Udupi: ವಿಶ್ವಕ್ಕೆ ಭಾರತದಿಂದ ಲೋಕಕಲ್ಯಾಣ ಮಾರ್ಗದ ನಿರೀಕ್ಷೆ: ರಾಜ್ಯಪಾಲ ಗೆಹ್ಲೋಟ್‌

First Published | Mar 15, 2022, 12:43 PM IST

ಕಾರ್ಕಳ(ಮಾ.15):  ಇಡೀ ವಿಶ್ವವೇ ಲೋಕಕಲ್ಯಾಣದ ಮಾರ್ಗದರ್ಶನವನ್ನು ಭಾರತದ ಸಂಸ್ಕೃತಿ ಮತ್ತು ಭಾರತದ ಸರ್ಕಾರದಿಂದ ನಿರೀಕ್ಷಿಸುತ್ತಿದೆ ಎಂದು ಕರ್ನಾಟಕ(Karnataka) ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌(Thaawarchand Gehlot) ಹೇಳಿದ್ದಾರೆ.

ಸೋಮವಾರ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಸ್ವರಾಜ್‌ ಮೈದಾನದಲ್ಲಿ ಕಾರ್ಕಳ ಉತ್ಸವದ 5ನೇ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಥಾವರ್‌ ಚಂದ್‌ ಗೆಹ್ಲೋಟ್‌ ಅವರು, ಭಾರತೀಯ ಸಂಸ್ಕೃತಿಯನ್ನು(Indian Culture) ದುರ್ಬಲಗೊಳಿಸುವ ಪ್ರಯತ್ನಗಳು ಅನೇಕ ಬಾರಿ ನಡೆದಿವೆ. ಆದರೆ ಪ್ರತಿಬಾರಿಯೂ ಭಾರತೀಯ ಸಂಸ್ಕೃತಿ ಇನ್ನಷ್ಟು ಬಲಗೊಂಡಿದೆ ಮತ್ತು ವಿಶ್ವಬಂಧುತ್ವ, ವಿಶ್ವಶಾಂತಿ ಮತ್ತು ಸಮಾನತೆಗೆ ಪ್ರೇರಣೆಯಾಗಿದೆ ಎಂದರು.

ಅಹಿಂಸೆಯ ಮೂರ್ತಿರೂಪವಾದ ಭಗವಾನ್‌ ಮಹಾವೀರರ ಬದುಕಿ - ಬದುಕಲು ಬಿಡಿ ಎಂಬ ಸಂದೇಶ ಇಂದು ವಿಶ್ವಕ್ಕೆ ಹೆಚ್ಚು ಅಗತ್ಯವಾಗಿದೆ ಎಂದ ರಾಜ್ಯಪಾಲರು(Governor), ಸಾಮಾಜಿಕ ಸಾಮರಸ್ಯವೇ ವಿಶ್ವದ ಎಲ್ಲ ಧರ್ಮಗಳ ಸ್ಥಾಪನೆಯ ಉದ್ದೇಶವಾಗಿದೆ. ಸಮಾಜವನ್ನು ಸದಾ ಜಾಗೃತಿಗೊಳಿಸುವಲ್ಲಿ ಧರ್ಮದ ಪಾತ್ರ ದೊಡ್ಡದಾಗಿದೆ. ಧರ್ಮ ಸಮಾಜವನ್ನು ಒಗ್ಗೂಡಿಸುತ್ತದೆ. ಇದನ್ನೆ ಭಗವಾನ್‌ ಬುದ್ಧ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ ಎಂದು ಧರ್ಮಕ್ಕೆ ಮತ್ತು ಸಂಘಟನೆಗೆ ಮಹತ್ವ ನೀಡುವಂತೆ ಹೇಳಿದ್ದಾರೆ ಎಂದ ತಿಳಿಸಿದ ರಾಜ್ಯಪಾಲರು 

Latest Videos


ರಾಜ್ಯಪಾಲರನ್ನು ಕಾರ್ಕಳ ಉತ್ಸವದ(Karkala Utsava 2022) ರುವಾರಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌(Sunil Kumar) ಅವರು, ಶಂಕರಪುರ ಮಲ್ಲಿಗೆ ಹಾರ ತೊಡಿಸಿ, ಕಾರ್ಲ ಕಜೆ ಅಕ್ಕಿ, ಶ್ರೀಕೃಷ್ಣನ ವಿಗ್ರಹ ನೀಡಿ ಸನ್ಮಾನಿಸಿದರು.

ಸಚಿವ ವಿ.ಸುನಿಲ್‌ ಕುಮಾರ್‌, ಹಿರಿಯ ಸಾಹಿತಿ ಡಾ.ನಾ.ಮೊಗಸಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಎನ್‌. ಮಂಜಳಾ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ಕಾರ್ಕಳ ವಕೀಲರ ಸಂಘ ಅಧ್ಯಕ್ಷ ಸುನಿಲ್‌ ಶೆಟ್ಟಿ ವೇದಿಕೆಯಲ್ಲಿದ್ದರು. ಡಿಸಿ ಎಂ.ಕೂರ್ಮಾ ರಾವ್‌ ಸ್ವಾಗತಿಸಿದರು. ಸಂಗೀತ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು. ಕನ್ನಡ - ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಂದಿಸಿದರು.

click me!