ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದ ಪ್ರಿಯಾಂಕಾ, ತನ್ನ ಪ್ರಿಯಕರ ಡೇವಿಡ್ ಜೊತೆ ಬದುಕಲು ಆತ್ಮಹತ್ಯೆಯ ನಾಟಕವಾಡಿದ್ದಳು. ಆದರೆ, ಪೊಲೀಸರು 10 ಗಂಟೆಗಳಲ್ಲಿ ಆಕೆಯ ಪ್ಲಾನ್ ಬಯಲು ಮಾಡಿ, ಪತಿಯೊಂದಿಗೆ ಹೋಗಲು ನಿರಾಕರಿಸಿದ ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೌಟಂಕಿ ಪ್ರಿಯಾಂಕಾಳ ನಾಟಕವನ್ನು ಪೊಲೀಸರು 10 ಗಂಟೆಯಲ್ಲಿಯೇ ರಿವೀಲ್ ಮಾಡಿದ್ದರು. ಕೆರೆ ಬಳಿ ಪ್ರಿಯಾಂಕಾಳ ವಸ್ತುಗಳನ್ನು ನೋಡಿ ಆತಂಕಗೊಂಡಿದ್ದ ಪೋಷಕರು, ವಿಷಯ ತಿಳಿದಾಗ ಆಶ್ಚರ್ಯಗೊಂಡಿದ್ದರು.
25
ಪೊಲೀಸರ ಮುಂದೆ ಪ್ರಿಯಾಂಕಾ ಹಠ
ಕುಣಿಗಲ್‌ನಲ್ಲಿರುವ ಡೇವಿಡ್ ಮನೆಯಲ್ಲಿದ್ದ ಪ್ರಿಯಾಂಕಾಳನ್ನು ಪೊಲೀಸರು ಪತ್ತೆ ಮಾಡಿದ್ದರು. ಇಬ್ಬರನ್ನು ನೇರವಾಗಿ ಹಾಸನ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಬಳಿಕ ನಾನು ಮತ್ತೆ ಗಂಡನೊಂದಿಗೆ ಹೋಗಲ್ಲ ಎಂದು ಪೊಲೀಸರ ಮುಂದೆ ಪ್ರಿಯಾಂಕಾ ಹಠ ಹಿಡಿದಿದ್ದಾಳೆ.
35
ಡೇವಿಡ್ ಜೊತೆ ಬದುಕುವಾಸೆ
ಪತಿ ರುದ್ರೇಶ್ ಜೊತೆ ಸಂಸಾರ ನಡೆಸಲು ಇಷ್ಟವಿಲ್ಲದ ಕಾರಣ ಪ್ರಿಯಾಂಕಾ ಇಷ್ಟೆಲ್ಲಾ ನಾಟಕವಾಡಿದ್ದಳು. ತಾನು ಸತ್ತಿದ್ದೇನೆಂದು ಎಂದು ಬಿಂಬಿಸಿ ಮಧ್ಯಪ್ರದೇಶಕ್ಕೆ ತೆರಳಿ ಡೇವಿಡ್ ಜೊತೆ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಳು. ಆದ್ರೆ ಪ್ರಿಯಾಂಕಾಳ ಈ ಎಲ್ಲಾ ನಾಟಕವನ್ನು ಪೊಲೀಸರು ಬಯಲು ಮಾಡಿದ್ದರು.
ವಿಚಾರಣೆ ಬಳಿಕ ಪತಿ ಜೊತೆ ಹೋಗಲೊಪ್ಪದ ಪ್ರಿಯಾಂಕಾಳನ್ನ ಪೊಲೀಸರು ಬೇರೆ ದಾರಿ ಇಲ್ಲದೆ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇತ್ತ ಸತತ ಮೂರು ಗಂಟೆಗಳ ಕಾಲ ಪೊಲೀಸ್ ವಿಚಾರಣೆ ಎದುರಿಸಿದ ಡೇವಿಡ್, ಸೈಲೆಂಟ್ ಆಗಿ ಕುಣಿಗಲ್‌ಗೆ ಹೋಗಿದ್ದಾನೆ.
ಪ್ರಿಯಾಂಕಾ ಮತ್ತು ರುದ್ರೇಶ್ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಯೇ ಡೇವಿಡ್ ಮ್ಯಾನೇಜರ್ ಆಗಿದ್ದನು. ಮದುವೆಯಾಗಿ ಗಂಡನಿದ್ರೂ ಡೇವಿಡ್ ಜೊತೆಯಲ್ಲಿ ಪ್ರಿಯಾಂಕಾ ಅಕ್ರಮ ಸಂಬಂಧ ಹೊಂದಿದ್ದಳು. ಮಿಸ್ಸಿಂಗ್ ನಾಟಕವಾಡಿ ಡೇವಿಡ್ ಜೊತೆ ಜೀವನ ನಡೆಸಲು ಪ್ರಿಯಾಂಕಾ ಪ್ಲಾನ್ ಮಾಡಿಕೊಂಡಿದ್ದಳು. ಆದ್ರೆ ಇದೀಗ ಪ್ರಿಯಕರ ಮತ್ತು ಗಂಡನೂ ಇಲ್ಲದೇ ಸಾಂತ್ವಾನ ಕೇಂದ್ರ ಸೇರುವಂತಾಗಿದೆ.