ಕೆಲಸ ಮಾಡುತ್ತೇವೆ. ವರ್ಷಕ್ಕೆ 10 ಲಕ್ಷ ಹಸು ಮಾರಾಟದಿಂದ ಬರುತ್ತದೆ. ಪ್ರತಿ ತಿಂಗಳು ನನಗೆ ಎರಡೂ ವರೆಯಿಂದ ಮೂರು ಲಕ್ಷ ರೂಪಾಯಿ ವರೆಗೂ ಸಿಗುತ್ತದೆ. ಇದರಲ್ಲಿ ಒಂದೂ ವರೆ ಲಕ್ಷ ಫೀಡ್ ಖರ್ಚು ಆಗುತ್ತದೆ. ಸಗಣಿಯಿಂದ 35 ರಿಂದ 40 ಸಾವಿರ ಸಿಗುತ್ತದೆ. ಇದರಂತೆ ವರ್ಷಕ್ಕೆ ನನಗೆ 18 ಹಸುಗಳಿಂದ 25 ಲಕ್ಷ ರೂಪಾಯಿ ಆದಾಯ ಸಿಗುತ್ತದೆ ಎಂದು ವಿವರಿಸಿದ್ದಾರೆ.
ನಮ್ಮ ಮನೆಯಲ್ಲಿರುವ ಒಂದು ಹಸು ಪ್ರತಿ ದಿನಕ್ಕೆ 30-35 ಲೀಟರ್ ಹಾಲು ಕೊಡುತ್ತದೆ. ಆ ರೀತಿ ನಾವು ತಯಾರಿ ಮಾಡಿದ್ದೇವೆ. ವರ್ಷ ಪೂರ್ತಿ ಪ್ರತಿ ದಿನ ನಾವು ಕನಿಷ್ಠ 300-350 ಲೀಟರ್ ಹಾಲು ಡೈರಿಗೆ ಹಾಕುತ್ತೇನೆ. ಹಸುಗಳಿಗೆ ದಿನಕ್ಕೆ 25 ಕೆಜಿ ಮೆಕ್ಕೆಜೋಳ, 20 ಕೆಜಿ ಸೈಲೇಜ್, ಹಿಂಡಿ ಮತ್ತು ಬುಸಾ ಕೊಡುತ್ತೇವೆ ಎಂದು ತಿಳಿಸಿದರು.
ಹಸುಗಳಿಗೆ ಹಸಿರು ಮೇಕು ನೀಡಲು 30 ಕುಂಟೆಯಲ್ಲಿ ನೆಪಿಯರ್ ಮೇವು ಬೆಳೆಯುತ್ತೇನೆ. ಕೊಟ್ಟಿಗೆ ತೋಳೆದ ನೀರಿನಿಂದಲೇ ನಾವು ನೆಪಿಯರ್ ಬೆಳೆಯುತ್ತೇನೆ, ಯಾವುದ ರಸಗೊಬ್ಬರ ಹಾಕೋದಿಲ್ಲ. ಉಳಿದಂತೆ ಮೂರು ಎಕರೆಯಲ್ಲಿ ಪ್ರತಿ ವರ್ಷ ಎರಡು ಬಾರಿ ಜೋಳ ಬೆಳೆಯುತ್ತೇನೆ. ಇದರಿಂದ ವರ್ಷಕ್ಕೆ 180 ಟನ್ ಮೆಕ್ಕೆಜೋಳ ಸಿಗುತ್ತೆ, 150 ಟನ್ ನೆಪಿಯರ್ ಸಿಗುತ್ತದೆ. ಎಲ್ಲಾ ಸೇರಿ 300 ಟನ್ ಸಿಗುತ್ತದೆ. ನಮಗೆ ದಿನ 18 ಹಸು ಮತ್ತು ಕರು ಎಲ್ಲಾ ಸೇರಿ 45 ಕೆಜಿ ಒಂದು ಹಸುವಿಗೆ ಹಾಕಿದರೆ, ಒಂದು ಟನ್ ಆಹಾರ ಬೇಕು. ವರ್ಷಕ್ಕೆ 350 ಟನ್ ನಾವೇ ಬೆಳೆಯುತ್ತೇವೆ. ಫಿಡ್ ವಿಚಾರಕ್ಕೆ ಬಂದರೆ ಮೆಕ್ಕೆಜೋಳ, ನುಚ್ಚು, ಪುಡಿ, ರವೆ ಬೂಸ, ಕಡಲೆಕಾಯಿ ಹಿಂಡಿ, ಹುರಿಗಡಲೆ ಹೊಟ್ಟು ಸೇರಿ ಒಂದು ಹಸುವಿಗೆ ಐದು ಕೆಜಿ ಕೊಡ್ತೀವಿ ಎಂದಿದ್ದಾರೆ.
ನಮ್ಮ ಮನೆಯ ಕರುವಿಗೆ ದಿನಕ್ಕೆ ಮೊದಲ ತಿಂಗಳು 4 ಲೀಟರ್ ಹಾಲು, 2ನೇ ತಿಂಗಳು 3 ಲೀ, 3ನೇ ತಿಂಗಳು ಲೀಟರ್ ಹಾಲು ಕೊಡುತ್ತೇವೆ. ಪ್ರತಿ ದಿನ 18 ಹಸು ಕ್ಲೀನ್ ಮಾಡ್ತೀವಿ. ಬೆಳಗ್ಗೆ 5:30ಯಿಂದ ನಮ್ಮ ದಿನಚರಿ ಆರಂಭ, ಬೆಳಗ್ಗೆ 7ಕ್ಕೆ ಕೆಲಸ ಮುಗಿಯುತ್ತೆ. ಸಂಜೆ ಕೂಡ ಇದೇ ಸಮಯ ಇರುತ್ತದೆ. ಉಳಿದಂತೆ ನಾವು ಫ್ರೀ ಆಗಿ ಇರ್ತೇವೆ. ಇಡೀ ದೇಶ ಸುತ್ತಾಡಿ, ಸಿಂಗಾಪುರ, ಮಲೇಷಿಯಾ, ದುಬೈ ಸೇರಿದಂತೆ ವರ್ಷಕ್ಕೆ ಒಂದು ವಿದೇಶಿ ಟೂರ್ ಮಾಡ್ತೀವಿ. ಬದುಕಲು ಎಕರೆಗಟ್ಟಲೆ ಬೇಕಿಲ್ಲ, ಒಂದು ಎಕರೆ ಇದ್ದರೆ ಸಾಕು ಎಂದು ಹಾಸನದ ಚನ್ನರಾಯಣಪಟ್ಟಣದ ಬರಹಾಳು ಗ್ರಾಮದ ಕುಮಾರ್ ಎಂಬವರು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.