ಚಿತ್ರದುರ್ಗದ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಟ್ರೇಶ್, ಹಾಸ್ಟೆಲ್ ವಾರ್ಡನ್ ಕಿರುಕುಳದಿಂದ ನೊಂದು ಶಾಲಾ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಚಿತ್ರದುರ್ಗ ಭರಮಸಾಗರ ಗ್ರಾಮದ ಡಿವಿಎಸ್ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಎರಡನೇ ಮಹಡಿಯಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾನೆ. ಕೊಟ್ರೇಶ್ (16) ಮೃತ ವಿದ್ಯಾರ್ಥಿ. ಇಂದು ಬೆಳಗ್ಗೆ ಘಟನೆ ನಡೆದಿದ್ದು, ವಿದ್ಯಾರ್ಥಿ ಕಟ್ಟಡದಿಂದ ಜಿಗಿಯುತ್ತಿರುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
25
ಹಾಸ್ಟೆಲ್ ವಾರ್ಡನ್ ಕಿರುಕುಳ
ಕರಿಯಮ್ಮನಹಳ್ಳಿಯ ಗುರುಲಿಂಗಯ್ಯ ಎಂಬವರ ಮಗ ಕೊಟ್ರೇಶ್, ಭ್ರಮಸಾಗರದ ಡಿವಿಎಸ್ ವಸತಿ ಶಾಲೆಯಲ್ಲಿ ಓದುತ್ತಿದ್ದನು. ಮಗನ ಸಾವಿಗೆ ಹಾಸ್ಟೆಲ್ ವಾರ್ಡನ್ ದೀಪಾ, ನಾಗರಾಜ್, ಪ್ರಿನ್ಸಿಪಾಲ್ ಸುಶ್ಮಿತಾ ಮತ್ತು ಆಡಳಿತ ಮಂಡಳಿಯೇ ಕಾರಣ ಎಂದು ಗುರುಲಿಂಗಯ್ಯ ಆರೋಪಿಸಿದ್ದಾರೆ. ಈ ಸಂಬಂಧ ಗುರುಲಿಂಗಯ್ಯ ಅವರು ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
35
ನಿನ್ನೆಯೇ ಅಪ್ಪನಿಗೆ ವಿಷಯ ಹೇಳಿದ್ದ
ಭಾನುವಾರವಷ್ಟೇ ಶಾಲೆಗೆ ಬಂದು ಮಗನನ್ನು ನೋಡಿಕೊಂಡು ಗುರುಲಿಂಗಯ್ಯ ಹೇಳಿದ್ದರು. ಹಾಸ್ಟೆಲ್ ವಾರ್ಡನ್‌ಗಳಾದ ದೀಪಾ ಮತ್ತು ನಾಗರಾಜ್ ತನಗೆ ಕಿರುಕುಳ ನೀಡುತ್ತಿರುವ ವಿಷಯವನ್ನು ತಂದೆಗೆ ಕೊಟ್ರೇಶ್ ಹೇಳಿಕೊಂಡಿದ್ದನು. ಗುರುಲಿಂಗಯ್ಯ ಅವರು ಈ ವಿಷಯವನ್ನು ಪ್ರಿನ್ಸಿಪಾಲ್ ಸುಶ್ಮಿತಾ ಗಮನಕ್ಕೆ ತಂದಿದ್ದರು.
ದೂರು ನೀಡಿದ ಬಳಿಕವೂ ವಾರ್ಡನ್‌ಗಳ ವಿರುದ್ಧ ಪ್ರಿನ್ಸಿಪಾಲ್ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದ ಮಗ ಮಾನಸಿಕವಾಗಿ ನೊಂದು ಪ್ರಾಣ ಕಳೆದುಕೊಂಡಿದ್ದಾನೆ. ಹಾಗಾಗಿ ಮೂವರು ಸಿಬ್ಬಂದಿ ಮತ್ತು ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗುರುಲಿಂಗಯ್ಯ ಆಗ್ರಹಿಸಿದ್ದಾರೆ.
ಕಟ್ಟಡದಿಂದ ಜಿಗಿದ ಕೊಟ್ರೇಶ್ ಸಾವು ಸ್ಥಳದಲ್ಲಿಯೇ ಸಂಭವಿಸಿದೆಯಾ ಅಥವಾ ಆಸ್ಪತ್ರೆಯಲ್ಲಿ ಆಯ್ತಾ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇತ್ತ ಡಿವಿಎಸ್ ಶಾಲೆ ಆಡಳಿತ ಮಂಡಳಿಯಿಂದ ಯಾವುದೇ ಹೇಳಿಕೆ ಬಂದಿಲ್ಲ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.