ಗಂಡುಮೆಟ್ಟಿನ ನಾಡು ಹುಬ್ಬಳ್ಳಿ ಜಗ್ಗಲಿಗೆ ಹಲಗಿ ಹಬ್ಬದ ಝಲಕ್, ವಾಹ್ಹ್ ಅದೆಂಥಾ ಹುರುಪು, ಉತ್ಸಾಹ

First Published | Mar 20, 2022, 8:19 PM IST

ವರದಿ: ಗುರುರಾಜ ಹೂಗಾರ
ಏನೇ ಹೇಳಿ ಇಡೀ ಒಂದು ವಾತಾವರಣಕ್ಕೆ ಜೋಶ್ ತುಂಬುವ ತಾಕತ್ತು ಇರೋದು ಚರ್ಮ ವಾದ್ಯಗಳಿಗೆ ಮಾತ್ರ. ಅದರಲ್ಲೂ ಉತ್ತರ ಕರ್ನಾಟಕದ ಹೋಳಿ ಹುಣ್ಣಿಮೆ ವೇಳೆ ಚರ್ಮ ವಾದ್ಯಗಳ ಶಬ್ಧ, ಕುಳಿತವರನ್ನೂ ಕುಣಿಯೋವಂತೆ ಮಾಡುತ್ತೆ. ಹುಬ್ಬಳ್ಳಿಯಲ್ಲಿ ರಂಗಪಂಚಮಿಗಾಗಿ ನಡೆದ ಜಗ್ಗಲಗಿ ಹಬ್ಬವಂತೂ ಕಿವಿ ನಿಮಿರುವಂತೆ ಮಾಡಿತು.ಜಗ್ಗಲಿಗೆ ಹಲಗಿ ಹಬ್ಬದ ಝಲಕ್ ಈ ಕೆಳಗಿನಂತಿದೆ ನೋಡಿ.

ಉತ್ತರ ಕರ್ನಾಟಕದ ಹೋಳಿ ಹುಣ್ಣಿಮೆ ವೇಳೆ ಚರ್ಮ ವಾದ್ಯಗಳ ಶಬ್ಧ, ಕುಳಿತವರನ್ನೂ ಕುಣಿಯೋವಂತೆ ಮಾಡುತ್ತೆ. ಹುಬ್ಬಳ್ಳಿಯಲ್ಲಿ ರಂಗಪಂಚಮಿಗಾಗಿ ನಡೆದ ಜಗ್ಗಲಗಿ ಹಬ್ಬವಂತೂ ಕಿವಿ ನಿಮಿರುವಂತೆ ಮಾಡಿತು.

ವಾಹ್ಹ್.. ಅದೆಂಥಾ ಹುರುಪು, ಸಾಟಿಯಾಗದ ಉತ್ಸಾಹ, ಇವರ ಈ ಉತ್ಸಾಹಕ್ಕೆ ಇಡೀ ಹುಬ್ಬಳ್ಳಿ ನಗರವೇ ಅದುರಿ ಹೋಗುವಂತಿತ್ತು.ಜತೆಗೆ ಎಲ್ರ ತಲೆಮೇಲೊಂದು ಕೇಸರಿ ಟೋಪಿ. ವಾಹ್, ಜೋಶ್ ಅಂದ್ರೇ ಹೀಗೇ ಇರಬೇಕು... ಇದು ಗಂಡುಮೆಟ್ಟಿನ ನಾಡಿನ, ಕಲರ್ ಫುಲ್ ಹಬ್ಬ ಅದೇ ಜಗ್ಗಲಿಗೆ ಹಲಗಿ  ಹಬ್ಬದ ವೈಶಿಷ್ಟ್ಯ,

Tap to resize

ನಮ್ಮ ಸಂಪ್ರದಾಯ, ಸಂಸ್ಕೃತಿಯನ್ನ ಇಂದಿನ ಪೀಳಿಗೆಗೂ ಪರಿಚಯಿಸೋದಕ್ಕಾಗಿ ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ರಂಗಪಂಚಮಿ ವೇಳೆ  ಮೂರುಸಾವಿರ ಮಠದಲ್ಲಿ ಜಗ್ಗಲಗಿ ಹಬ್ಬ ಆಯೋಜಿಸಲಾಗುತ್ತೆ. 

Hubballi jaggalagi Halagi mela 2022 Photos

ಏನೇ ಹೇಳಿ ಇಡೀ ಒಂದು ವಾತಾವರಣಕ್ಕೆ ಜೋಶ್ ತುಂಬುವ ತಾಕತ್ತು ಇರೋದು ಚರ್ಮ ವಾದ್ಯಗಳಿಗೆ ಮಾತ್ರ. ಅದರಲ್ಲೂ ಉತ್ತರ ಕರ್ನಾಟಕದ ಹೋಳಿ ಹುಣ್ಣಿಮೆ ವೇಳೆ ಚರ್ಮ ವಾದ್ಯಗಳ ಶಬ್ಧ, ಕುಳಿತವರನ್ನೂ ಕುಣಿಯೋವಂತೆ ಮಾಡುತ್ತೆ. ಹುಬ್ಬಳ್ಳಿಯಲ್ಲಿ ರಂಗಪಂಚಮಿಗಾಗಿ ನಡೆದ ಜಗ್ಗಲಗಿ ಹಬ್ಬವಂತೂ ಕಿವಿ ನಿಮಿರುವಂತೆ ಮಾಡಿತು.

Hubballi jaggalagi Halagi mela 2022 Photos

 ಹುಬ್ಬಳ್ಳಿಯ ರಂಗ ಪಂಚಮಿಗೆ ಭರ್ಜರಿ ಮುನ್ನಡಿ ಬರೆದಿದ್ದು, ಈ ಜಗ್ಗಲಗಿ ಮೇಳದಲ್ಲಿ ನಾಡಿದ ಮಠಾದೀಶರು, ರಾಜಕಾರಣಿ ಭಾಗಿಯಾದ್ರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ನಾಯಕರು ಭಾಗಿಯಾಗಿದ್ರು..

Hubballi jaggalagi Halagi mela 2022 Photos

ಹಲಗಿ‌ ಹಬ್ಬದ ಸಂಭ್ರಮವನ್ನು ಕಣ್ಣುತುಂಬಿಕೊಳ್ಳಲು ನಗರದ ರಸ್ತೆಯಲ್ಲಿ ಜಮ ಸಾಗರವೆ ನೆರೆದಿತ್ತು, ವಿಶೇಷ ಅಂದ್ರೇ ವಿವಿಧ ಸಂಘಟನೆಗಳು ಮತ್ತು ಎಲ್ಲ ಪಕ್ಷದ ನಾಯಕರು ಇದರಲ್ಲಿ ಪಾಲ್ಗೊಳ್ಳಲು ಮೂಲಕ ಹಬ್ಬದ ಮೆರಗು ಮತ್ತಷ್ಟು ಹೆಚ್ಚಿಸಿದ್ರು..

Hubballi jaggalagi Halagi mela 2022 Photos

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ಮಂಗಳವಾರ ನಡೆಯಲಿದೆ. ರಾಜ್ಯದ ಇತರಡೆಗಿಂತಲೂ ಇಲ್ಲಿನ ರಂಗ ಪಂಚಮಿ ವಿಶೇಷತೆಯಿಂದ ಕೂಡಿರುತ್ತೆ. ಅದರಲ್ಲೂ ಹಲಗಿ ಹಬ್ಬ ಆಚರಣೆಯಿಂದಾಗಿ  ಹೋಳಿ ಹಬ್ಬದ ಮೆರುಗು ದ್ವಿಗುಣಗುಳ್ಳುವಂತೆ ಮಾಡುತ್ತೆ..

Hubballi jaggalagi Halagi mela 2022 Photos

ಮೂರುಸಾವಿರ ಮಠದ ಮೈದಾನದಿಂದ ಆರಂಭವಾದ ಜಗ್ಗಲಗಿ ಹಬ್ಬದ ಮೆರವಣಿಗೆ ಕೊಪ್ಪಿಕರ್ ರಸ್ತೆ, ದುರ್ಗದ ಬೈಲ್, ರಾಧಾಕೃಷ್ಟ ಗಲ್ಲಿ, ವೀರಾಪುರ ರಸ್ತೆ, ದಾಜೀಬಾನ್ ಪೇಟ್ ವೃತ್ತದ ಮುಖಾಂತರ ಹಲಗಿ ಹಳೇ ಹುಬ್ಬಳ್ಳಿಯ ದುರ್ಗದ್ ಬೈಲ್ ವರೆಗೂ ಸಾಗಿತು.

Latest Videos

click me!