ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ, 3 ಲಕ್ಷಕ್ಕೂ ಅಧಿಕ ಜನ ಭಾಗಿ

First Published | Sep 17, 2022, 9:18 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.17): ಚಿತ್ರದುರ್ಗ ಅಂದ್ರೆ ಎಲ್ಲರಿಗೂ ನೆನಪಾಗೋದು ಕಲ್ಲಿನ ಕೋಟೆ ಅಂತ. ಆದ್ರೆ ಕಳೆದ ಹತ್ತಾರು ವರ್ಷಗಳಿಂದ ಇಡೀ ದೇಶದ ಗಮನ ಸೆಳೆದಿರುವ ಕೋಟೆನಾಡಿನ ಹಿಂದು ಮಹಾಗಣಪತಿ ಬೃಹತ್ ಶೋಭಾಯಾತ್ರೆ ಇಂದು ಅದ್ದೂರಿಯಾಗಿ ನಡೆಯಿತು. ಇಡೀ ಚಿತ್ರದುರ್ಗ ನಗರ ಕೇಸರಿಮಯವಾಗಿದ್ದಲ್ಲದೇ ಯುವಕ, ಯುವತಿಯರು, ಮಕ್ಕಳು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ್ರು. ಕೋಟೆನಾಡು ಚಿತ್ರದುರ್ಗದ ವಿಹಿಂಪ ಹಾಗೂ ಭಜರಂಗದಳ ನೇತೃತ್ವದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಹಿಂದೂ ಮಹಾಗಣಪತಿ. ಸತತ 21 ದಿನಗಳ ಕಾಲ ವಿಶೇಷ ಪೂಜಾ ಕೈಂಕಾರ್ಯ ‌ನೆರವೇರಿಸಿದ ಬಳಿಕ ಹಿಂದು ಮಹಾಗಣಪತಿ ವಿಸರ್ಜನಾ ಯಾತ್ರೆ ಇಂದು ನಡೆಯಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಶೋಭಯಾತ್ರೆಯಲ್ಲಿ ಮೂರು ಲಕ್ಷಕ್ಕು ಅಧಿಕ ಜನರು ಭಾಗಿಯಾಗಿದ್ರು. 

 ಕಳೆದ ಎರಡು ವರ್ಷ ಕೊರೊನಾ ಮಹಾಮಾರಿಯಿಂದಾಗಿ ಸರಳ ಶೋಭಾಯಾತ್ರೆ ಉತ್ಸವ ನೆರವೇರಿಸಿದ್ದ ಕೋಟೆನಾಡಲ್ಲಿ, ಈ ಬಾರಿ ಅದ್ದೂರಿಯಾಗಿ  ಗಣೇಶೋತ್ಸವ ನಡೆಸಲಾಯ್ತು. 

 ಇಂದು ನಡೆದ ಶೋಭಾಯಾತ್ರೆ ಹಿನ್ನಲೆಯಲ್ಲಿ, ಇಡೀ ಚಿತ್ರದುರ್ಗ  ಕೇಸರಿಮಯಾಗಿದ್ದೂ, ರಾಜ್ಯದ ವಿವಿದೆಡೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಯುವಕ, ಯುವತಿಯರು ಡಿಜೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿದ್ರು. ಕೇಕೆ ಹಾಕಿ ಜೈ ಶ್ರೀರಾಮ್ ಎಂದು ರಣಕೇಕೆ ಕೂಗುತ್ತಾ ಎಂಜಾಯ್ ಮಾಡಿದ್ರು. 

Latest Videos


 ಇನ್ನು ಈ ವಿಸರ್ಜನಾ ಯಾತ್ರೆಗೆ ವಿಶ್ವ ಹಿಂದು ಪರಿಷತ್  ರಾಷ್ಟ್ರೀಯ ಸಹ ಕಾರ್ಯದರ್ಶಿ ಅಂಬರೀಶ್ ಸಿಂಗ್ ಚಾಲನೆ ನೀಡಿದ್ರು. ಈ ವೇಳೆ ಗಣಪತಿಗೆ ಎಲಿಕಾಫ್ಟರ್ ನಲ್ಲಿ ಸುರಿಸಿದ ಪುಷ್ಪಾರ್ಚನೆ ನೆರೆದಿದ್ದವರ ಗಮನ ಸೆಳೆಯಿತು. 

Chitradurga ganapathi

 ಒಟ್ಟಾರೆ ಗಣಪತಿ ಪ್ರತಿಷ್ಠಾಪನೆ ದಿನದಿಂದಲೂ ಎಲ್ಲರ ಗಮನ ಸೆಳೆದಿದ್ದ ಚಿತ್ರದುರ್ಗದ ಹಿಂದೂ ಮಹಾಗಣಪತಿ ವಿಸರ್ಜನೆ ಇಂದು ಬೃಹತ್  ಶೋಭಾಯಾತ್ರೆ ಮೂಲಕ ನೆರೆವೇರಿತು. ಶೋಭಾಯತ್ರೆಯಲ್ಲಿ ಕೇಸರಿ ಉಡುಪು ಧರಿಸಿ ಭಾಗಿಯಾಗಿದ್ದ  ಮೂರು ಲಕ್ಷಕ್ಕು ಅಧಿಕ ಜನರು ಈ ಅದ್ಬುತ ಕ್ಷಣಕ್ಕೆ ಸಾಕ್ಷಿಯಾದ್ರು.

click me!