ಹಾಸನದ ರೈತ ಮಹಿಳೆ ಆಶಾ, 12 ಹಸುಗಳಿಂದ ಹೈನುಗಾರಿಕೆ ಮಾಡಿ ಯಶಸ್ಸು ಕಂಡಿದ್ದಾರೆ. ತಿಂಗಳಿಗೆ ಒಂದೂವರೆ ಲಕ್ಷ ಸಂಪಾದಿಸುವ ಅವರು, ಆಧುನಿಕ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ಮಾಣ ಸೇರಿದಂತೆ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ.
ಸಾಧಿಸುವ ಛಲವೊಂದಿದ್ದರೆ ಏನು ಬೇಕಾದ್ರೂ ಸಾಧಿಸಬಹುದು ಎಂಬುದಕ್ಕೆ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಪರಮ ಗ್ರಾಮದ ನಿವಾಸಿ ಆಶಾ ಸಾಕ್ಷಿಯಾಗಿದ್ದಾರೆ. ಆಶಾ ಅವರು ಹಾಲು ಕೃಷಿಯಲ್ಲಿ ಯಶಸ್ಸು ಕಂಡ ರೈತ ಮಹಿಳೆಯಾಗಿದ್ದಾರೆ. ಕಳೆದ 10 ವರ್ಷದಲ್ಲಿ ಆರ್ಥಿಕವಾಗಿ ಸದೃಢವಾಗಿರುವ ಆಶಾ ಅವರ ಒಂದು ದಿನದ ಸಂಪಾದನೆ 5 ಸಾವಿರ ರೂಪಾಯಿ ಆಗಿದೆ.
25
ತಿಂಗಳಿಗೆ ಒಂದೂವರೆ ಲಕ್ಷದಷ್ಟು ಸಂಪಾದನೆ
ಸುಮಾರು 4 ಎಕರೆ ಭೂಮಿಯಲ್ಲಿ ಕೃಷಿ ಜೊತೆ 12 ಹಸುಗಳನ್ನಿಟ್ಟುಕೊಂಡು ಹೈನುಗಾರಿಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಸುಮಾರು 8 ಲಕ್ಷ ಮೌಲ್ಯದಲ್ಲಿ ತಮ್ಮದೇ ಸ್ವಂತ ಡೈರಿಯೊಂದನ್ನು ಆರಂಭಿಸಿದ್ದಾರೆ. 12 ಹಸುಗಳಿಂದ ಪ್ರತಿನಿತ್ಯ ಅಂದಾಜು 38 ರಿಂದ 40 ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ದಿನಕ್ಕೆ 5 ಸಾವಿರ ರೂಪಾಯಿ ಅಂದ್ರೆ ತಿಂಗಳಿಗೆ ನನ್ನ ಸಂಬಳ ಒಂದರಿಂದ ಒಂದೂವರೆ ಲಕ್ಷದಷ್ಟು ಸಂಬಳ ಆಗುತ್ತದೆ. ಎಲ್ಲಿಯೂ ಹೋಗದೇ ಮನೆಯಲ್ಲಿದ್ದುಕೊಂಡು ಲಕ್ಷ ಲಕ್ಷ ಹಣವನ್ನು ಆಶಾ ಸಂಪಾದಿಸುತ್ತಾರೆ.
35
ಆಧುನಿಕ ಪದ್ಧತಿಯಲ್ಲಿ ಹೈನುಗಾರಿಕೆ
ಹೈನುಗಾರಿಕೆಯಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡ್ರೆ ಯಾವುದೇ ಹೊರೆಯಾಗಲ್ಲ. ನಾವು ಮನೆಯವರೇ ಈ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳುತ್ತವೆ. ಬೆಳಗ್ಗೆ ಎರಡ್ಮೂರು ಗಂಟೆ ಮತ್ತು ಸಂಜೆ ಒಂದೆರಡು ಗಂಟೆ ಕೆಲಸ ಮಾಡಿದ್ರೆ ಸಾಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ರೂ ನಾನು ಒಬ್ಬಳೇ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಹೋಗುತ್ತೇನೆ ಅಂತಾರೆ ಸಾಧಕಿ ಆಶಾ.
ನನ್ನೊಂದಿಗೆ ನನ್ನ ಸೋದರ ಸಹ 20 ಹಸುಗಳಿಂದ ಹೈನುಗಾರಿಗೆ ಆರಂಭಿಸಿದನು. ಆದ್ರೆ ನಿರ್ವಹಣೆ ಸೇರಿದಂತೆ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಅರ್ಧಕ್ಕೆ ನಿಲ್ಲಿಸಿದ. ತಾಳ್ಮೆ ಮತ್ತು ಕ್ರಮಬದ್ಧವಾಗಿ ಕೆಲಸ ಮಾಡಿದ್ರೆ ಯಾವುದೂ ಸಹ ಹೊರೆಯಾಗಲ್ಲ. ಸುಮಾರು 40 ಟನ್‌ನಷ್ಟು ಮೇವು ಸ್ಟೋರ್ ಮಾಡಿಕೊಂಡ್ರೆ ಮನೆಯಲ್ಲಿಯೇ 6 ತಿಂಗಳವರೆಗೆ ಹಸುಗಳನ್ನು ಮೇಯಿಸಿಕೊಳ್ಳಬಹುದು. ನಾಲ್ಕು ಎಕರೆಯ ಒಂದು ಭಾಗದಲ್ಲಿ ಮೇವು ಬೆಳೆದುಕೊಳ್ಳುತ್ತೇನೆ ಎಂದು ಆಶಾ ಹೇಳುತ್ತಾರೆ.
55
10 ವರ್ಷದಲ್ಲಿ ಸಂಪದಾನೆ ಮಾಡಿದ್ದೆಷ್ಟು?
ಈ ಪ್ರಶ್ನೆಗೆ ಉತ್ತರಿಸಿದ ಆಶಾ, ಇಬ್ಬರು ಮಕ್ಕಳನ್ನು ಓದಿಸುತ್ತಿದ್ದೇವೆ. ದೊಡ್ಡವಳದು ಡಿಗ್ರಿ ಆಗಿದ್ದು, ನನ್ನೊಂದಿಗೆ ಕೆಲಸ ಮಾಡಿಕೊಂಡಿದ್ದಾಳೆ. ಚಿಕ್ಕವಳು ಫಸ್ಟ್ ಇರ್ ಡಿಗ್ರಿ ಓದುತ್ತಿದ್ದಾಳೆ. ಹೈನುಗಾರಿಕೆಯಿಂದ ಬಂದ ಹಣದಿಂದಲೇ ಒಂದಿಷ್ಟು ಚಿನ್ನದೊಡವೆ ಮಾಡಿಸಿಕೊಂಡಿದ್ದೇನೆ. ಎರಡು ಬೈಕ್ ಖರೀದಿಸಿದ್ದೇವೆ. ಸುಮಾರು 26 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸುತ್ತಿದ್ದೇವೆ. ಹಸುಗಳಿಗಾಗಿ ದೊಡ್ಡ ಶೆಡ್ ನಿರ್ಮಾಣ ಮಾಡಿಕೊಂಡಿದ್ದೇವೆ ಎಂದು ಆಶಾ ತಿಳಿಸಿದ್ದಾರೆ.