Published : Mar 09, 2022, 10:08 AM ISTUpdated : Mar 09, 2022, 10:15 AM IST
ಬೆಳಗಾವಿ(ಮಾ.09): ಬೆಳಗಾವಿಯ(Belagavi) ಮರಾಠ ಲಘು ಪದಾತಿದಳ(Maratha Light Infantry) ಕೇಂದ್ರದಲ್ಲಿ ಫೆ.27ರಿಂದ ಇಂಡೋ- ಜಪಾನ್(Indo-Japan) ಜಂಟಿ ಸಮರಾಭ್ಯಾಸ ನಡೆಯುತ್ತಿದ್ದು, ಮಂಗಳವಾರ ಬೆಳಗಾವಿ ತಾಲೂಕಿನ ಹಾಲಭಾವಿ ಗ್ರಾಮದ ಬಳಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಭಾರತೀಯ ಸೇನೆಯ(Indian Army) 15ನೇ ಬೆಟಾಲಿಯನ್‌ನ ಮರಾಠ ಲಘು ಪದಾತಿದಳ ಕೇಂದ್ರದ 40 ಯೋಧರು(Soldiers) ಹಾಗೂ ಜಪಾನ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನ 30ನೇ ದಳದ 40 ಯೋಧರು ಜಂಟಿ ಸಮರಾಭ್ಯಾಸದಲ್ಲಿ ತೊಡಗಿದ್ದರು.
24
ಮಾ.10ರವರೆಗೆ ಸಮರಾಭ್ಯಾಸ ನಡೆಯಲಿದೆ. ಇದು ವಾರ್ಷಿಕ ತರಬೇತಿ ಭಾಗವಾಗಿರುವ ಧರ್ಮ ಗಾರ್ಡಿಯನ್- 2022 ಕಾರ್ಯಕ್ರಮವಾಗಿದ್ದು, ಜಾಗತಿಕ ಭಯೋತ್ಪಾದನೆ(Global Terrorism) ವಿರುದ್ಧದ ಹೋರಾಟಕ್ಕೆ ಅನುಕೂಲಕರವಾಗುವ ತಂತ್ರಗಾರಿಕೆಯನ್ನು ಸೈನಿಕರು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
34
ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಮನೆಗಳ ಮೇಲಿನ ಡ್ರಿಲ್‌ಗಳು, ಭಯೋತ್ಪಾದಕ ಅಡಗುದಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆ ಹಾಗೂ ನಿರಾಯುಧ ಯುದ್ಧ(War) ಸೇರಿ ವಿವಿಧ ಹಂತದ ಕಾರ್ಯಾಚರಣೆಗಳ ಕುರಿತು ಜಂಟಿ ತರಬೇತಿ ನಡೆಯುತ್ತಿದೆ.
44
ಪ್ರಾತ್ಯಕ್ಷಿಕೆ ವೇಳೆ 4 ಸೇನಾ ಹೆಲಿಕಾಪ್ಟರ್‌ಗಳಲ್ಲಿ ಬಂದ ಯೋಧರು, ಹಗ್ಗದ ಮೂಲಕ ಇಳಿದು ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಿದ ದೃಶ್ಯ ಮೈನವಿರೇಳಿಸುವಂತಿತ್ತು.