ಮಂಡ್ಯ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ: ಫ್ಲೈಓರ್‌ನಿಂದ ಹಾರಿ ಅಂಡರ್ ಪಾಸಿಗೆ ಬಿದ್ದ ಕಾರು! ಒಳಗಿದ್ದವರು ಏನಾದ್ರು?

Published : Sep 18, 2026, 01:28 PM IST

ಬೆಂಗಳೂರು-ಮೈಸೂರು ಎಕ್ಸ್‌ಫ್ರೆಸ್ನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ ಘಟನೆ ಮಂಡ್ಯ ಬಳಿಯ ಉಮ್ಮಡಹಳ್ಳಿ ಗೇಟ್ ಸಮೀಪ ನಡೆದಿದೆ. ಫ್ಲೈಓವರ್‌ನಿಂದ ಅಂಡರ್‌ಪಾಸ್‌ ಕೆಳಗೆ ಹಾರಿಬಿದ್ದರು. ಕಾರಿನೊಳಗೆ ಇದ್ದವರು ಬದುಕಿದ್ದೇ ಪವಾಡ.. ಅಪಘಾತದ ಫೋಟೋಗಳು ಇಲ್ಲಿವೆ ನೋಡಿ

PREV
14
ಮಂಡ್ಯ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ಅಪಘಾತ

ಬೆಂಗಳೂರು-ಮೈಸೂರು ಎಕ್ಸ್‌ಫ್ರೆಸ್ನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ ಘಟನೆ ಮಂಡ್ಯ ಬಳಿಯ ಉಮ್ಮಡಹಳ್ಳಿ ಗೇಟ್ ಸಮೀಪ ನಡೆದಿದೆ. ದುರ್ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯವಾಗಿದ್ದು ಅದೃಷ್ಟವಶಾತ್ ಈ ದುರಂತದಲ್ಲಿ ಮಹಿಳೆಯ ಪತಿ, ಹಾಗೂ ಸ್ನೇಹಿತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

24
ಫ್ಲೈಓವರ್‌ನಿಂದ ಹಾರಿ ಅಂಡರ್ ಪಾಸ್‌ಗೆ ಬಿದ್ದ ಕಾರು!

ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ಹೊರಟಿದ್ದ ವೇಳೆ ಘಟನೆ ನಡೆದಿದೆ. ಎಕ್ಸ್‌ಪ್ರೆಸ್ ವೇ ಮೇಲೆ ಅತಿ ವೇಗವಾಗಿ ಹೋಗುವಾಗ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್‌ನಿಂದ ಹಾರಿ ಅಂಡರ್ ಪಾಸ್‌ಗೆ ಕಾರು ಬಿದ್ದಿದೆ.

34
ಅಂಡರ್ ಪಾಸ್‌ಗೆ ಬಿದ್ದರೂ ಪ್ರಯಾಣಿಕರು ಸೇಫ್!

ಫ್ಲೈಓವರ್‌ನಿಂದ ಅಂಡರ್ ಪಾಸ್‌ಗೆ ಹಾರಿಬಿದ್ದರು ಕಾರಿನೊಳಗೆ ಮಹಿಳೆಯೋರ್ವಳಿಗೆ ಗಂಭೀರ ಗಾಯಗೊಂಡೆ ಉಳಿದಿಬ್ಬರು ಪ್ರಯಾಣಿಕರು ಸೇಫ್ ಆಗಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು, ವಾಹನ ಸವಾರರು ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ..ತಕ್ಷಣ ಸ್ಥಳಕ್ಕೆ ಬಂದ ಪೊಲೀರು ಸ್ಥಳ ಪರಿಶೀಲನೆ ನಡೆಸಿದರು.

44
ಪತ್ನಿಗೆ ಗಂಭೀರ ಗಾಯ, ಪತಿಯ ಗೋಳಾಟ

ದುರ್ಘಟನೆಯಲ್ಲಿ ಪತ್ನಿ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತವಾಗಿ ಬಿದ್ದಿದ್ದರು. ಪತ್ನಿಗಾದ ಗಂಭೀರ ಗಾಯ ನೋಡಿ ಪತಿ ಗೋಳೋ ಅಂತಾ ಅಳುತ್ತಿರುವುದು ಕಂಡುಬಂತು. ಸದ್ಯ ಗಾಯಾಳುಗಳನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಕ್ಸ್‌ಪ್ರೆಸ್ ಹೈವೇನಲ್ಲಿ ಪದೇಪದೆ ಅಪಘಾತ:

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡಿದ್ದರು. ಪ್ರಯಾಣಿಕರ ನಿರ್ಲಕ್ಷ್ಯ, ಚಾಲಕರ ಅತಿ ವೇಗದ ಚಾಲನೆಯಿಂದ ಪದೇಪದೆ ಅಪಘಾತ ಪ್ರಕರಣಗಳು ಮರುಕಳಿಸುತ್ತಿರುವುದು ದುರಂತ. ಹೈವೇ ರಸ್ತೆಯಲ್ಲಿ ನಿಧಾನವಾಗಿ ಚಲಿಸುವುದರಿಂದ ಅಪಘಾತ ತಪ್ಪಿಸಬಹುದು. ಸ್ವಲ್ಪ ತಡವಾದರೂ ಸುರಕ್ಷಿತವಾಗಿ ತಲುಪುವುದು ಮುಖ್ಯ.

Read more Photos on
click me!

Recommended Stories